ಹಾಸನ : ಸುರಕ್ಷತೆಗಾಗಿ ಅಳವಡಿಸಲಾಗಿದ್ದ 3 ಸಿಸಿ ಕ್ಯಾಮೆರಾಗಳನ್ನು ಕಳ್ಳನೊಬ್ಬ ಕದ್ದೊಯ್ದ ಪ್ರಕರಣ ಹೊಳೆನರಸೀಪುರದ ಪೇಟೆ ಬೀದಿಯಲ್ಲಿ ನಡೆದಿದೆ.
ಪೊಲೀಸರ ಸೂಚನೆ ಮೇರೆಗೆ ಪೇಟೆ ಬೀದಿಯಲ್ಲಿರುವ ಅಂಗಡಿಗಳಿಗೆ ಸಿಸಿಟಿವಿಗಳನ್ನು ಮಾಲೀಕರು ಅಳವಡಿಸಿದ್ದರು. ಇಂದು (ಶುಕ್ರವಾರ) ಕಳ್ಳ, ಸಿಸಿ ಕ್ಯಾಮೆರಾಗಳನ್ನು ಕದ್ದೊಯ್ದಿದ್ದಾನೆ. ಕಳ್ಳ ಸಿಸಿ ಕ್ಯಾಮೆರಾಗಳನ್ನು ಕೀಳುವ ದೃಶ್ಯ ಮತ್ತೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














