ಮನೆ ಸ್ಥಳೀಯ ಮೂರು ದಿನಗಳ ಕಾಲ ಆದ್ದೂರಿ ಮೈಸೂರು ಫೆಸ್ಟ್

ಮೂರು ದಿನಗಳ ಕಾಲ ಆದ್ದೂರಿ ಮೈಸೂರು ಫೆಸ್ಟ್

0

ಮೈಸೂರು: ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಜನವರಿ 26 ರಿಂದ 28 ರವರೆಗೆ ಮೈಸೂರು ವಿಶ್ವವಿದ್ಯಾಲಯ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ 2024 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

26 ರಂದು ಬೆಳಿಗ್ಗೆ 11.30 ಕ್ಕೆ ಚಿತ್ರಸಂತೆ, ಫ್ಲೀ  ಮಾರ್ಕೆಟ್ ಹಾಗೂ ಮೈಸೂರು ಫುಡ್ ಫೆಸ್ಟ್ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ರವರು ಉದ್ಘಾಟಿಸುವರು.

ಜನವರಿ 27 ರಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಚಾಮರಾಜ ಕ್ಷೇತ್ರ ವಿಧಾನಸಭಾ ಸದಸ್ಯರು ಕೆ.ಹರೀಶ್ ಗೌಡ ರವರು ಅಧ್ಯಕ್ಷತೆ ವಹಿಸುವರು.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಉಪಸ್ಥಿತರಿರುವರು. ಮೈಸೂರು ಕೊಡಗು ಕ್ಷೇತ್ರ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಚಾಮರಾಜನಗರ ಕ್ಷೇತ್ರ ಲೋಕಸಭಾ ಸದಸ್ಯರಾದ ವಿ ಶ್ರೀನಿವಾಸ್ ಪ್ರಸಾದ್, ಮಂಡ್ಯ ಕ್ಷೇತ್ರ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಮುಖ್ಯ ಅತಿಥಿಗಳಾಗಲಿದ್ದಾರೆ.

ಸಮಾರಂಭದ ಅತಿಥಿಗಳಾಗಿ ವಿಧಾನಸಭೆಯ ಶಾಸಕರುಗಳಾದ ತನ್ವೀರ್ ಸೇಠ್, ಜಿ ಟಿ ದೇವೇಗೌಡ, ಅನಿಲ್ ಕುಮಾರ್ ಸಿ, ರವಿಶಂಕರ್ ಡಿ, ಜಿ.ಡಿ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಟಿ.ಎಸ್ ಶ್ರೀವತ್ಸ ಹಾಗೂ ವಿಧಾನಪರಿಷತ್ತಿನ ಶಾಸಕರುಗಳಾದ ಮರಿ ತಿಬ್ಬೆಗೌಡ, ಎಚ್ ವಿಶ್ವನಾಥ್, ಡಾ.ಡಿ ತಿಮ್ಮಯ್ಯ, ಸಿ.ಎನ್ ಮಂಜೇಗೌಡ, ಮಧು ಜಿ. ಮಾದೇಗೌಡ, ಆಗಮಿಸಲಿದ್ದಾರೆ.

ಸಾಂಸ್ಕೃತಿಕ ವೈಭವ ಕಾರ್ಯಕ್ರಮವು 27 ಶನಿವಾರ ಸಂಜೆ 5 ರಿಂದ 7 ರವರೆಗೆ ವಾಯಿಲಿನ್‌ಫ್ಯೂಷನ್, ಚೆಂಡೆ ಮತ್ತು ನೃತ್ಯ ತಂಡದವರಿOದ ಉಯಿರೆ ಉಯಿರೆ ಬಿಜಿಎಂ ಚೆಮ್ಮನ್ ಬ್ಯಾಂಡ್ ಹಾಗೂ 8 ರಿಂದ 10ರವರೆಗೆ ಅಂತರಾಷ್ಟ್ರೀಯ ಗಾಯಕ ಪೃಥ್ವಿ, ಸವಾರಿ ಹಾಗೂ ನೂರು ಸಿನಿಮಾಗಳ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಹಾಗೂ ಬಾಂಬೆ ಸಿಂಗರ್ ಅಂಶಿಕ ಅಯ್ಯರ್ ತಂಡದಿOದ ಗಾನ ಮಾಧುರ್ಯ ಮಣಿಕಾಂತ್ ಕದ್ರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

28 ರಂದು ಸಂಜೆ 6 ರಿಂದ 8 ರವರೆಗೆ ಸಿರಿಗನ್ನಡ ಟಿವಿ ಚಾನಲ್ ರವರಿಂದ ಹಾಸ್ಯ ದರ್ಬಾರ್ ಮತ್ತು ರಾತ್ರಿ 8 ರಿಂದ 10 ರವರೆಗೆ ಖ್ಯಾತ ಚಲನಚಿತ್ರ ಗಾಯಕ ಸಂತೋಷ್ ವೆಂಕಿ ಲೈವ್ ಇನ್ ಕಾನ್ಸರ್ಟ್ ಮತ್ತು ನೃತ್ಯ ತಂಡದಿOದ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.