ಕುಂದಾಪುರ: ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಆ.17ರ ಶನಿವಾರ ವರದಿಯಾಗಿದೆ.
ಕೆಲ ತಿಂಗಳ ಹಿಂದಷ್ಟೇ 7 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದ ಈ ದೇವಸ್ಥಾನದಲ್ಲಿ ಅಂದಾಜು ಸುಮಾರು 40 ಸಾವಿರಕ್ಕೂ ಅಧಿಕ ನಗದು ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ.
ಬಾಗಿಲ ಚಿಲಕದ ಸ್ಕ್ರೂ ತೆಗೆದು ಸುತ್ತು ಪೌಳಿ ಪ್ರವೇಶಿಸಿದ ಕಳ್ಳ, ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸಂಗ್ರಹಿಸಿದ ಹಣವನ್ನು ಎಗರಿಸಿದ್ದಾನೆ.
ಚಪ್ಪಲಿ ಹಾಕಿಕೊಂಡೆ ಕೈ ಮುಗಿದು ಬಳಿಕ ಕಳ್ಳತನ ಕೃತ್ಯ ನಡೆಸಿದ್ದು, ಕಾಣಿಕೆ ಡಬ್ಬಿ ಒಡೆದು ಹಣ ಎಗರಿಸಿದ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Saval TV on YouTube