ಮನೆ ಆರೋಗ್ಯ ಈ ಮೂರು ಕಾಯಿಲೆ ಇದ್ದವರು, ಜಾಸ್ತಿ ಕಾಫಿ ಕುಡಿಯಬಾರದು!

ಈ ಮೂರು ಕಾಯಿಲೆ ಇದ್ದವರು, ಜಾಸ್ತಿ ಕಾಫಿ ಕುಡಿಯಬಾರದು!

0

ಇಂದಿನ ದಿನಗಳಲ್ಲಿ ತುಂಬಾನೇ ಸಣ್ಣ ವಯಸ್ಸಿನವರಿಗೆ, ದೊಡ್ಡ ದೊಡ್ಡ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು, ನಿಜಕ್ಕೂ ಆತಂಕ ಮೂಡಿ ಸುತ್ತಿದೆ. ಕೆಲವರಿಗೆ ಅನುವಂಶಿಯವಾಗಿ ಬಂದರೆ, ಇನ್ನು ಕೆಲವರಿಗೆ ತಮ್ಮದೇ ತಪ್ಪಿನಿಂದಾಗಿ, ಇಂತಹ ದೀರ್ಘಾವಧಿಯ ಕಾಯಿಲೆಗಳು ಕಾಣಿಸಿ ಕೊಳ್ಳುತ್ತದೆ. ಬೇಜಾರಿನ ಸಂಗತಿ ಏನೆಂದ್ರೆ ವಯಸ್ಸು ಇನ್ನೂ ಮೂವತ್ತೂ ದಾಟಿರುವುದಿಲ್ಲ,ಅದಾ ಗಲೇ ಬಿಪಿ, ಶುಗರ್ ಜೊತೆಗೆ ಜೀವನ ನಡೆಸುವ ಅನಿವಾರ್ಯ ಎದುರಾಗುತ್ತದೆ.

Join Our Whatsapp Group

ಇದರ ಜೊತೆಯಲ್ಲಿ ಹೃದಯದ ಸಮಸ್ಯೆಗೆ ಪ್ರಮುಖ ಕಾರಣವಾಗಿರುವ ಕೊಲೆಸ್ಟ್ರಾಲ್ ಅಂಶ ಕೂಡ ದೇಹದ ರಕ್ತದಲ್ಲಿ ಹೆಚ್ಚಾಗಿರುತ್ತದೆ. ಯಾಕೆ ಸಣ್ಣ ವಯಸ್ಸಿಗೆ ಹೀಗೆಲ್ಲಾ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ ಎಂದು ಮಾಡಿಕೊಳ್ಳಲು ಮುಂದಾದರೆ, ನಿಜಕ್ಕೂ ಆಶ್ಚರ್ಯವೆನಿಸುತ್ತದೆ! ಯಾಕೆಂದ್ರೆ ದಿನ ದಲ್ಲಿ ಆಗಾಗ ಕೆಫಿನ್ ಅಂಶ ಹೆಚ್ಚಿರುವ ಕಾಫಿ ಕುಡಿಯುವವರಿಗೆ, ಇಂತಹ ಸಮಸ್ಯೆಗೆ ಒಂದು ಕಾರಣ ಎಂದು ಹೇಳಬಹುದು! ಹೀಗಾಗಿ ಪದೇ ಪದೇ ಕಾಫಿ ಕುಡಿಯುವವರು, ಈ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟರೆ ಒಳ್ಳೆಯದು!

ರಕ್ತದಲ್ಲಿ ಲಿಪಿಡ್ ಅಂಶ ಹೆಚ್ಚಾಗುತ್ತದೆ!

• ಒಂದು ಅಧ್ಯಯನ ಹೇಳುವ ಹಾಗೆ, ಪ್ರತಿದಿನ ಮಿತಿಮೀರಿ ಕಾಫಿ ಕುಡಿಯುವ ಅಭ್ಯಾಸ ಮಾಡಿ ಕೊಂಡವರಿಗೆ ಹೃದಯದ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರು ತ್ತದೆಯಂತೆ!

• ಯಾಕೆಂದ್ರೆ ಕೆಫಿನ್ ಅಂಶ ಹೆಚ್ಚಿರುವ ಕಾಫಿಯನ್ನು ಮಿತಿ ಮೀರಿ ದಿನಾ ಕುಡಿಯುವುದರಿಂದ, ರಕ್ತದಲ್ಲಿ ಲಿಪಿಡ್ ಎಂಬ ಕೊಬ್ಬಿ ನಾಂಶ ಹೆಚ್ಚಾಗುತ್ತದೆಯಂತೆ!

• ಇದು ಎಷ್ಟು ಮಾರಕ ಎಂದರೆ, ಒಂದು ವೇಳೆ, ಇದರ ಪ್ರಮಾಣ ರಕ್ತದಲ್ಲಿ ಹೆಚ್ಚಾಗುತ್ತಾ ಹೋದರೆ, ಹೃದಯ ರಕ್ತನಾಳದಲ್ಲಿ ಸಮಸ್ಯೆಗಳು ಕಾಣಿಸುತ್ತದೆ. ಕೊನೆಗೆ ಇದ ರಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಮಧುಮೇಹ ಕಾಯಿಲೆ ಇದ್ದವರು

• ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರು ವವರು ಪ್ರತಿದಿನ ಸಕ್ಕರೆ ಬೆರೆಸಿ ಕುಡಿಯುವ ಟೀ -ಕಾಫಿಯ ವಿಚಾರದಲ್ಲಿ ಎಚ್ಚರಿಕೆ ವಹಿಸಿದಷ್ಟು ಒಳ್ಳೆಯದು.

• ಮೊದಲನೆಯದಾಗಿ ತಾವು ಕುಡಿಯುವ ಟೀ ಅಥವಾ ಕಾಫಿಗೆ ಸಕ್ಕರೆ ಬೆರೆಸಲೇ ಬಾರದು. ಇದರ ಜೊತೆಗೆ ಚಹಾ ದಲ್ಲಿರುವ ಟ್ಯಾನಿನ್ ಹಾಗೂ ಕಾಫಿಯಲ್ಲಿರುವ ಕೆಫಿನ್ ಅಂಶಗಳು, ಈ ಕಾಯಿಲೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುವಂತೆ ಮಾಡಬಹುದು. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಒಳ್ಳೆಯದು.

ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ!

• ಇನ್ನು ದಿನದಲ್ಲಿ ನಾಲ್ಕೈದು ಬಾರಿ ಕಾಫಿ ಕುಡಿಯುವ ವರು, ಈ ವಿಚಾರದಲ್ಲಿ ಜಾಗರೂಕತೆ ವಹಿಸಿ ಬೇಕು. ಕಾಫಿ ಯಲ್ಲಿ ಕೆಫೀನ್ ಪ್ರಮಾಣ ಹೆಚ್ಚಿರುವ ಜೊತೆಗೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುವ cafesto ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆಯಂತೆ!

• ಇದರಿಂದಲೇ ಆರೋಗ್ಯ ಸಮಸ್ಯೆಗಳು ಕಂಡು ಬರಲು ಶುರುವಾ ಗುತ್ತದೆ. ಯಾಕೆಂದ್ರೆ, ಇದು ರಕ್ತದಲ್ಲಿ ಲಿಪಿಡ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.

ಕೊಲೆಸ್ಟ್ರಾಲ್ ಇದ್ದವರು

• ನಾವು ಈಗಾಗಲೇ ಹಿಂದಿನ ಲೇಖನದಲ್ಲಿ ಹಲವಾರು ಬಾರಿ ಹೇಳಿದ ಹಾಗೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಸೇರಿಕೊಂಡರೆ, ರಕ್ತನಾಳಗಳಿಗೆ ಸರಿಯಾಗಿ ರಕ್ತ ಹರಿಯು ವುದನ್ನು ತಡೆದು, ರಕ್ತದೊತ್ತಡದ ಸಮಸ್ಯೆಗೆ ಕಂಡು ಬರುವ ಸಾಧ್ಯತೆ ಇರುತ್ತದೆ.

• ಕೊನೆಗೆ ಇದೇ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಹೃದಯದ ಬಡಿತದಲ್ಲಿ ಏರುಪೇರು ಉಂಟಾಗಿ, ಹೃದ ಯಾಘಾತ ಉಂಟಾಗುವ ಅಪಾಯ ಹೆಚ್ಚಿರುತ್ತದೆ.

• ಹೀಗಾಗಿ ದೇಹದಲ್ಲಿ ಶೇಖರಣೆಗೊಳ್ಳುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ತುಂಬಾನೇ ಡೇಂಜರ್ ಎಂದು ವೈದ್ಯರು ಕೂಡ ಎಚ್ಚರಿಕೆಯನ್ನು ನೀಡುತ್ತಾರೆ.

•  ಟೀ-ಕಾಫಿ ಕುಡಿಯುವ ಅಭ್ಯಾಸ ಇದ್ದವರು, ನಿಧಾನಕ್ಕೆ, ಈ ಅಭ್ಯಾಸವನ್ನು ಕಡಿಮೆ ಮಾಡುತ್ತಾ ಬನ್ನಿ ಇದರ ಬದಲು ಗಿಡಮೂಲಿಕೆ ಚಹಾಗಳು, ಅರಿಶಿನ ಬೆರೆಸಿದ ಹಾಲು, ನಿಂಬೆ ಚಹಾ ಇಂತಹ ಆರೋಗ್ಯಕರ ಪೇಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

• ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಡಿ. ಯಾಕೆಂದ್ರೆ ಇದರಿಂದಾಗಿ ಮುಂದಿನ ದಿನ ಗಳಲ್ಲಿ ಹೊಟ್ಟೆಯಲ್ಲಿ ಉರಿ, ಕರುಳಿನ ಅಸ್ವಸ್ಥತೆಗಳು, ಆಸಿಡಿಟಿ, ಎದೆಯುರಿ, ವಾಕರಿಕೆ, ಅಜೀರ್ಣತೆ ಇತ್ಯಾದಿ ಗ್ಯಾಸ್ಟಿಕ್ ಸಂಬಂಧಿತ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇದೆ.

ಹಿಂದಿನ ಲೇಖನಇದು ನನ್ನ ಕೊನೆಯ ಚುನಾವಣೆ: ಜಗದೀಶ್ ಶೆಟ್ಟರ್
ಮುಂದಿನ ಲೇಖನಚಿತ್ರದುರ್ಗ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.39 ಕೋಟಿ ರು. ಮೌಲ್ಯದ ಚಿನ್ನಾಭರಣ ವಶ