ಮನೆ ಪ್ರವಾಸ ಚಳಿಗಾಲದ ಪ್ರವಾಸಕ್ಕೆ ಈ ಸುಂದರ ವಿದೇಶಿ ತಾಣಗಳು ಬಲು ಉತ್ತಮ

ಚಳಿಗಾಲದ ಪ್ರವಾಸಕ್ಕೆ ಈ ಸುಂದರ ವಿದೇಶಿ ತಾಣಗಳು ಬಲು ಉತ್ತಮ

0

ವಿದೇಶಿ ಪ್ರವಾಸ ಎಂಬುದು ಬಹುತೇಕರ ಕನಸು. ಅಂತೆಯೇ, ಕೆಲವೊಂದು ಋತುಗಳಲ್ಲಿ ಕೆಲವೊಂದು ತಾಣಗಳು ವಂಡರ್ಲ್ಯಾಂಡ್ ಆಗಿ ಪರಿವರ್ತಿತವಾಗುತ್ತವೆ. ಇಂತಹ ತಾಣಗಳು ಸಹಜವಾಗಿಯೇ ಪ್ರವಾಸದ ಖುಷಿಯನ್ನು ಹೆಚ್ಚು ಮಾಡುತ್ತವೆ. ಅದರಲ್ಲೂ ಕೆಲವೊಂದು ತಾಣಗಳು ಚಳಿಗಾಲದ ಪ್ರವಾಸಕ್ಕೂ ಸೂಕ್ತವಾಗಿವೆ. ಹೀಗೆ ಚಳಿಗಾಲದ ಪ್ರವಾಸಕ್ಕೆ ಅತ್ಯುತ್ತಮ ವಿದೇಶಿ ತಾಣಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಈ ಸುಂದರ ತಾಣಗಳ ಪ್ರವಾಸ ಸ್ಮರಣೀಯವಾಗಿಯೂ ಇರುತ್ತವೆ.

ಮಾಲ್ಡೀವ್ಸ್

ನಿಸ್ಸಂದೇಹವಾಗಿ ಮಾಲ್ಡೀವ್ಸ್ ಭಾರತೀಯರ ಅದ್ಭುತ ಪ್ರವಾಸಿ ತಾಣಗಳಲ್ಲಿ ಒಂದು. ಸಾಕಷ್ಟು ಮಂದಿ ತಮ್ಮ ರಜಾಕಾಲದ ಖುಷಿಯನ್ನು ಅನುಭವಿಸಲು ಆಯ್ಕೆ ಮಾಡಿಕೊಳ್ಳುವ ತಾಣಗಳಲ್ಲಿ ಮಾಲ್ಡೀವ್ಸ್ ಕೂಡಾ ಒಂದು. ಬಹುತೇಕ ಸೆಲೆಬ್ರಿಟಿಗಳು ಕೂಡಾ ಮಾಲ್ಡೀವ್’ಗೆ ಹೋಗಿ ಒಂದಷ್ಟು ದಿನ ಆನಂದದಿಂದ ಕಳೆಯುತ್ತಾರೆ. ಸುಂದರ ದ್ವೀಪಗಳು, ಅಪೂರ್ವ ಕಡಲ ತೀರಗಳು, ಐಷಾರಾಮಿ ರೆಸಾರ್ಟ್ಗಳು ಹೀಗೆ ಇಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಸಾಕಷ್ಟು ಅದ್ಭುತ ತಾಣಗಳಿವೆ. ಶ್ರೀಲಂಕಾ ಮತ್ತು ಭಾರತದ ನೈಋತ್ಯದಲ್ಲಿದೆ ಈ ಸುಂದರ ದ್ವೀಪ. ಇಲ್ಲಿ ಖುಷಿಗೇನೂ ಕೊರತೆ ಇರದು. ಎಲ್ಲರೂ ಬಲು ಆನಂದದಿಂದ ಕಳೆಯುವಂತಹ ಸಾಕಷ್ಟು ಸುಂದರ ಅವಕಾಶಗಳು ಇಲ್ಲಿವೆ. ಖುಷಿಯ ಚಟುವಟಿಕೆಗಳು ಇಲ್ಲಿ ಪ್ರವಾಸದ ಆನಂದವನ್ನೂ ಇಮ್ಮಡಿಯಾಗಿಸುತ್ತವೆ.

ಸಿಂಗಾಪುರ

ಪ್ರವಾಸಕ್ಕೆ ಯೋಗ್ಯವಾದ ಸುಂದರ ಅಂತಾರಾಷ್ಟ್ರೀಯ ತಾಣಗಳಲ್ಲಿ ಸಿಂಗಾಪುರ ಕೂಡಾ ಒಂದು. ಐಷಾರಾಮಿ ಜೀವನ, ಸುಂದರ ನಗರಗಳು, ವರ್ಣರಂಜಿತ ಸಂಸ್ಕೃತಿಯ ಮಿಶ್ರಣದೊಂದಿಗೆ ಸಿಂಗಾಪುರ ಗಮನ ಸೆಳೆಯುತ್ತದೆ. ಚಳಿಗಾಲದಲ್ಲಿ ಭೇಟಿ ನೀಡಬಹುದಾದಂತಹ ಸುಂದರ ದೇಶವಿದು. ಇಲ್ಲಿನ ಪ್ರವಾಸ ಮನಸ್ಸಿಗೆ ಬಲು ಆನಂದ ನೀಡುತ್ತದೆ. ಅಧಿಕೃತವಾಗಿ ರಿಪಬ್ಲಿಕ್ ಆಫ್ ಸಿಂಗಾಪುರ ಎಂದು ಈ ದೇಶವನ್ನು ಕರೆಯಲಾಗುತ್ತದೆ. ಆಗ್ನೇಯ ಏಷ್ಯಾದಲ್ಲಿರುವ ಸುಂದರ ದೇಶ ಮತ್ತು ನಗರವಿದು. ಏಷ್ಯಾದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವಂತಹ ತಾಣಗಳಲ್ಲಿ ಸಿಂಗಾಪುರ ಕೂಡಾ ಸೇರುತ್ತದೆ. ಇನ್ನು ಶಾಪಿಂಗ್ಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಅದ್ಭುತ ಮಾಲ್ಗಳು, ಆರ್ಚರ್ಡ್ ರಸ್ತೆಯಲ್ಲಿರುವ ವಿವಿಧ ಮಳಿಗೆಗಳು ಇಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿರುತ್ತವೆ. ಸೆಂಟೋಸಾ ದ್ವೀಪ, ಮೃಗಾಲಯ, ಬೊಟಾನಿಕ್ ಗಾರ್ಡನ್, ಮರೀನಾ ಬೇ ಸ್ಯಾಂಡ್ಸ್ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳೂ ಇಲ್ಲಿವೆ. ಇದೇ ಕಾರಣಕ್ಕೆ ಸಿಂಗಾಪುರ ಪ್ರಮುಖ ಪ್ರವಾಸಿ ತಾಣವಾಗಿಯೂ ರೂಪುಗೊಂಡಿದೆ.

ಪೆರು

ರತೀಯರು ಭೇಟಿ ನೀಡಬಹುದಾದಂತಹ ಇನ್ನೊಂದು ಸುಂದರ ದೇಶ ಎಂದರೆ ಅದು ಪೆರು. ಚಳಿಗಾಲದಲ್ಲಿ ಭೇಟಿ ನೀಡಲು ಪೆರು ಅತ್ಯುತ್ತಮ ತಾಣ. ಯಾಕೆಂದರೆ, ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ನೀವು ಮಚು ಪಿಚುದಲ್ಲಿ ಚಾರಣ ಮಾಡಬಹುದು, ಇಲ್ಲಿನ ಸಾಂಸ್ಕೃತಿಕ ಮತ್ತು ಆಹಾರದ ರುಚಿಯ ಅನುಭವವನ್ನೂ ಪಡೆಯಬಹುದು. ಇಲ್ಲಿನ ಸುಂದರ ಭೂದೃಶ್ಯಗಳು ಸಹಜವಾಗಿಯೇ ಮನಸ್ಸಿಗೆ ಆನಂದ ನೀಡುತ್ತವೆ. ಜೀವನದ ಎಲ್ಲಾ ಜಂಜಾಟ, ಒತ್ತಡವನ್ನು ಮರೆತು ಪ್ರವಾಸದ ಖುಷಿಯನ್ನು ಆನಂದಿಸಲು ಪೆರು ಕೂಡಾ ಹೇಳಿ ಮಾಡಿಸಿದಂತಹ ತಾಣ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಇಲ್ಲಿ ಬಲಗೊಳ್ಳುತ್ತಿದೆ. ಮೀನುಗಾರಿಕೆ, ಗಣಿಗಾರಿಕೆಯ ಜತೆಗೆ ಪ್ರವಾಸೋದ್ಯಮ ಇಲ್ಲಿನ ಆರ್ಥಿಕತೆಯ ಪ್ರಮುಖ ಮೂಲವೂ ಆಗಿದೆ.

ಫಿಜಿ

ಫಿಜಿ ಪ್ರವಾಸವೂ ಎಲ್ಲರಿಗೂ ಖುಷಿ ಕೊಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಹಚ್ಚ ಹಸಿರಿನ ಸುಂದರ ಕಾಡುಗಳು, ಸುಂದರ ಕಡಲತೀರಗಳು ಇಲ್ಲಿ ಖುಷಿ ನೀಡುತ್ತವೆ. ಇಲ್ಲಿನ ಸುಂದರ ಭೂದೃಶ್ಯಗಳು ಸಹಜವಾಗಿಯೇ ಮನಸ್ಸಿನಲ್ಲಿ ಖುಷಿಯ ಚಿತ್ತಾರ ಮೂಡಿಸುತ್ತವೆ. ಇದೇ ಕಾರಣದಿಂದ ಸಾಕಷ್ಟು ಮಂದಿ ಭಾರತೀಯರು ಫಿಜಿಯ ಪ್ರವಾಸ ಕೈಗೊಂಡು ಎಂಜಾಯ್ ಮಾಡುತ್ತಾರೆ.

ಫಿಜಿಯ ಜನಪ್ರಿಯ ಪ್ರದೇಶಗಳೆಂದರೆ ಕೋರಲ್ ಕೋಸ್ಟ್, ಡೆನಾರೌ ದ್ವೀಪ ಮತ್ತು ಮಮಾನುಕಾ ದ್ವೀಪಗಳು. ಭಾರತ ಸೇರಿದಂತೆ ಬೇರೆ ಬೇರೆ ದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಸ್ಕೂಬಾ ಡೈವಿಂಗ್ ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ನಿಮ್ಮ ಬಜೆಟ್ಗೆ ಅನುಗುಣವಾಗಿ ವಸತಿ ವ್ಯವಸ್ಥೆ ಕೂಡಾ ಇಲ್ಲಿದೆ.

ದುಬೈ

ಭಾರತದಿಂದ ಸಾಕಷ್ಟು ಮಂದಿ ಇಷ್ಟಪಡುವ ವಿದೇಶಿ ತಾಣಗಳಲ್ಲಿ ದುಬೈ ಕೂಡಾ ಒಂದು. ಸಾಕಷ್ಟು ಮಂದಿ ಭಾರತೀಯರು ಈ ಅರಬ್ ದೇಶದಲ್ಲಿ ಬದುಕು ಕೂಡಾ ಕಟ್ಟಿಕೊಂಡಿದ್ದಾರೆ. ಅಂತೆಯೇ, ಐಷಾರಾಮಿ ವ್ಯವಸ್ಥೆಗಳುಳ್ಳ ದುಬೈ ನಿಮಗೆ ಅದ್ಭುತ ಪ್ರವಾಸಿ ಅನುಭವವನ್ನು ನೀಡುತ್ತದೆ ಎಂಬುದು ಕೂಡಾ ಸತ್ಯ. ಇಲ್ಲಿನ ಅದ್ಭುತ ದೃಶ್ಯ ವೀಕ್ಷಣೆ, ಮಾಲ್’ಗಳು, ಖುಷಿ ಕೊಡುತ್ತವೆ. ಇದೇ ಕಾರಣದಿಂದ ದುಬೈ ಸದಾ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.

ಐಷಾರಾಮಿ ಆತಿಥ್ಯ, ಅತ್ಯಾಧುನಿಕ ಕಟ್ಟಡಗಳು, ವಿಶ್ವ ದರ್ಜೆಯ ಶಾಪಿಂಗ್ಗೆ ದುಬೈ ಹೆಸರುವಾಸಿ. ಅದೂ ಅಲ್ಲದೆ, ಇಲ್ಲಿ ಅನೇಕ ಪ್ರಸಿದ್ಧ ಐಷಾರಾಮಿ ಹೋಟೆಲ್ಗಳೂ ಇವೆ. ದುಬೈನಲ್ಲಿ ನಡೆಯುವ ವಾರ್ಷಿಕ ಶಾಪಿಂಗ್ ಉತ್ಸವ ಸಖತ್ ಫೇಮಸ್. ಅದ್ಭುತ ದೃಶ್ಯ ವೀಕ್ಷಣೆ, ಆಹಾರ, ಶಾಪಿಂಗ್ ಜತೆಗೆ ರೋಮಾಂಚಕ ಡೆಸರ್ಟ್ ಸಫಾರಿಯಂತಹ ಅನುಭವವನ್ನೂ ಇಲ್ಲಿ ಪಡೆಯಬಹುದು.

ಹಿಂದಿನ ಲೇಖನಡಿ.12 ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಮುಂದಿನ ಲೇಖನಹಲಾಲ್ ಮುಕ್ತ ದೀಪಾವಳಿ: ಅಸಮಾಧಾನ ಹೊರ ಹಾಕಿದ ಜಮೀರ್ ಅಹಮದ್ ಖಾನ್