ಮನೆ ಆರೋಗ್ಯ ಈ ಚಳಿಗಾಲದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಅದ್ಭುತ ಪಾನೀಯಗಳಿವು!

ಈ ಚಳಿಗಾಲದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಅದ್ಭುತ ಪಾನೀಯಗಳಿವು!

0

ಚಳಿಗಾಲದಲ್ಲಿ ನಾವೆಲ್ಲರೂ ಹುಷಾರು ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗಾಗ ಸಣ್ಣ ಪುಟ್ಟ ನೆಗಡಿ, ಕೆಮ್ಮು ಕಾಣಿಸುತ್ತದೆ. ಇದನ್ನು ಹಾಗೆ ಬಿಟ್ಟರೆ ದೊಡ್ಡದಾಗಿ ಚಳಿ, ಜ್ವರ ಕಾಣಿಸಿ ಕೊಳ್ಳುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ದೇಹದ ಒಳಭಾಗದಲ್ಲಿ ಕೂಡ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ತಿಂದ ಆಹಾರ ಚಳಿಗಾಲದಲ್ಲಿ ಸರಿಯಾಗಿ ಜೀರ್ಣ ವಾಗುವುದಿಲ್ಲ.

ಇದರಿಂದ ಗ್ಯಾಸ್ಟ್ರಿಕ್, ಮಲಬದ್ಧತೆ, ಅಜೀರ್ಣತೆ ಸಹಜವಾಗಿ ಉಂಟಾಗುತ್ತದೆ. ಮಕ್ಕಳು, ದೊಡ್ಡವರು ಎನ್ನದೆ ಎಲ್ಲರೂ ಇಂತಹ ಸಮಸ್ಯೆಗಳನ್ನು ಚಳಿಗಾಲದಲ್ಲಿ ಅನುಭವಿಸುತ್ತಾರೆ. ಆದರೆ ಇದಕ್ಕೆಲ್ಲ ಒಂದು ಉತ್ತಮ ಪರಿಹಾರ ಎಂದರೆ ಅದು ನೈಸರ್ಗಿಕವಾದ ರೂಪದಲ್ಲಿ ಇರುವಂತಹ ಯಾವುದಾದರೂ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರು ಮಾಡಿರುವ ಪಾನೀಯವನ್ನು ಕುಡಿಯುವುದು.

ಇವುಗಳನ್ನು ಏಕೆ ಕುಡಿಯಬೇಕು?

• ನಾವು ಮನೆಯಲ್ಲಿ ಬಳಕೆ ಮಾಡುವ ಶುಂಠಿ, ದಾಲ್ಚಿನ್ನಿ, ಜೀರಿಗೆ, ನಿಂಬೆಹಣ್ಣು ಇವೆಲ್ಲವೂ ಸಹ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಬಹಳ ಹಿಂದಿನಿಂದಲೂ ಜನರು ಬಳಸುತ್ತಾ ಬಂದಿದ್ದಾರೆ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇವುಗಳಿಗೆ ವಿಶೇಷವಾದ ಸ್ಥಾನಮಾನವಿದೆ.

• ಹಾಗಾಗಿ ತುಂಬಾ ವರ್ಷಗಳಿಂದ ಇವುಗಳ ಬಳಕೆ ಇದೆ. ನೈಸರ್ಗಿಕವಾದ ರೀತಿಯಲ್ಲಿ ನಮಗೆ ಕೆಮ್ಮು, ಕಫ, ನೆಗಡಿ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸುವುದರಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು.

• ಆಯುರ್ವೇದ ಪದ್ಧತಿಯಲ್ಲಿ ಬಳಸುವ ಬೇವು ಹುಷಾರಿಲ್ಲದ ನಿಮ್ಮ ದೇಹಕ್ಕೆ ಚೈತನ್ಯವನ್ನು ತುಂಬಿ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಇದರಿಂದ ಕಾಯಿಲೆಗಳು ಮತ್ತು ಸೋಂಕುಗಳು ದೂರವಾಗುತ್ತವೆ.

ನೀವು ಯಾವ ಪ್ರಮಾಣದಲ್ಲಿ ಇವುಗಳನ್ನು ಸೇವಿಸಬೇಕು?

• ಶುಂಠಿ ಮತ್ತು ನಿಂಬೆಹಣ್ಣು ಬೇಕಾದರೆ ಪ್ರತಿದಿನ ಯಾವುದಾದರೂ ಒಂದು ರೂಪದಲ್ಲಿ ಸೇವಿಸಬಹುದು. ಕಾಲಾನುಸಾರವಾಗಿ ಬೇರೆ ಪದಾರ್ಥಗಳನ್ನು ಇವುಗಳ ಜೊತೆ ಮಿಶ್ರಣ ಮಾಡಿ ಸೇವಿಸಬಹುದು ಅಥವಾ ಬಿಡಬಹುದು. ಉದಾಹರಣೆಗೆ ಮಳೆಗಾಲದಲ್ಲಿ ಶುಂಠಿಯ ಜೊತೆ ನೆಲ್ಲಿಕಾಯಿ ಮತ್ತು ಅರಿಶಿನ ಬಳಸಬಹುದಾಗಿದೆ.

• ಏಕೆಂದರೆ ನೆಲ್ಲಿಕಾಯಿ ತನ್ನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣ ಗಳನ್ನು ಒಳಗೊಂಡಿದೆ. ಇದರ ಜೊತೆ ಬಳಕೆ ಮಾಡುವ ಅರಿಶಿನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಲಕ್ಷಣಗಳನ್ನು ಹೊಂದಿದೆ. ಇದೊಂದು ಸದೃಢವಾದ ಆಂಟಿ ಆಕ್ಸಿಡೆಂಟ್ ಎಂದು ಹೇಳ ಬಹುದು.

ಕರಿಮೆಣಸು…

• ಇದರ ಜೊತೆಗೆ ಕಪ್ಪು ಮೆಣಸನ್ನು ಸಹ ಬಳಸಬಹುದು. ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಅಂಶ ಗಳನ್ನು ಹೊಂದಿರುವ ಅಲೋವೇರಾ ಮೊಡವೆ ಗುಳ್ಳೆಗಳು ಮತ್ತು ತ್ವಚೆಯ ಉರಿಯುತಕ್ಕೆ ಪರಿಹಾರ ಒದಗಿಸುತ್ತದೆ.

• ಸಾಧ್ಯವಾದಷ್ಟು ವ್ಯಾಯಾಮ ಮತ್ತು ಜೀವನ ಶೈಲಿಯ ಇನ್ನಿತರ ಬದಲಾವಣೆಗಳಿಂದ ಆರೋಗ್ಯ ವನ್ನು ಕಾಪಾಡಿಕೊಳ್ಳುವ ಜೊತೆಗೆ ಇವುಗಳನ್ನು ಸಹ ಸೇವಿಸುವುದು ಉತ್ತಮ.

ಒಂದು ಮಾತು ನೆನಪಿಡಿ

ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ಹಾಗಾಗಿ ಯಾವುದು ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಮಾಡುತ್ತದೆ ಮತ್ತು ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಿಗದಂತೆ ಮಾಡುತ್ತದೆ ಅಂತಹ ಆಹಾರ ಪದಾರ್ಥವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ನಿಂಬೆಹಣ್ಣು ಶುಂಠಿ ಪಾನೀಯ

ಇದು ಚಳಿಗಾಲದಲ್ಲಿ ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ. ಇದಕ್ಕಾಗಿ ಬೇಕಾಗಿರುವ ಸಾಮಗ್ರಿಗಳು ಎಂದರೆ

ಒಂದು ನಿಂಬೆಹಣ್ಣಿನ ರಸ

ಒಂದು ಟೀ ಚಮಚ ಶುಂಠಿ ರಸ

ಚಿಟಿಕೆ ಉಪ್ಪು ಮತ್ತು

ಅರ್ಧ ಕಪ್ ನೀರು

ತಯಾರು ಮಾಡುವ ವಿಧಾನ

• ಮೊದಲಿಗೆ ಶುಂಠಿ ತೆಗೆದುಕೊಂಡು ಅದರ ಮೇಲ್ಭಾಗದ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ಅದರ ರಸ ತೆಗೆದುಕೊಳ್ಳಿ.

• ಇದಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ನೀರು ಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ನಿಮ್ಮ ದೇಹ ಸ್ವಚ್ಛ ಮಾಡುವ ಅದ್ಭುತ ಪಾನೀಯ

• ಪ್ರತಿ ದಿನ ನಾವು ಸ್ನಾನ ಮಾಡುತ್ತೇವೆ ಮತ್ತು ನಮ್ಮ ದೇಹದ ಮೇಲ್ಭಾಗದಲ್ಲಿ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ. ದೇಹದ ಒಳಭಾಗದಲ್ಲಿ ನಡೆಯುವ ಪ್ರಕ್ರಿಯೆ ಅಥವಾ ಅಂಗಗಳು ಇರುವ ಸ್ಥಿತಿ ನಮಗೆ ಗೊತ್ತಾಗುವುದಿಲ್ಲ.

• ಹಾಗಾಗಿ ಕೆಲವೊಂದು ಆರೋಗ್ಯಕರ ಪಾನೀಯಗಳನ್ನು ಕುಡಿಯುವ ಮೂಲಕ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಮತ್ತು ಅಂಗಾಂಗಗಳ ಕಾರ್ಯ ಚಟುವಟಿಕೆ ಹೆಚ್ಚು ಮಾಡ ಬಹುದು.

ತಯಾರು ಮಾಡುವ ವಿಧಾನ

• ಎಲ್ಲವನ್ನು ಬ್ಲೆಂಡರ್ ನಲ್ಲಿ ಹಾಕಿ ಜ್ಯೂಸ್ ತೆಗೆದುಕೊಳ್ಳಿ.

• ತಕ್ಷಣ ಒಂದು ಲೋಟಕ್ಕೆ ಹಾಕಿಕೊಂಡು ಕುಡಿಯಿರಿ.

• ಇದನ್ನು ರೆಫ್ರಿಜರೇಟರ್ ನಲ್ಲಿ ಇಡುವುದು ಬೇಡ.

ಇದಕ್ಕಾಗಿ ಬೇಕಾಗಿರುವ ಸಾಮಗ್ರಿಗಳು

• ಒಂದು ಬೀಟ್ರೂಟ್

• ಸೌತೆಕಾಯಿ

• ಸುಮಾರು 20 ಗ್ರಾಂ ಗೋಧಿ ಹುಲ್ಲು