ಮನೆ ರಾಷ್ಟ್ರೀಯ ಇದು ದೂರದರ್ಶಿ ಬಜೆಟ್ – ಸಂಸದ ತೇಜಸ್ವಿ ಸೂರ್ಯ

ಇದು ದೂರದರ್ಶಿ ಬಜೆಟ್ – ಸಂಸದ ತೇಜಸ್ವಿ ಸೂರ್ಯ

0

ನವದೆಹಲಿ : ಈ ಬಜೆಟ್ ದೂರದರ್ಶಿಯಾಗಿದೆ. ಭಾರತವನ್ನು ವಿಕಸಿತ ಭಾರತ ಮಾಡಲು ಬೇಕಾದ ಫೌಂಡೇಶನ್ ಹಾಕಲಾಗಿದೆ ಎಂದು ಕೇಂದ್ರ ಬಜೆಟ್ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರುವ ದಶಕಗಳಲ್ಲಿ ಎಐ ಸೇರಿದಂತೆ ಬರುವ ತಾಂತ್ರಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಕರ್ನಾಟಕದ ಗೋಡಂಬಿ ಬೆಳಗಾರರಿಗೆ ಅನುಕೂಲವಾಗಿದೆ. ಜವಳಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದೆ, ಇದು ಕರ್ನಾಟಕಕ್ಕೆ ಹೆಚ್ಚು ಸಹಾಯವಾಗಲಿದೆ ಎಂದರು.

ಬೆಂಗಳೂರು ಹೈದರಾಬಾದ್, ಬೆಂಗಳೂರು ಚೆನ್ನೈ ಸಂಪರ್ಕಿಸುವ ಹೈಸ್ಪೀಡ್ ರೈಲು ಯೋಜನೆ ಘೋಷಿಸಿದೆ. ಇದರಿಂದ ಈ ಭಾಗದಲ್ಲಿ ದೊಡ್ಡ ಆರ್ಥಿಕತೆಗೆ ಸಹಕಾರಿಯಾಗಲಿದೆ. ಪ್ರಂಪಚದ ಐಟಿ ಸೆಕ್ಟರ್‌ನಲ್ಲಿ ಭಾರತದ ಹತ್ತು ಪ್ರತಿಶತ ಇರುವ ಯೋಜನೆ ಹಾಕಿದೆ. ಇದರಲ್ಲಿ ಬೆಂಗಳೂರು ಪಾಲು ದೊಡ್ಡದಿದೆ.

ಲಕ್ಷಾಂತರ ಉದ್ಯೋಗ ಬೆಂಗಳೂರಿನಲ್ಲಿ ಸೃಷ್ಟಿಯಾಗಲಿದೆ. ಉತ್ತರ ಭಾರತದಲ್ಲಿ ನಿಮ್ಹಾನ್ಸ್ ಘೋಷಿಸಿದೆ. ಇದರಿಂದ ಬೆಂಗಳೂರು ನಿಮ್ಹಾನ್ಸ್ ಮೇಲೆ ಒತ್ತಡ ಕಡಿಮೆಯಾಗಲಿದೆ. ಎಲ್ಲ ವರ್ಗದ ಜನರಿಗೆ ಬಜೆಟ್‌ನಲ್ಲಿ ಅನುಕೂಲ ಮಾಡಿ ಕೊಡಲಾಗಿದೆ ಎಂದು ಕೊಂಡಾಡಿದರು.