ಮನೆ ರಾಜ್ಯ ಶಕ್ತಿ ಯೋಜನೆಯ ಸಾವಿರ ಕೋಟಿ ಹಣ ಬಾಕಿ – ಆರ್ಥಿಕ ಸಂಕಷ್ಟಕ್ಕೆ ಸಿಲುಕಿತಾ ರಾಜ್ಯ ಸರ್ಕಾರ..

ಶಕ್ತಿ ಯೋಜನೆಯ ಸಾವಿರ ಕೋಟಿ ಹಣ ಬಾಕಿ – ಆರ್ಥಿಕ ಸಂಕಷ್ಟಕ್ಕೆ ಸಿಲುಕಿತಾ ರಾಜ್ಯ ಸರ್ಕಾರ..

0

ಬೆಂಗಳೂರು : 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಆದ್ರೆ ಇದೇ ಗ್ಯಾರಂಟಿ ಯೋಜನೆಗಳು ಇದೀಗ ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆಯಾ? ಅನ್ನೋ ಪ್ರಶ್ನೆ ಎದ್ದಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ, ಶಕ್ತಿ ಯೋಜನೆಯ ಸಾವಿರಾರು ಕೋಟಿ ಹಣವನ್ನೂ ಬಾಕಿ ಉಳಿಸಿಕೊಂಡಿರುವುದು ಈಗ ದಾಖಲೆ ಸಮೇತ ಬೆಳಕಿಗೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಂದ ಬರೋಬ್ಬರಿ 4,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಗೋವಿಂದರಾಜ್‌ ಅವರ ಪ್ರಶ್ನೆಗೆ ಖುದ್ದು ಸಾರಿಗೆ ಸಚಿವರೇ ಉತ್ತರ ನೀಡಿದ್ದಾರೆ. ಇದರಿಂದ ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆಯಾ ಅಂತ ವಿಪಕ್ಷಗಳು ಪ್ರಶ್ನೆ ಎತ್ತಿವೆ.

ಶಕ್ತಿ ಯೋಜನೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಎಷ್ಟು? – 2023-2024 ರ ವರ್ಷದಲ್ಲಿ ಕೆಎಸ್‌ಆರ್‌ಟಿಸಿ – 452.62 ಕೋಟಿ ರೂ. ಬಿಎಂಟಿಸಿ – 205.43. ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 283.91 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 238.66 ಕೋಟಿ ರೂ. ಒಟ್ಟು ಬಾಕಿ- 1180.62 ಕೋಟಿ ರೂ.

2024-2025ರ ಕೆಎಸ್‌ಆರ್‌ಟಿಸಿ -495.80 ಕೋಟಿ ರೂ. ಬಿಎಂಟಿಸಿ- 194.78 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 275.55 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 204.32 ಕೋಟಿ ರೂ. ಒಟ್ಟು – 1170.45 ಕೋಟಿ ರೂ.

2025-26 (ನವೆಂಬರ್ ಅಂತ್ಯಕ್ಕೆ), ಕೆಎಸ್‌ಆರ್‌ಟಿಸಿ – 631.73 ಕೋಟಿ ರೂ. ಬಿಎಂಟಿಸಿ – 310.6 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮ -428.64 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 284.43 ಕೋಟಿ ರೂ. ಒಟ್ಟು-1655.40 ಕೋಟಿ ರೂ.

2.5 ವರ್ಷಗಳಲ್ಲಿ 4 ನಿಗಮಗಳಿಂದ ಸರ್ಕಾರ ಉಳಿಸಿಕೊಂಡ ಒಟ್ಟು ಬಾಕಿ ಹಣ ಕೆಎಸ್‌ಆರ್‌ಟಿಸಿ – 1580.15 ಕೋಟಿ ರೂ. ಬಿಎಂಟಿಸಿ – 710.81 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 988.1 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 727.41 ಕೋಟಿ ರೂ. ಒಟ್ಟು ಬಾಕಿ- 4006.47 ಕೋಟಿ ರೂ.