ಸ್ಟಾರ್ ಗಳ ಸಿನಿಮಾಗಳನ್ನು ಓಟಿಟಿ ಖರೀದಿಸಲು ಹಿಂದೇಟು ಹಾಕುವ ಈ ಸಮಯದಲ್ಲಿ ಹೊಸಬರ ಚಿತ್ರವನ್ನು ಖರೀದಿಸಿದರೆ ಆ ಖುಷಿ ಹೇಗಿರಬೇಡಿ ಹೇಳಿ. ಇಲ್ಲೊಂದು ನವತಂಡ ಅಂತಹ ಖುಷಿ ಅನುಭವಿಸುತ್ತಿದೆ. ಅದು “ಮೂರು ಕಾಸಿನ ಕುದುರೆ’ ಚಿತ್ರತಂಡ.
ಗಿರೀಶ್ ಎಂಬ ಯುವಪ್ರತಿಭೆಯ ನಿರ್ದೇಶನದ ಚಿತ್ರ ಮೂರು ಕಾಸಿನ ಕುದುರೆ ರೆಡಿಯಾಗಿ 2 ವರ್ಷವಾದರೂ ವಿತರಕರು ಸಿಗದೆ ರಿಲೀಸ್ ಮಾಡಲಾಗಿಲ್ಲ. ಆದರೆ ಅಮೆಜಾನ್ ಪ್ರೈಂ ಚಿತ್ರವನ್ನು ನೋಡಿ ಕಂಟೆಂಟ್ ಇಷ್ಟಪಟ್ಟು ತಂಡದ ಜತೆ ಕೈಜೋಡಿಸಿದ್ದಾರೆ. ಕಳೆದ ವಾರವಷ್ಟೇ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮೂರು ಕಾಸಿನ ಕುದುರೆ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ಇದೊಂದು ಸೋಷಿಯಲ್ ಡ್ರಾಮಾ ಆಗಿದ್ದು, ಚಿತ್ರದ 3 ಪ್ರಮುಖ ಪಾತ್ರಗಳಲ್ಲಿ ಪೂರ್ಣಚಂದ್ರ ಮೈಸೂರು, ಸನಾತನಿ ಹಾಗೂ ಗೋವಿಂದೇಗೌಡ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಗಿರೀಶ್ ಎಸ್.ಗೌಡ್ರು ಬರೆದಿದ್ದು, ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ, ಆನಂದರಾಜಾ ವಿಕ್ರಮ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಗಿರೀಶ್, “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಸಾಕಷ್ಟು ಸೀರಿಯಲ್, ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ನಾನು ಗಿರೀಶ್ ಗೌಡ್ರು ಜತೆಗೂಡಿ ಈ ಚಿತ್ರ ಮಾಡಿದೆವು. ಮೇಲೆ ನಡೆಯುವ ಕಥೆ’ ಎಂದರು.