ಮನೆ ರಾಷ್ಟ್ರೀಯ ವಯನಾಡ್‌ ನ ಎರಡು ಕಡೆ ಮೂರು ಹುಲಿಗಳ ಮೃತದೇಹ ಪತ್ತೆ

ವಯನಾಡ್‌ ನ ಎರಡು ಕಡೆ ಮೂರು ಹುಲಿಗಳ ಮೃತದೇಹ ಪತ್ತೆ

0

ವಯನಾಡ್: ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ ನ ಎರಡು ಕಡೆಗಳಲ್ಲಿ ಮೂರು ಹುಲಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಬುಧವಾರ ತನಿಖೆಗೆ ಆದೇಶಿಸಿದೆ.

Join Our Whatsapp Group

ಕುರಿಚ್ಯಾಡ್ ಅರಣ್ಯ ವ್ಯಾಪ್ತಿಯಲ್ಲಿ ಎರಡು, ವೈತಿರಿ ಅರಣ್ಯ ವಿಭಾಗದ ಕಾಫಿ ತೋಟದಲ್ಲಿ ಇನ್ನೊಂದು ಹುಲಿಯ ಶವ ಪತ್ತೆಯಾಗಿದೆ.

ಕುರಿಚ್ಯಾಡ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಅಧಿಕಾರಿಗಳು ಎರಡು ಹುಲಿಗಳ ಕಳೇಬರ  ಪತ್ತೆ ಹಚ್ಚಿದರೆ, ಮತ್ತೊಂದು ಹುಲಿಯ ಕೊಳೆತ ಶವ ಕೆಲವು ಎಸ್ಟೇಟ್ ಕಾರ್ಮಿಕರು ತೋಟದೊಳಗೆ ನೋಡಿದ್ದಾರೆ.

ಮೂರು ಹುಲಿಗಳ ಸಾವಿನ ಹಿಂದೆ ಏನಾದರೂ ನಿಗೂಢತೆ ಇದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಎನ್ನುವುದನ್ನು ತನಿಖೆ ನಡೆಸಲು ಆದೇಶಿಸಲಾಗಿದ್ದು, ಒಂದು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಕಾಫಿ ಕಾಯಿ ಕೀಳುತ್ತಿದ್ದ ವೇಳೆ ಹುಲಿ ದಾಳಿಗೆ ಬಲಿಯಾಗಿದ್ದರು. ಮಹಿಳೆಯನ್ನು ಕೊಂದ ಹುಲಿ  ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿತ್ತು.