ಮನೆ ರಾಷ್ಟ್ರೀಯ ಬಿಜೆಪಿ ಸರ್ಕಾರ ನನಗೆ ‘ಪದ್ಮಶ್ರೀ’ ನೀಡದೆಂಬ ಯೋಚನೆ ತಪ್ಪೆಂದು ಸಾಬೀತು: ಮೋದಿಗೆ ಕೃತಜ್ಞತೆ ಅರ್ಪಿಸಿದ ಕರ್ನಾಟಕ...

ಬಿಜೆಪಿ ಸರ್ಕಾರ ನನಗೆ ‘ಪದ್ಮಶ್ರೀ’ ನೀಡದೆಂಬ ಯೋಚನೆ ತಪ್ಪೆಂದು ಸಾಬೀತು: ಮೋದಿಗೆ ಕೃತಜ್ಞತೆ ಅರ್ಪಿಸಿದ ಕರ್ನಾಟಕ ಮುಸ್ಲಿಂ ಕಲಾವಿದ

0

ನವದೆಹಲಿ: ಇಂಥ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಬಿಜೆಪಿ ಸರ್ಕಾರ ನೀಡುವುದಿಲ್ಲ ಎಂಬ ನನ್ನ ನಂಬಿಕೆ ತಪ್ಪೆಂದು ಸಾಬೀತಾಗಿದೆ ಎಂದು ಪದ್ಮಶ್ರೀ ಪುರಸ್ಕೃತ, ಕರ್ನಾಟಕದ ಬಿದರಿ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದರು.

Join Our Whatsapp Group

ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಖಾದ್ರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.

ಎಲ್ಲ ಸಾಧಕರಿಗೂ ಶುಭಕೋರುತ್ತಾ, ಹಸ್ತಲಾಘವ ನೀಡುತ್ತ ಬಂದ ಪ್ರಧಾನಿ ಮೋದಿ, ಖಾದ್ರಿ ಅವರ ಬಳಿಗೂ ಬಂದರು. ಆಗ ಪ್ರಧಾನಿಯವರ ಕೈಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡ ಖಾದ್ರಿ, ನಾನು ಈ ಪ್ರಶಸ್ತಿಯನ್ನು ಪಡೆಯಲು 10 ವರ್ಷಗಳಿಂದ ಪ್ರಯತ್ನಿಸಿದೆ. ಬಿಜೆಪಿ ಸರ್ಕಾರ ಬಂದಾಗ, ನಾನು ಈ ಪ್ರಶಸ್ತಿಯನ್ನು ಪಡೆಯುವುದಿಲ್ಲ ಎಂದು ಭಾವಿಸಿದ್ದೆ, ಏಕೆಂದರೆ ಬಿಜೆಪಿ ಎಂದಿಗೂ ಮುಸ್ಲಿಮರಿಗೆ ಏನನ್ನೂ ನೀಡುವುದಿಲ್ಲ, ಆದರೆ ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಆ ಭಾವನೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ. ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುವೆ ಎಂದು ಖಾದ್ರಿ ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಮುಗುಳ್ನಕ್ಕು ಮುಂದೆ ನಡೆದರು. ಗೃಹ ಸಚಿವ ಅಮಿತ್‌ ಶಾ ಅವರು ಇಬ್ಬರ ನಡುವಿನ ಸಂಭಾಷಣೆಗೆ ಸಾಕ್ಷಿಯಾದರು.

ಹಿಂದಿನ ಲೇಖನಹನುಮ ಜಯಂತಿ: ಅಂಜನಾದ್ರಿಯಲ್ಲಿ ಮನೆ ಮಾಡಿದ ಸಂಭ್ರಮ
ಮುಂದಿನ ಲೇಖನರಮ್ಯಾ ನಿರ್ಮಾಣದ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾ ವಿರುದ್ಧದ ಪ್ರತಿಬಂಧಕಾದೇಶ ತೆರವುಗೊಳಿಸಿದ ನ್ಯಾಯಾಲಯ