ಮೈಸೂರು(Mysuru): ಕಳೆದ ಬಾರಿಯಂತೆ ಈ ಬಾರಿಯೂ ಜನಪರವಾದ ಬಜೆಟ್ ನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನ ಕಾರ್ಯಕ್ರ ಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಚುನಾವಣೆ ಕೂಡ ಹತ್ತಿರ ಬರುತ್ತಿದೆ. ಬಜೆಟ್ ತಯಾರಿ ಯಾವ ರೀತಿ ನಡೆಯುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಳೆದಬಾರಿಯೂ ಜನಪರವಾದ ಬಜೆಟ್ ಕೊಟ್ಟಿದ್ದೆವು, ಈ ಬಾರಿಯೂ ಜನಪರವಾದ ಬಜೆಟ್ ನೀಡುತ್ತೇವೆ ಎಂದರು.
ಇಡೀ ಕರ್ನಾಟಕ ಬಜೆಟ್ ಕುರಿತು ನಿರೀಕ್ಷೆ ಮಾಡುತ್ತಿದೆ. ಅದರಲ್ಲಿ ಮೈಸೂರು ಕೂಡ ಬಹಳ ಪ್ರಮುಖವಾಗಿರುವುದು ಎಂದರು.
ಟಾಸ್ಕ್ ಪೋರ್ಸ್ ತಂಡ ಚಿರತೆಯನ್ನು ಮೈಸೂರಿನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನ ಬೇರೆ ಬೇರೆ ಭಾಗದಲ್ಲಿಯೂ ಇದೆ ಸಮಸ್ಯೆ ಇದೆ, ರಾಜ್ಯಾದ್ಯಂತ ವಿಸ್ತರಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಟಾಸ್ಕ್ ಪೋರ್ಸ್ ನಿರಂತರವಾಗಿ ಇರಲಿದೆ.
ಯಾವುದೋ ಒಂದು ಪ್ರಕರಣ ಹಿಡಿದ ನಂತರ ಅದನ್ನು ತೆರವುಗೊಳಿಸಲ್ಲ, ಆನೆಗೂ ಕೂಡ ಖಾಯಂ ಟಾಸ್ಕ್ ಪೋರ್ಸ್ ಮಾಡಿದ್ದೇವೆ, ಈ ಭಾಗದಲ್ಲಿ ಆನೆ, ಚಿರತೆ ಉಪಟಳ ಹೆಚ್ಚಿದೆ ಅದರಂತೆ ಚಿರತೆಗೂ ಕೂಡ ಇರಲಿದೆ. ಬೇಕಾಗಿರುವ ಮಟೀರಿಯಲ್, ವಾಹನ, ವಿಶೇಷವಾಗಿ ಅನುದಾನ ಎಲ್ಲವನ್ನೂ ಕೂಡ ಕೊಡುತ್ತೇವೆ. ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಹೇಳಿದ್ದೇನೆ. ನೀವು ಹಳ್ಳಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತರಬೇತಿ ನೀಡಿ , ಗಾರ್ಡ್ ಗಳು ಎಲ್ಲೆಲ್ಲಿ ನಿಯಂತ್ರಣ ಮಾಡುತ್ತಾರೋ ಅಲ್ಲಿ ಅವರನ್ನು ಹಾಕಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಳಿದ್ದೇನೆ. ಮುಖ್ಯವಾಗಿ ಅರಣ್ಯದಂಚಿನಲ್ಲಿ ಇರುವಂತಹ ಜನರಿಗೆ ಧೈರ್ಯವನ್ನು ಕೊಡುವ ಅವಶ್ಯಕತೆ ಇದೆ. ಪ್ರಾಣಿಗಳ ಚಲನವಲನ, ಅವರ ವರ್ತನೆ, ಯಾವ ರೀತಿ ನಡೆದುಕೊಳ್ಳಬೇಕು, ಗುಂಪಲ್ಲಿ ಯಾವ ರೀತಿ, ವ್ಯಕ್ತಿಗತವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಮಾಹಿತಿಗಳನ್ನು ಅವರಿಗೆ ನೀಡಿ, ಸಾಯಂಕಾಲ ಅವರಿಗೆ ಹೊರಗಡೆ ತಿರುಗಾಡದಂತೆ ಹೇಳಬೇಕು ಎಂದಿದ್ದೇನೆ ಎಂದರು.
ಇದರ ಸಂಪೂರ್ಣ ನಿಯಂತ್ರಣ ಮಾಡಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನೂ ನೀಡಲಿದೆ ಎಂದು ತಿಳಿಸಿದರು.