ಮನೆ ಅಪರಾಧ ದೇವಸ್ಥಾನದ ಹುಂಡಿ ದೋಚಿದ ಕಳ್ಳರು

ದೇವಸ್ಥಾನದ ಹುಂಡಿ ದೋಚಿದ ಕಳ್ಳರು

0

ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಅಂಕಹಳ್ಳಿ ಗ್ರಾಮದ ನಡುವೆ ರಸ್ತೆಯ ಬದಿಯಲ್ಲಿರುವ ಬೊಮ್ಮಲಾಪುರ ಪಟ್ಟಲದಮ್ಮ ದೇವಸ್ಥಾನದ ಎರಡು ಹುಂಡಿಗಳನ್ನು ಹೊಡೆದು ಕಳ್ಳರು ಹಣ ದೋಚಿರುವ ಘಟನೆ ನಡೆದಿದೆ.

ದೇವಸ್ಥಾನದ ಬೀಗ ಒಡೆದ ಕಳ್ಳರು ಎರಡು ಹುಂಡಿಯಲ್ಲಿ ಚಿಕ್ಕ ಹುಂಡಿಯನ್ನು ದೇವಸ್ಥಾನದಲ್ಲಿ ಒಡೆದು ದೊಡ್ಡ ಹುಂಡಿಯನ್ನು ಸ್ವಲ್ಪ ದೂರ ತೆಗೆದುಕೊಂಡು ಹೋಗಿ ಒಡೆದಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ಮಾಡಿರುವ ಬಗ್ಗೆ ಸ್ಥಳೀಯರು ಆರೊಪಿಸಿದ್ದಾರೆ. ವಿಚಾರ ತಿಳಿದು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ, ಎಎಸ್‌ಐ ಸಾಹೇಬ್ ಗೌಡ ಪ್ರಕರಣ ದಾಖಲಿಸಿಕೊಂಡು ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.