ಮನೆ ಯೋಗಾಸನ ಬೆನ್ನು ನೋವಿಗೆ ಈ ಯೋಗಾಸನಗಳು ಸಹಕಾರಿ

ಬೆನ್ನು ನೋವಿಗೆ ಈ ಯೋಗಾಸನಗಳು ಸಹಕಾರಿ

0

ಕೊರೊನಾದ ರೂಪಾಂತರ ತಳಿ ಓಮ್ರಿಕಾನ್ ನಿಂದಾಗಿ ಮತ್ತೆ ಕಚೇರಿ ಬಿಟ್ಟು ಮನೆಯಲ್ಲೇ ಕೆಲಸ ಮಾಡುವಂತಹ ಸಂದರ್ಭ ನಿರ್ಮಾಣವಾಗುವಂತಹ ಸಾಧ್ಯತೆಗಳು ಕಂಡುಬರುತ್ತಲಿದೆ. ಈಗಾಗಲೇ ಕಚೇರಿಗೆ ತೆರಳಿ ಸ್ವಲ್ಪ ಉಲ್ಲಾಸಿತರಾಗಿದ್ದ ಜನರು ಈಗ ಮತ್ತೆ ಕಚೇರಿಯಿಂದ ಮನೆಯಲ್ಲೇ ಕುಳಿತುಕೊಂಡು ಹೇಗೆ ಕೆಲಸ ಮಾಡುವುದು ಎನ್ನುವ ಚಿಂತೆಯಲ್ಲಿ ತೊಡಗಿದ್ದಾರೆ.

ಇಂಗ್ಲೆಂಡ್ ಹಾಗೂ ಇತರ ಕೆಲವೊಂದು ಯುರೋಪ್ ದೇಶಗಳಲ್ಲಿ ಓಮ್ರಿಕಾನ್ ತುಂಬಾ ವೇಗವಾಗಿ ಹರಡುತ್ತಲಿದ್ದು, ಭಾರತದಲ್ಲಿ ಕೂಡ ಇದು ಹಬ್ಬುತ್ತಲಿದೆ. ಮನೆಯಲ್ಲೇ ಕೆಲಸ ಮಾಡುವ ವೇಳೆ ಹೆಚ್ಚಿನವರಿಗೆ ಸರಿಯಾದ ಕುರ್ಚಿ, ಟೇಬಲ್ ಇತ್ಯಾದಿಗಳ ವ್ಯವಸ್ಥೆಯು ಇಲ್ಲದೆ ದೇಹದ ಮೇಲೆ ತುಂಬಾ ತೊಂದರೆಯಾಗಿದೆ.

ಹಾಸಿಗೆ, ಸೋಪಾ ಹೀಗೆ ಅಲ್ಲಲ್ಲಿ ಮಲಗಿಕೊಂಡು ಲ್ಯಾಪ್ ಟಾಪ್ ನಿಂದ ಕೆಲಸ ಮಾಡುವ ಜನರು ಹೆಚ್ಚಾಗುತ್ತಿದ್ದಾರೆ. ಇದರಿಂದ ಬೆನ್ನು ನೋವು, ಕುತ್ತಿಗೆ ನೋವು, ಗಂಟು ನೋವು ಇತ್ಯಾದಿಗಳು ಕಂಡುಬರುತ್ತವೆ.

• ದಿನವಿಡಿ ಕುಳಿತುಕೊಂಡು ಕೆಲಸ ಮಾಡಿದರೆ ಅದರಿಂದ ಕೆಟ್ಟ ಭಂಗಿಯ ಪರಿಣಾಮವಾಗಿ ಬೆನ್ನು ಹಾಗೂ ಕುತ್ತಿಗೆ ಭಾಗದಲ್ಲಿ ನೋವು ಕಂಟುಬರುವುದು. ಕಚೇರಿ ಹಾಗೂ ಮನೆಯ ಕೆಲಸಗಳು ಇನ್ನಷ್ಟು ಒತ್ತಡವನ್ನು ಹಾಕುವುದು. ಇಂತಹ ಬೆನ್ನು ನೋವು ನಿವಾರಣೆ ಮಾಡಲು ಕೆಲವೊಂದು ವಿಧಾನಗಳು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

• ಬೆನ್ನಿನ ಕೆಳಭಾಗದ ನೋವು, ಗಂಟು ನೋವು, ರಕ್ತನಾಳ ಉಬ್ಬುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಕೆಲವೊಂದು ವ್ಯಾಯಾಮಗಳನ್ನು ಮಾಡಬಹುದು. ಇದನ್ನು ಬೆಳಗ್ಗೆ ಅಥವಾ ರಾತ್ರಿ ಮಲಗುವ ಮೊದಲು ಮಾಡಿದರೆ ಅದು ತುಂಬಾ ಪರಿಣಾಮಕಾರಿ ಎಂದು ಪೋಷಕಾಂಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ…

ಬೆನ್ನು ನೋವಿಗೆ ಸುಲಭ ಯೋಗಾಸನಗಳು

ಬೆನ್ನು ನೋವು ನಿವಾರಣೆ ಮಾಡಿ ದೇಹಕ್ಕೆ ಆರಾಮ ಮತ್ತು ಬಲ ನೀಡಲು ಕೆಲವು ಪರಿಣಾಮಕಾರಿ ಯೋಗಾಸನಗಳನ್ನು ಮಾಡಬಹುದು. ಅವುಗಳ ಬಗ್ಗೆ ತಿಳಿಯಿರಿ.

ಮಾರ್ಜಾಲ ಗೋ ಆಸನ

• ಈ ಯೋಗಾಸನವನ್ನು ಅಭ್ಯಾಸ ಮಾಡಿದರೆ ಅದರಿಂದ ಬೆನ್ನುಹುರಿ, ಭುಜ, ಕುತ್ತಿಗೆ ಮತ್ತು ಮುಂಡದ ಭಾಗದಲ್ಲಿನ ಸ್ನಾಯುಗಳನ್ನು ಎಳೆಯುವುದು. ಈ ಆಸನವನ್ನು ಈ ರೀತಿಯಾಗಿ ಮಾಡಿ.

• ನೆಲದ ಮೇಲೆ ಮೊಣಕಾಲು ಮತ್ತು ಅಂಗೈಯಿಂದ ನಿಂತುಕೊಳ್ಳಿ. ಮಣಿಕಟ್ಟನ್ನು ಭುಜದ ಕೆಳಗೆ ಮತ್ತು ಮೊಣಕಾಲು ಸೊಂಟದ ಕೆಳಗೆ ಇರಲಿ.

• ತಲೆಯನ್ನು ಎತ್ತುತ್ತಾ ಉಸಿರಾಡಿ ಮತ್ತು ಹೊಟ್ಟೆಯ ಭಾಗವನ್ನು ಕೆಳಗೆ ತನ್ನಿ.

• ಕೆಳಗೆ ನೋಡುತ್ತಿರುವಂತೆ ಉಸಿರನ್ನು ಬಿಡಿ ಮತ್ತು ಗಲ್ಲವು ಎದೆಯ ಭಾಗದಲ್ಲಿರಲಿ, ಬೆನ್ನುಹುರಿಯನ್ನು ಹಾಗೆ ಬಿಲ್ಲಿನ ಆಕಾರಕ್ಕೆ ತನ್ನಿ.

• ಇದನ್ನು ನೀವು ಒಂದು ನಿಮಿಷ ಕಾಲ ಮಾಡಿ.

ಕೆಳಮುಖ ಶ್ವಾನಾಸನ

ಮುಂದಕ್ಕೆ ಬಾಗಿದರೆ ಅದರಿಂದ ಬೆನ್ನು ನೋವು ನಿವಾರಣೆ ಆಗುವುದು ಮತ್ತು ಸಂಪೂರ್ಣ ದೇಹದ ಬಲ ಹಾಗೂ ಸಮತೋಲನವು ಉತ್ತಮವಾಗುವುದು.

ಆಸನ ಮಾಡುವ ವಿಧಾನ

• ಅಂಗೈ ಮತ್ತು ಮೊಣಕಾಲಿನಲ್ಲಿ ನಿಲ್ಲಿ.

• ತಲೆಯನ್ನು ನೆಲದ ಭಾಗಕ್ಕೆ ಒತ್ತುತ್ತಾ, ಮೊಣಕಾಲನ್ನು ಎತ್ತಿ ಮತ್ತು ಕುಳಿತುಕೊಳ್ಳುವ ಮೂಳೆಯನ್ನು ಕೂಡ.

• ಬೆನ್ನುಹುರಿ ಮತ್ತು ಬಲಮೂಳೆಯು ಎಳೆಯಲ್ಪಡಲಿ.

• ಕೈಗಳನ್ನು ಸರಿಯಾಗಿ ನೆಲದ ಮೇಲೆ ಊರಿಕೊಳ್ಳಿ ಮತ್ತು ಹಾಗೆ ಹಿಂಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ.

• ತಲೆಯು ಮೇಲಿನ ತೋಳುಗಳಿಗೆ ಸರಿಯಾಗಿದೆಯಾ ಎಂದು ನೋಡಿಕೊಳ್ಳಿ ಅಥವಾ ಗಲ್ಲವು ಸ್ವಲ್ಪ ಹಿಡಿದಿಟ್ಟುಕೊಳ್ಳಿ.

• ಒಂದು ನಿಮಿಷ ಕಾಲ ನೀವು ಈ ಭಂಗಿಯಲ್ಲಿ ಇರಬೇಕು.

ಕೋಬ್ರಾ ಭಂಗಿ

ಈ ಯೋಗಾಸನವು ನಿಮ್ಮ ಹೊಟ್ಟೆ, ಎದೆ ಮತ್ತು ಭುಜಗಳನ್ನು ಒತ್ತುವುದು. ಇದು ಬೆನ್ನುಮೂಳೆಯನ್ನು ಬಲಪಡಿಸುವುದು ಮತ್ತು ಒತ್ತಡ ಹಾಗೂ ಬಳಲಿಕೆ ಕಡಿಮೆ ಮಾಡಿ ಬೆನ್ನು ನೋವು ಕಡಿಮೆ ಮಾಡುವುದು.

ಆಸನ ಮಾಡುವ ವಿಧಾನಗಳು

• ಹೊಟ್ಟೆಯ ಮೇಲೆ ಮಲಗಿ

• ಭುಜಗಳ ಕೆಳಭಾಗದಲ್ಲಿ ಕೈಗಳನ್ನು ಇಡಿ ಮತ್ತು ಬೆರಳುಗಳು ಮುಂದಕ್ಕೆ ಮತ್ತು ಕೈಗಳು ಎದೆಯ ಭಾಗದಲ್ಲಿ ಬಿಗಿಯಾಗಿ ಇರಲಿ.

• ಕೈಗಳನ್ನು ಹಾಗೆ ಒತ್ತುತ್ತಾ ಉಸಿರಾಡಿ ಮತ್ತು ನಿಧಾನವಾಗಿ ತಲೆ, ಎದೆ ಮತ್ತು ಭುಜವನ್ನು ಎತ್ತಿ.

• ಉಸಿರನ್ನು ಬಿಡಿ ಮತ್ತು ನೆಲದ ಮೇಲೆ ಮಲಗಿ.

• ಕೈಗಳನ್ನು ಹಾಗೆ ದೇಹದ ಬದಿಯಲ್ಲಿ ಇಡಿ ಮತ್ತು ತಲೆಗೆ ಆರಾಮ ನೀಡಿ.

• ಈಗ ಸೊಂಟವನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ತಿರುಗಿಸಿ.

• ಇದರಿಂದ ಬೆನ್ನಿನ ಭಾಗದಲ್ಲಿ ಇರುವಂತಹ ಒತ್ತಡವು ಕಡಿಮೆ ಆಗುವುದು.