ವ್ಯಾಯಾಮದಲ್ಲಿ ಹಲವಾರು ವಿಧಗಳಿವೆ. ನಮ್ಮ ದೇಹದ ಒಂದೊಂದು ಭಾಗದ ಸದೃಢತೆಗೆ ನಾವು ವಿವಿಧ ವ್ಯಾಯಾಮಗಳನ್ನು ಅನುಸರಿಸಬಹುದು. ಕಾಲುಗಳ ಸದೃಢತೆಗೆ ಕೆಲವು ವ್ಯಾಯಾಮಗಳು ಅಗತ್ಯ. ಅದರ ಮಾಹಿತಿ ಇಲ್ಲಿದೆ.
ಎರಡು ವ್ಯಾಯಾಮಗಳು ನಿಮ್ಮ ದೇಹದ ತೂಕದ ನಿರ್ವಹಣೆಗೆ ಮಾತ್ರವಲ್ಲದೆ ನಿಮ್ಮ ಕಾಲುಗಳಲ್ಲಿ ಹಾಗೂ ಸೊಂಟದ ಭಾಗದಲ್ಲಿ ಕಂಡುಬರುವ ಮಾಂಸಖಂಡಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವಲ್ಲಿ ಹೆಚ್ಚಿನ ಪಾತ್ರ ಬೀರುತ್ತದೆ. ಈ ವ್ಯಾಯಾಮಗಳಿಂದ ನಿಮ್ಮ ದೈಹಿಕ ಸದೃಢತೆ ಕಾಪಾಡಿಕೊಂಡತ್ತಾಗುತ್ತದೆ. ಯಾರು ಬೇಕಾದರೂ ಸುಲಭವಾಗಿ ಈ ವ್ಯಾಯಾಮಗಳನ್ನು ಮಾಡಬಹುದು.
ನೀವು ಹೊಸದಾಗಿ ವ್ಯಾಯಾಮ ಮಾಡಲು ಪ್ರಾರಂಭ ಮಾಡಿದ್ದರೆ, ನಿಮಗೆ squats ಹೆಚ್ಚು ಸುಲಭ ಎಂದು ಹೇಳಬಹುದು. ಏಕೆಂದರೆ ಇದು ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಸಾಕಷ್ಟು ಹೊಂದಿಕೊಂಡಿರುತ್ತದೆ. ಬೇರೆ ಬೇರೆ ಕೆಲಸಗಳನ್ನು ನಾವು ಸುಲಭವಾಗಿ ಮಾಡುವುದರಿಂದ ಈ ವ್ಯಾಯಾಮವನ್ನು ಸಹ ಅಷ್ಟೇ ಸುಲಭವಾಗಿ ಮಾಡಬಹುದು. ಕೆಲವೊಮ್ಮೆ ಸಣ್ಣ ಸಣ್ಣ ಭಾರ ಎತ್ತುವುದು ಸಹ ಈ ವ್ಯಾಯಾಮಕ್ಕೆ ಹೊಂದಿಕೊಳ್ಳುವ ಹಾಗಿರುತ್ತದೆ. ಆದರೆ Lunges ಹಾಗಲ್ಲ. ನಿಮ್ಮ ಸಂಪೂರ್ಣ ದೇಹದ ತೂಕವನ್ನು ಕೇವಲ ಒಂದು ಕಾಲಿನ ಮೇಲೆ ನೀವು ಸಮತೋಲನ ಮಾಡಬೇಕು. ಆರಂಭದಲ್ಲಿ ವ್ಯಾಯಾಮ ಮಾಡುವವರಿಗೆ ಇದು ಸ್ವಲ್ಪ ಕಷ್ಟವೆನಿಸಬಹುದು ಮಾಂಸಖಂಡಗಳ ಸೆಳೆತ ಕಂಡುಬರಬಹುದು ಅಥವಾ ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲು ಹೆಚ್ಚು ಅನುಭವ ಪಡೆದು ನಂತರ ಈ ವ್ಯಾಯಾಮ ಮಾಡಲು ಪ್ರಾರಂಭ ಮಾಡಿ.
ಇದು ಒಬ್ಬರ ಅಭಿಪ್ರಾಯಕ್ಕೆ ಬಿಟ್ಟ ವಿಷಯ ಆಗಿರುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಇರುವವರು ಒಂದು ಬಗೆಯ ಸುಲಭವಾದ ವ್ಯಾಯಾಮವನ್ನು ಅನುಸರಿಸಲು ಮುಂದಾದರೆ, ಕಷ್ಟವಾದರೂ ಪರವಾಗಿಲ್ಲ ಎನ್ನುವವರು Lunges ವ್ಯಾಯಾಮವನ್ನು ಮಾಡಲು ಮುಂದಾಗುತ್ತಾರೆ. Squats ಪ್ರಮುಖವಾಗಿ ನಿಮ್ಮ ದೇಹದ ಮೇಲ್ಭಾಗದ ಮಾಂಸಖಂಡಗಳನ್ನು ಸಮತೋಲನ ಮಾಡಲು ಮುಂದಾದರೆ, Lunges ನಿಮ್ಮ ಕೆಳಭಾಗದ ದೇಹದ ಅಂದರೆ ಕಾಲುಗಳು ಮಂಡಿಗಳು ತೊಡೆಗಳನ್ನು ಹೆಚ್ಚಿಸ ಸದೃಢಪಡಿಸುತ್ತದೆ. ಅಷ್ಟೇ ಅಲ್ಲದೆ ಕೆಲವು ತಜ್ಞರ ಪ್ರಕಾರ ಈ ವ್ಯಾಯಾಮ ಎರಡು ಕಾಲುಗಳ ಸಮತೋಲನವನ್ನು ಕಾಪಾಡುತ್ತದೆ. ಒಂದೊಂದು ಬಗೆಯ ವ್ಯಾಯಾಮಕ್ಕೆ ಒಬ್ಬಬ್ಬರು ಒಂದೊಂದು ರೀತಿಯ ಬಲಪ್ರಯೋಗ ಮಾಡಬೇಕು.
ದಿನ ತಪ್ಪಿ ದಿನ ಇವುಗಳನ್ನು ಮಾಡುತ್ತಾ ಹೋದರೆ ನಿಮ್ಮ ಮೇಲ್ಭಾಗದ ದೇಹ ಮತ್ತು ಕೆಳಭಾಗದ ದೇಹ ಸಂಪೂರ್ಣವಾಗಿ ಸದೃಢವಾಗುತ್ತದೆ. ನೀವು ಆರಂಭಿಕರಾಗಿದ್ದಲ್ಲಿ ಮೊದಲು squats ವ್ಯಾಯಾಮವನ್ನು ಮಾಡಲು ಶುರು ಮಾಡಿ. ನಂತರ ಅನುಭವ ಪಡೆದ ಮೇಲೆ Lunges ಪ್ರಾರಂಭ ಮಾಡಿ.