ಬೆಂಗಳೂರು: ದೇಹದ ಪ್ರತಿಯೊಂದು ಅಂಗಕ್ಕೂ ಸೂಕ್ತವಾದ ರಕ್ತದ ಹರಿವು ಆರೋಗ್ಯಕರ ಕಾರ್ಯನಿರ್ವಹಣೆಗೆ ನಿರ್ಣಾಯಕವಾಗಿದೆ. ಹಾಗಾಗಿ ರಕ್ತ ಪರಿಚಲನೆ ಹೆಚ್ಚಿಸಲು ಈ ಕೆಳಗಿನ ಆಹಾರಗಳು ಸಹಾಯಕವಾಗಿವೆ.
ರಸಭರಿತವಾದ ದಾಳಿಂಬೆ ರುಚಿಕರವಾದದು ಮಾತ್ರವಲ್ಲದೆ ರೋಗ ನಿರೋಧಕಗಳು ಮತ್ತು ನೈಟ್ರೇಟ್ ಗಳಿಂದ ಕೂಡಿದೆ. ಇದು ನಿಮ್ಮ ರಕ್ತನಾಳಗಳನ್ನು ವಿಸ್ತರಿಸಲು ಸಹಾಯಕವಾಗಿದ್ದು, ರಕ್ತದ ಹರಿವಿನಲ್ಲಿ ಹೆಚ್ಚಳದ ಕಾರ್ಯ ಮಾಡುತ್ತದೆ. ಕೆಂಪು ಬಿಟ್ರೂಟ್ ನೈಟ್ರೇಟ್‌ಗಳ ಅದ್ಭುತ ಮೂಲವಾಗಿದ್ದು, ನಿಮ್ಮ ದೇಹಕ್ಕೆ ಬೇಕಾದ ನೈಟ್ರಿಕ್ ಆಕ್ಸೈಡ್ ಒದಗಸುತ್ತದೆ. ಇದು ನಿಮ್ಮ ರಕ್ತನಾಳಗಳನ್ನು ಸಡಿಲಗೊಳಿಸುವುರ ಜತೆಗೆ ಸುಧಾರಿತ ರಕ್ತಪರಿಚಲನೆಗೆ ಕಾರಣವಾಗುತ್ತದೆ.
ಪಾಲಕನಂತಹ ಸೊಪ್ಪುಗಳು ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ನೈಟ್ರೇಟ್‌ಗಳಿಂದ ಕೂಡಿದೆ. ಈ ನೈಟ್ರೇಟ್‌ಗಳು ನಿಮ್ಮ ರಕ್ತನಾಳಗಳಿಗೆ ಉತ್ತೇಜನ ನೀಡಿ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುತ್ತವೆ. ಅಲಿಸಿನ್ ಸೇರಿದಂತೆ ಸಲ್ಫರ್ ಸಂಯುಕ್ತಗಳನ್ನು ಹೊಂದಿರುವ ಬೆಳ್ಳುಳ್ಳಿ ರೋಗ ನಿರೋಧಕಗಳೊಂದಿಗೆ ತುಂಬಿರುತ್ತವೆ. ಇದು ಹೃದಯದ ಆರೋಗ್ಯ ಮತ್ತು ರಕ್ತಪರಿಚಲನೆಯನ್ನು ಬೆಂಬಲಿಸುತ್ತದೆ.
ದಾಲ್ಚಿನ್ನಿಯು ಆಹಾರಕ್ಕೆ ಆಹ್ಲಾದಕರ ಪರಿಮಳವನ್ನು ಸೇರಿಸುವುದರ ಜೊತೆಗೆ, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ರಕ್ತನಾಳಗಳನ್ನು ಇತರ ಒತ್ತಡದಿಂದ ರಕ್ಷಿಸುವುದರ ಜತೆಗೆ ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ರಕ್ತಪರಿಚಲನೆಗೆ ಸಹಾಯಕವಾಗಿದೆ.