ಮನೆ ಆರೋಗ್ಯ ಕಣ್ಣಿನ ಸಮಸ್ಯೆ, ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಇದ್ದವರು ಹೀರೆಕಾಯಿ ಸೇವಿಸಿ

ಕಣ್ಣಿನ ಸಮಸ್ಯೆ, ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಇದ್ದವರು ಹೀರೆಕಾಯಿ ಸೇವಿಸಿ

0

ಆರೋಗ್ಯದ ವಿಚಾರದ ಬಗ್ಗೆ ಹೇಳುವುದಾದರೆ, ನಾವು ಯಾವ ಬಗೆಯ ತರಕಾರಿಯನ್ನು ಕೂಡ ಕಡೆಗಣಿ ಸುವ ಹಾಗಿಲ್ಲ! ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ, ಎಲ್ಲಾ ಬಗೆಯ ತರಕಾರಿಗಳಿಂದಲೂ ಕೂಡ ನಮಗೆ ಒಂದೊಂದು ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತಾ ಹೋಗುತ್ತವೆ.

ಉದಾಹರಣೆಗೆ ಹೇಳುವುದಾದರೆ, ಕೆಲವು ತರಕಾರಿಗಳಲ್ಲಿ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗಿರುವ ವಿಟಮಿನ್ಸ್ಗಳು ಹೆಚ್ಚಾಗಿದ್ದರೆ, ಇನ್ನು ಕೆಲವೊಂದರಲ್ಲಿ ಖನಿಜಾಂಶಗಳು, ಕಬ್ಬಿಣಾಂಶದ ಪ್ರಮಾಣಗಳು ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಆದಷ್ಟು ನೈಸರ್ಗಿಕವಾಗಿ ಸಿಗುವ ಹಸಿರೆಲೆ ತರಕಾರಿಗಳನ್ನು ಸೇವನೆ ಮಾಡುವ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಬನ್ನಿ ಇಂದಿನ ಲೇಖನದಲ್ಲಿ, ಉದ್ದಕೋಡಿನಂತೆ ಕಂಡುಬರುವ ಹೀರೆಕಾ ಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ನೋಡೋಣ…

ಹೀರೆಕಾಯಿ ಕಣ್ಣಿಗೆ ಬಹಳ ಒಳ್ಳೆಯದು

• ಸತ್ವಃ ಕಣ್ಣಿನ ತಜ್ಞರೇ ಹೇಳುವ ಪ್ರಕಾರ, ಹೀರೆಕಾಯಿ ಯಲ್ಲಿ ಕಣ್ಣಿನ ದೃಷ್ಟಿಗೆ ಸಹಕಾರಿ ಆಗುವಂತಹ ವಿಟ ಮಿನ್ ‘ಎ’ ಅಂಶ ಗಣನೀಯ ಪ್ರಮಾಣದಲ್ಲಿ ಸಿಗುವುದ ರಿಂದ, ಇದು ಕಣ್ಣುಗಳ ಆರೋಗ್ಯವನ್ನು ಕಾಪಾಡು ವುದರ ಜೊತೆಗೆ ಮುಂದಿನ ದಿನಗಳಲ್ಲಿ ಕಣ್ಣಿನ ದೃಷ್ಟಿಗೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

• ಇನ್ನು ಪ್ರಮುಖವಾಗಿ ಈ ತರಕಾರಿಯಲ್ಲಿ ವಿಟಮಿನ್ ಎ ಅಂಶದ ಜೊತೆಗೆ ಬೀಟಾ-ಕ್ಯಾರೋಟಿನ್ ಅಂಶ ಕೂಡ ಯಥೇಚ್ಛವಾಗಿ ಸಿಗುವುದರಿಂದ, ಕಣ್ಣುಗಳ ಮೇಲೆ ಬೀಳುವ ಬೆಳಕನ್ನು ನಿಯಂತ್ರಣ ಮಾಡಿಕೊಂಡು, ಕಣ್ಣುಗಳ ದೃಷ್ಟಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳು ವುದು ಮಾತ್ರದಲ್ಲದೆ, ರಾತ್ರಿ ಕುರುಡು ಸಮಸ್ಯೆಯನ್ನೂ ಕೂಡ ನಿಯಂತ್ರಣ ಮಾಡುತ್ತದೆ.

ರಕ್ತಹೀನತೆ ಸಮಸ್ಯೆ ಇದ್ದವರಿಗೆ

• ರಕ್ತಹೀನತೆ ಸಮಸ್ಯೆಯ ರೋಗಲಕ್ಷಣಗಳ ಬಗ್ಗೆ ನಮಗೆ ಗೊತ್ತೇ ಇದೆ ಒಂದು ವೇಳೆ ಈ ಕಾಯಿಲೆ ಕಾಣಿಸಿಕೊಂಡರೆ, ಪದೇ ಪದೇ ಬಳಲಿಕೆ, ಸುಸ್ತು ಕಂಡುಬರುವುದು.

• ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ, ಮನುಷ್ಯನ ಪ್ರತಿ ಯೊಂದು ಅಂಗಾಂಗಗಳಿಗೆ ಸರಿ ಯಾದ ಆಮ್ಲಜನಕ ಪೂರೈಕೆ ಕೊರತೆ ಹಾಗೂ ಕೆಂಪು ರಕ್ತ ಕಣಗಳು ಸರಿಯಾಗಿ ಉತ್ಪತ್ತಿ ಆಗದೆ ಇರುವುದರಿಂದ, ಈ ಸಮಸ್ಯೆ ಕಂಡು ಬರುತ್ತದೆ.

• ಇಂತಹ ಸಂದರ್ಭ ದಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ವಿಟಮಿನ್ ಬಿ6 ಅಂಶ ಹೆಚ್ಚಾಗಿರುವ ಹಾಗೂ ಕಬ್ಬಿಣಾಂಶ ಇರುವಂತಹ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಬೇಕು ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಹೀರೆಕಾಯಿ!

• ಹೌದು ಹೀರೆಕಾಯಿಯಲ್ಲಿ ರಕ್ತಹೀನತೆ ಸಮಸ್ಯೆಯನ್ನು ದೂರಮಾಡುವ ಕಬ್ಬಿಣಾಂಶದ ಪ್ರಮಾಣ ಸಾಕಷ್ಟಿದೆ. ಹೀಗಾಗಿ ಆದಷ್ಟು ನಿಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ, ಅಂದರೆ ಸಾಂಬಾರ್ ಅಥವಾ ಸಾಗು ತಯಾರಿಕೆ ಯಲ್ಲಿ ಬಳಸಿಕೊಂಡರೆ ಒಳ್ಳೆಯದು.

ಮಲಬದ್ಧತೆ ಸಮಸ್ಯೆ ದೂರ ಮಾಡಲು

• ಕೆಲವೊಮ್ಮೆ ಅನಾರೋಗ್ಯ ಆಹಾರ ಪದ್ಧತಿಗಳ ಸೇವನೆ ಯಿಂದಾಗಿ, ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆ ಯಲ್ಲಿ ವ್ಯತ್ಯಾಸ ಉಂಟಾಗಿ ಮಲಬದ್ಧತೆ ಸಮಸ್ಯೆ ಕಾಡಲುಶುರುವಾಗುತ್ತದೆ.

• ಇಂತಹ ಸಮಯದಲ್ಲಿ ನಮ್ಮ ಆಹಾರಪದ್ಧತಿಯಲ್ಲಿ ಆದಷ್ಟು ನಾರಿನಾಂಶ ಹೆಚ್ಚಿರುವ ಆಹಾರ ಪದಾರ್ಥ ಗಳನ್ನು ಸೇರಿಸಿಕೊಳ್ಳಬೇಕು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಹೀರೆಕಾಯಿ.

• ಹೌದು ಹೀರೆಕಾಯಿಯಲ್ಲಿ ಮನುಷ್ಯ ಆರೋಗ್ಯಕ್ಕೆ ಬೇಕಾಗುವ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನಾಂಶ, ಅಧಿಕ ಪ್ರಮಾಣ ದಲ್ಲಿ ಸಿಗುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆಯಲು ನೆರವಿಗೆ ಬರುತ್ತದೆ.

• ಇನ್ನು ಈ ಬಗ್ಗೆ ಆಹಾರ ತಜ್ಞರು ಹೇಳುವ ಪ್ರಕಾರ, ಮಧ್ಯಾಹ್ನ ಊಟದ ಬಳಿಕ ಒಂದು ಲೋಟ ಹೀರೆ ಕಾಯಿ ಜ್ಯೂಸ್ಗೆ, ಒಂದು ಸಣ್ಣ ಚಮಷದಷ್ಟು ಜೇನುತುಪ್ಪ ವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ, ಅಜೀರ್ಣ, ಮಲಬದ್ಧತೆ ಸಮಸ್ಯೆ ಎಲ್ಲವೂ ನಿವಾರಣೆ ಯಾಗುತ್ತದೆ.

ದೇಹದ ಲಿವರ್ ಆರೋಗ್ಯಕ್ಕೆ ಬಹಳ ಒಳ್ಳೆಯದು

• ನಮ್ಮ ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಲಿವರ್ ವಿಚಾರಕ್ಕೆ ಬರುವುದಾದರೆ., ಇದು ನಮ್ಮ ದೇಹದ ಒಳಭಾಗ ದಿಂದ ವಿಷಕಾರಿ ಅಂಶಗಳನ್ನು ಅಂದರೆ ಬೇಡದ ತಾಜ್ಯಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

• ಹೀಗಾಗಿ ನಮ್ಮ ದೇಹದ ಲಿವರ್ ಭಾಗದ ಕಾರ್ಯ ಚಟುವಟಿಕೆಗೆ ಏನೂ ಅಡ್ಡಿ ಉಂಟಾಗದಂತೆ ನೋಡಿ ಕೊಳ್ಳಬೇಕು ಎಂದರೆ ಆಹಾರ ಪದ್ಧತಿಯಲ್ಲಿ ಹೀರೆಕಾಯಿ ಸೇರಿಸಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ತೂಕ ಇಳಿಸುವವರಿಗೆ ಹಾಗೂ ಸಕ್ಕರೆಕಾಯಿಲೆ ಇರುವ ರೋಗಿಗಳಿಗೆ

• ತೂಕ ಇಳಿಸುವವರಿಗೆ ಹೀರೆಕಾಯಿ, ಹೇಳಿ ಮಾಡಿಸಿದ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ! ಯಾಕೆಂದರೆ, ಈ ತರಕಾರಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಸಿಗುವುದರ ಜೊತೆಗೆ, ಕೊಬ್ಬಿ ನಾಂಶ ಹಾಗೂ ಕೊಲೆಸ್ಟ್ರಾಲ್ ಅಂಶ ಕೂಡ, ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.

• ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು, ನಿಯಮಿತವಾಗಿ ತಮ್ಮ ಅಹಾರ ಪದ್ಧತಿಯಲ್ಲಿ ಹೀರೆ ಕಾಯಿ ಸೇರಿಸಿ ಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

• ಇನ್ನೂ ಇದರ ಆರೋಗ್ಯಕಾರಿ ಗುಣಲಕ್ಷಣ ಏನೆಂದರೆ, ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಉತ್ಪತ್ತಿಯನ್ನು ಹೆಚ್ಚು ಮಾಡಿ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ತಡೆಯುತ್ತದೆ.

• ಹೀಗಾಗಿ ಮಧುಮೇಹ ರೋಗಿಗಳು ಕೂಡ ತಮ್ಮ ಆಹಾರ ಪದ್ಧತಿಯಲ್ಲಿ ಆದಷ್ಟು ಈ ತರಕಾರಿಯನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.