ಮನೆ ಆರೋಗ್ಯ ಸೇಬು ಹಣ್ಣಿನಷ್ಟೇ ಆರೋಗ್ಯಕಾರಿ ಈ ಸೀಬೆಹಣ್ಣು…

ಸೇಬು ಹಣ್ಣಿನಷ್ಟೇ ಆರೋಗ್ಯಕಾರಿ ಈ ಸೀಬೆಹಣ್ಣು…

0

ಚಳಿಗಾಲದಲ್ಲಿ ಸೀಬೆಹಣ್ಣು ಹೆಚ್ಚಾಗಿ ಸಿಗುವುದರಿಂದ, ಇದನ್ನು ಸೀಸನಲ್ ಹಣ್ಣು ಎಂದು ಕರೆಯಬಹುದು. ತನ್ನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್ ಗಳು, ಖನಿಜಾಂಶಗಳು ಹಾಗೂ ಹಲವು ಬಗೆಯ ಪೌಷ್ಟಿಕ ಸತ್ವಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹಲವು ಬಾರಿ ಆರೋಗ್ಯ ತಜ್ಞರು ಕೂಡ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಪ್ರಮುಖವಾಗಿ ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಪ್ರಮಾಣದಲ್ಲಿ ಸಿಗುವು ದರಿಂದ, ಈ ಹಣ್ಣನ್ನು ಇತರೆ ಬಗೆಯ ಸಿಟ್ರಸ್ ಹಣ್ಣುಗಳಿಗೆ ಹೋಲಿಸಿ ನೋಡಿದರೆ, ಉದಾಹರಣೆಗೆ ಕಿತ್ತಳೆ, ಮೋಸಂಬಿ, ನಿಂಬೆಹಣ್ಣುಗಳಿಗಿಂತಲೂ ಮಿಗಿಲಾಗಿ ಇದರಲ್ಲಿ ವಿಟಮಿನ್ ಸಿ ಅಂಶ ಕಂಡು ಬರುತ್ತದೆ.

ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ರಕ್ತದಲ್ಲಿ ಬಿಳಿರಕ್ತ ಕಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ ಬಡವರ ಸೇಬು ಎಂದೇ ಕರೆಯಲಾಗುವ ಈ ಸೀಬೆ ಹಣ್ಣಿನಲ್ಲಿ ಏನೆಲ್ಲಾ ಪ್ರಯೋಜನಗಳು ಅಡಗಿದೆ ಎನ್ನುವುದರ ಬಗ್ಗೆ ನೋಡೋಣ..

ಕಡಿಮೆ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ

• ಈ ಹಣ್ಣುಗಳಲ್ಲಿ, ಮೊದಲೇ ಹೇಳಿದ ಹಾಗೆ ಪೌಷ್ಟಿಕಾಂಶಗಳ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ, ಕ್ಯಾಲೋರಿ ಅಂಶಗಳು ಮಾತ್ರ ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ.

• ಹೀಗಾಗಿ ಸ್ಲಿಮ್ ಆಗಬೇಕೆನ್ನುವವರು ಅಂದರೆ ಡಯಟಿಂಗ್ ಲಿಸ್ಟ್ ನಲ್ಲಿ ಇರುವವರು ತಮ್ಮ ಡಯೆಟ್ ನಲ್ಲಿ ಈ ಹಣ್ಣನ್ನು ಸೇರಿಸಿ ಕೊಳ್ಳಬಹುದು.

ರೋಗನಿರೋಧಕ ಶಕ್ತಿ ವೃದ್ಧಿಗೆ

• ಮೊದಲೇ ಹೇಳಿದ ಹಾಗೆ, ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ.

• ಹೀಗಾಗಿ ಚಳಿಗಾಲದ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡು ವುದರಿಂದ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಸೇವಿಸಬಹುದು.

• ಇಲ್ಲಾಂದ್ರೆ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದರಿಂದ, ಕೂಡ ಆಂತರಿಕವಾಗಿ ದೇಹದ ರೋಗನಿರೋಧಕ ಶಕ್ತಿಯ ವೃದ್ಧಿಯಾಗುತ್ತದೆ.

ಮಧುಮೇಹ ಕಾಯಿಲೆ ಇರುವವರಿಗೆ

• ಸೀಬೆ ಹಣ್ಣಿನಲ್ಲಿ ನಿಸರ್ಗದತ್ತವಾದ ಸಕ್ಕರೆ ಅಂಶ ಕಂಡು ಬರು ವುದರಿಂದ, ಈಗಾಗಲೇ ಸಕ್ಕರೆ ಕಾಯಿಲೆ ಇರುವವರು ಮಿತವಾಗಿ ಸೇವನೆ ಮಾಡಬಹುದು. ಪ್ರಮುಖವಾಗಿ ಈ ಹಣ್ಣಿನಲ್ಲಿ ನಾರಿ ನಾಂಶ ಹೆಚ್ಚಾಗಿ ಕಂಡು ಬರುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ರಕ್ತದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

• ಜೊತೆಗೆ ದೇಹದ ಯಕೃತ್ ಭಾಗ ಅಚ್ಚುಕಟ್ಟಾಗಿ ಕಾರ್ಯ ನಿರ್ವ ಹಿಸುವಂತೆ ಮಾಡುವುದರ ಮೂಲಕ, ರಕ್ತದಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆಯಾಂಶ ಏರುಪೇರು ಉಂಟಾಗ ದಂತೆ ಮತ್ತು ಮಧುಮೇಹ ಸಮಸ್ಯೆ ಹೆಚ್ಚಾಗದಂತೆ, ಈ ಹಣ್ಣು ಅತ್ಯುತ್ತಮ ವಾಗಿ ನಿರ್ವಹಣೆ ಮಾಡುತ್ತದೆ.

ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು

• ನಿಮಗೆ ಗೊತ್ತಿರಲಿ, ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಅಂಶ ಇರುವ ಹಣ್ಣು-ತರಕಾರಿಗಳು ಅಧಿಕ ರಕ್ತದೊತ್ತಡ ಕಾಯಿಲೆ ಇರುವ ರೋಗಿಗಳಿಗೆ ಬಹಳ ಒಳ್ಳೆಯದು.

• ಪ್ರಮುಖವಾಗಿ ಇವುಗಳು ದೇಹದಲ್ಲಿ ಶೇಖರಣೆಗೊಂಡಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ಅತ್ಯಂತ ಪರಿಣಾಮಕಾರಿಯಾಗಿ, ನಿಯಂತ್ರಣದಲ್ಲಿಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

• ಒಂದು ವೇಳೆ, ನಿಮಗೂ ಕೂಡ, ಅಧಿಕ ರಕ್ತದೊತ್ತಡದ ಸಮಸ್ಯೆ ಗಳಿದ್ದರೆ, ಮಿತವಾಗಿ ಸೀಬೆ ಹಣ್ಣು ತಿನ್ನುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.

• ಯಾಕೆಂದ್ರೆ ಈ ಹಣ್ಣಿನಲ್ಲಿ ಪೊಟ್ಯಾಶಿ ಯಂ ಅಂಶ ಹೇರಳವಾಗಿ ಸಿಗುವುದರಿಂದ, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ಆದಷ್ಟು ಕೆಂಪು ಬಣ್ಣದ ಸೀಬೆ ಹಣ್ಣನ್ನು ಸೇವಿಸಿ

• ನಿಮಗೆ ಗೊತ್ತಿರಲಿ, ಬಿಳಿ ಬಣ್ಣದ ಸೀಬೆ ಹಣ್ಣಿಗಿಂತಲೂ, ಕೆಂಪಗೆ ಇರುವ ಸೀಬೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು.

• ಇದರ ಹಿಂದಿನ ಆರೋಗ್ಯದ ಗುಟ್ಟು ಏನೆಂದರೆ, ಕೆಂಪು ಬಣ್ಣದ ಸೀಬೆ ಹಣ್ಣಿನಲ್ಲಿ ಟೊಮೆಟೊ ಹಣ್ಣಿನಲ್ಲಿರುವ ಇರುವ ಹಾಗೆ ಲೈಕೋಪಿನ್ ಎನ್ನುವ ಆರೋಗ್ಯಕಾರಿ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ.

• ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ, ದೇಹದ ತ್ವಚೆ ಯನ್ನು ರಕ್ಷಣೆ ಮಾಡುವುದು ಮಾತ್ರವಲ್ಲದೆ, ಚಳಿಗಾಲ ದಲ್ಲಿ ತ್ವಚೆಯ ಸಮಸ್ಯೆ ಗಳು ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತದೆ.