ಮನೆ ಅಪರಾಧ ರೈಲು ಹಳಿ ಮೇಲೆ ಕೂತು ಪಬ್ ಜಿ ಆಡುತ್ತಿದ್ದ ಮೂವರು ಯುವಕರ ಸಾವು

ರೈಲು ಹಳಿ ಮೇಲೆ ಕೂತು ಪಬ್ ಜಿ ಆಡುತ್ತಿದ್ದ ಮೂವರು ಯುವಕರ ಸಾವು

0

ಪಾಟ್ನಾ: ರೈಲು ಹಳಿ ಮೇಲೆ ಕೂತು ಪಬ್ ಜಿ ಆಟ ಆಡುತ್ತಿದ್ದ ಮೂವರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಘೋರ ದುರಂತವೊಂದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗುರುವಾರ(ಜ.2) ಸಂಭವಿಸಿದೆ.

Join Our Whatsapp Group

ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಲ್ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ವೇಳೆ ಮೂವರು ಕಿವಿಗೆ ಇಯರ್‌ಫೋನ್‌ ಹಾಕಿಕೊಂಡಿದ್ದ ಯುವಕರು ಗೇಮ್ ನಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರಿಗೆ ರೈಲು ಬಂದಿದ್ದೇ ಗೊತ್ತಾಗಲಿಲ್ಲ ಎನ್ನಲಾಗಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹಗಳು ಛಿದ್ರಗೊಂಡಿದ್ದು ಪೊಲೀಸರು ದೇಹದ ಭಾಗಗಳನ್ನು ವಿಲೇವಾರಿ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮೃತ ದುರ್ದೈವಿಗಳನ್ನು ಗುಮ್ಟಿ ನಿವಾಸಿ ಫುರ್ಕನ್ ಆಲಂ, ಸಮೀರ್ ಆಲಂ ಹಾಗೂ ಹಬೀಬುಲ್ಲಾ ಅನ್ಸಾರಿ ಎನ್ನಲಾಗಿದ್ದು.

ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾತ್ರ ಮುಗಿಲುಮುಟ್ಟುವಂತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಕುರಿತು ಹೇಳಿಕೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ರೈಲು ಹಳಿಯ ಮೇಲೆ ಕುಳಿತು ಮೂವರು ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು,ಸದ್ಯ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೆಚ್ಚಿನ ತನಿಖೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿದರು.

ಮಕ್ಕಳು ಹೆಚ್ಚಿನ ಸಮಯದಲ್ಲಿ ಮೊಬೈಲ್ ಬಳಕೆ ಮಾಡದಂತೆ ಹೆತ್ತವರು ಎಚ್ಚರಿಕೆ ವಹಿಸಬೇಕು ಅಲ್ಲದೆ ಶಾಲೆಗಳಲ್ಲೂ ಈ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.