ಮನೆ ತಂತ್ರಜ್ಞಾನ ಇಂದಿನಿಂದ 108MP ಕ್ಯಾಮೆರಾದ ಈ ಫೋನ್ ಖರೀದಿಗೆ ಲಭ್ಯ: ಬೆಲೆ, ಫೀಚರ್ಸ್ ಮಾಹಿತಿ ತಿಳಿಯಲು ಈ...

ಇಂದಿನಿಂದ 108MP ಕ್ಯಾಮೆರಾದ ಈ ಫೋನ್ ಖರೀದಿಗೆ ಲಭ್ಯ: ಬೆಲೆ, ಫೀಚರ್ಸ್ ಮಾಹಿತಿ ತಿಳಿಯಲು ಈ ಸುದ್ದಿ ಓದಿ

0

ಭಾರತದಲ್ಲಿ ಆಕರ್ಷಕ ಕ್ಯಾಮೆರಾಗಳ ಸ್ಮಾರ್ಟ್​ ಫೋನ್ ​ಗಳು ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. ಸ್ಯಾಮ್ ​ಸಂಗ್, ಒನ್ ​ಪ್ಲಸ್, ರಿಯಲ್ ಮಿ ಕಳೆದ ಕೆಲವು ಎರಡು ತಿಂಗಳಲ್ಲಿ ಅದ್ಭುತ ಕ್ಯಾಮೆರಾಗಳ ಫೋನ್​ ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದಕ್ಕೆ ಪೈಪೋಟಿ ನೀಡಲು ಕಳೆದ ವಾರ ಇನ್ಫಿನಿಕ್ಸ್ ಕಂಪನಿ ಕೂಡ ತನ್ನ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರುವ ಇನ್ಫಿನಿಕ್ಸ್ ನೋಟ್ 30 5ಜಿ (Infinix Note 30 5G) ಸ್ಮಾರ್ಟ್ ​ಫೋನನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಇದೀಗ ಇಂದಿನಿಂದ ಈ ಮೊಬೈಲ್ ಮಾರಾಟ ಕಾಣುತ್ತಿದ್ದು, ಗ್ರಾಹಕರಿಗೆ ಖರೀದಿಗೆ ಸಿಗುತ್ತಿದೆ.

Join Our Whatsapp Group

ಬೆಲೆ ಎಷ್ಟು?:

ಇನ್ಫಿನಿಕ್ಸ್‌ ನೋಟ್‌ 30 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ 13,999 ರೂ. ಇದೆ. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ ಕೇವಲ 14,999 ರೂ. ನಿಗದಿ ಮಾಡಲಾಗಿದೆ. ಇದು ಮ್ಯಾಜಿಕ್ ಬ್ಲ್ಯಾಕ್, ಇಂಟರ್‌ಸ್ಟೆಲ್ಲರ್ ಬ್ಲೂ ಮತ್ತು ಸನ್‌ಸೆಟ್ ಗೋಲ್ಡ್‌ ಕಲರ್‌ ಆಯ್ಕೆಗಳಲ್ಲಿ ಮಾರಾಟ ಕಾಣುತ್ತಿದೆ. ಇಂದು ಮೊದಲ ಸೇಲ್ ಪ್ರಯುಕ್ತ 1,000 ರೂ. ಗಳ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ.

ಫೀಚರ್ಸ್ ಏನಿದೆ?:

ಇನ್ಫಿನಿಕ್ಸ್‌ ನೋಟ್‌ 30 5G ಸ್ಮಾರ್ಟ್‌ ಫೋನ್‌ 1,080 x 2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಯ್ಕೆ ನೀಡಲಾಗಿದೆ. ಇದು 120Hz ರಿಫ್ರೆಶ್​ರೇಟ್ ಹೊಂದಿದ್ದು, 240Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಒಳಗೊಂಡಿದೆ. ಬೆಲೆಗೆ ತಕ್ಕಂತೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆ ಕೂಡ ಇದೆ.

ಈ ಸ್ಮಾರ್ಟ್‌ ಫೋನ್ ​ನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ ಅಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರಲ್ಲಿ ಫಿಲ್ಮ್ ಮೋಡ್ ಎಂಬ ವಿಶೇಷ ಆಯ್ಕೆ ಕೂಡ ಇದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು ಅನಿರ್ದಿಷ್ಟ AI ಕ್ಯಾಮರಾ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ಫಿನಿಕ್ಸ್‌ ನೋಟ್‌ 30 5G ಸ್ಮಾರ್ಟ್‌ ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್‌ ಅನ್ನು ಹೊಂದಿದ್ದು, ಇದು 45W ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಕಂಪನಿ ಹೇಳುವ ಪ್ರಕಾರ ಇದು ಕೇವಲ 30 ನಿಮಿಷಗಳಲ್ಲಿ ಶೇ. 1 ರಿಂದ 75 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೆಬಿಎಲ್‌ ಸ್ಟಿರಿಯೊ ಸ್ಪೀಕರ್‌ ಗಳು, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, 3.55 ಎಂಎಂ ಆಡಿಯೊ ಜ್ಯಾಕ್ ಇದೆ.

ಹಿಂದಿನ ಲೇಖನಮೈಸೂರು: ಗ್ರಾಹಕರ ಸೋಗಿನಲ್ಲಿ ಬಂದು ಬಾಡಿಗೆ ಕಾರು ಕಳ್ಳತನ
ಮುಂದಿನ ಲೇಖನಗ್ಯಾರಂಟಿ ಜಾರಿ ಮಾಡಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ: ಬಿಎಸ್ ವೈ