ಮನೆ ರಾಜ್ಯ ದಾವಣಗೆರೆ ಡಿಸಿ ನಿವಾಸ ಸ್ಫೋಟಿಸೋದಾಗಿ 112ಕ್ಕೆ ಬೆದರಿಕೆ ಕರೆ

ದಾವಣಗೆರೆ ಡಿಸಿ ನಿವಾಸ ಸ್ಫೋಟಿಸೋದಾಗಿ 112ಕ್ಕೆ ಬೆದರಿಕೆ ಕರೆ

0

ದಾವಣಗೆರೆ : ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ಅವರ ಸರ್ಕಾರಿ ನಿವಾಸ ಸ್ಟೋಟಿಸುವುದಾಗಿ ಕಿಡಿಗೇಡಿಯೊಬ್ಬ 112ಕ್ಕೆ ಕರೆ ಮಾಡಿದ್ದಾನೆ. ಕರೆ ಬಂದ ಬಳಿಕ ಬಡಾವಣೆ ಠಾಣೆ ಪೊಲೀಸರು. ನಿಜಲಿಂಗಪ್ಪ ಬಡಾವಣೆ ನಿವಾಸಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದರು.

ಬಡಾವಣೆ ಠಾಣೆಯ ಪಿಐ ಗಾಯಿತ್ರಿ ಅವರು ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದರು. ಡಿಸಿ ನಿವಾಸದ ಪ್ರತಿಯೊಂದು ಮೂಲೆ ಮೂಲೆ ಪರಿಶೀಲನೆ ನಡೆಸಿದರು ಯಾವುದೇ ಸ್ಟೋಟಕ ಸಿಗದ ಹಿನ್ನಲೆ ವಾಪಸ್‌ ತೆರಳಿದರು.

ಕರೆ ಬಂದ 45 ನಿಮಿಷದಲ್ಲಿ ಡಿಸಿಮನೆಯನ್ನು ಸ್ಟೋಟ ಮಾಡುವುದಾಗಿ ಕಿಡಿಗೇಡಿ ಕರೆ ಬೆದರಿಕೆ ಹಾಕಿದ್ದ. ಇನ್ನೂ ಕಳೆದ ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ, ಹಾಗೂ ನ್ಯಾಯಲಯಕ್ಕೆ ಬಾಂಬ್ ಬೆದರಿಕೆ ಬಂದಿತ್ತು.