ಮನೆ ಆರೋಗ್ಯ ತ್ರಿಫಲ

ತ್ರಿಫಲ

0

 ಶಿಲಾಜತು ವಟಕ

 31.ಕೌಟಜ ತ್ರಿಫಲಾನಿಂಬ ಪಟೋಲ ಘನನಾಗರೈ ||

 *ಭಾವಿತಾನಿ ದಶಾಹಾನಿ ರರ್ಧ್ವ ತ್ರಿಗುಣಾನಿ ಚ |

 ಶಿಲಾಜತು ಪಲಾನ್ಯಷ್ಟೌ ತಾವತೀ ಸಿತಶರ್ಕರಾ ||*

 ತ್ವಕ ಕ್ಷೀರಿ ಪಿಪ್ಪಲೀಧಾತ್ರಿಕಟು ಕಾಖ್ಯಾಃ ಫಲೋಸ್ಮಿತಾ ।

 ನಿದಿಗ್ಧಾ, ಫಲಮೂಲಾಭ್ಯಾಂ ಫಲಂ ಯುಕ್ತಾ ಶ್ರೀಗಂಧಕಮ್ II

 ಮಧು ತ್ರಿಫಲ ಸಂಯುಕ್ತಂ ಕುರ್ಯಾದಕ್ಷ ಸಮಾನ್ ಗುಡಾನ್ ।

 ದಾಡಿಮಾಂಬು ಪಯಃ ಪಕ್ಷಿರಸತೋಯ ಸುರಾಸವಾನ್ ||

 ತಾನ್ ಭಕ್ಷಯತ್ವಾಃ ನುಪಿಬೇನ್ನಿರನ್ನೊ ಭುಕ್ತ ಏವ ವಾ । ಪಾಂಡುಕುಷ್ಠ ಜ್ವರಪೀಹತಮಕಾರ್ಶೋಭಗಂದರಾನ್ ॥

ಹೃದ್ರೋಗ ಶುಕ್ರಮೂತ್ರಾಗ್ನಿ ದೋಷ ಶೋಧಕರೋದರಾನ್ । ಕಾಸಾಸ್ಯಗ್ನರ ಪಿತ್ತಾಸ್ಸಕ್ ಶೋಷ ಗುಲ್ಮ ಜ್ವರಾಮಯಾನ್ ||

 ತೇ ಚ ಸರ್ವವ್ರಣಾನ್ ಹನ್ಯುಃ ಸರ್ವ ರೋಗಹರಾಃ ಶಿವಾಃ ||

Join Our Whatsapp Group

ಇಂದ್ರಜವ, ತ್ರಿಫಲ, ಬೇವು, ಕಹಿಪಡವಲ, ಜೇಕು ಮತ್ತು ಶುಂಠಿಗಳ ಕಷಾಯದಿಂದ 10 ಅಥವಾ 20 ಅಥವಾ 30 ದಿನಗಳವರೆಗೆ ಬಾವನೆ ಕೊಟ್ಟ 32 ತೊಲ ಶಿಲಾಜಿತು ಅಷ್ಟೇ! ಪ್ರಮಾಣದ ಕಲ್ಲು ಸಕ್ಕರೆ, ವಂಶಲೋಚನ, ಹಿಪ್ಪಲಿ, ಬೆಟ್ಟದ ನೆಲ್ಲಿಕಾಯಿ, ಕಟುಕ ರೋಹಿಣಿ ಇವುಗಳನ್ನು ತಲಾ 4 ತೊಲ ತೆಗೆದುಕೊಳ್ಳಬೇಕು. ನೆಲಗುಳ್ಳದಕಾಯಿ ಮತ್ತು ಬೇರು 4 ತೊಲ; ದಾಲ್ಲಿ, ತಮಾಲ ಪತ್ರ, ಏಲಕ್ಕಿಗಳನ್ನು ಅವಶ್ಯಕತೆ ಅನುಗುಣರಾಗಿ ಚೂರ್ಣ ಮಾಡಿಕೊಳ್ಳಬೇಕು. ಒಟ್ಟು ದ್ರವ್ಯಗಳಿಗೆ 12 ತೊಲ ಜೇನು ಸೇರಿಸಿ ಒಂದು ತೊಲ ಪ್ರಮಾಣದ ಗುಳಿಗೆಯನ್ನು ತಯಾರಿಸಿ ಪ್ರತಿದಿನ ಊಟಕ್ಕೆ ಮೊದಲು ಅಥವಾ ಊಟದ ನಂತರ ಒಂದು ಗುಳಿಗೆಯನ್ನು ಸೇವಿಸಿ, ದಾಳಿಂಬೆ ಹಣ್ಣಿನ ರಸ, ಹಾಲು, ಪಕ್ಷಿ ಮಾಂಸದ ರಸ, ನೀರು, ಸುರೆ ಅಥವಾ ಆಸವಗಳನ್ನು ಕುಡಿಯುವುದರಿಂದ, ಪಾಂಡು, ಕುಷ್ಠ, ಜ್ವರ, ಪ್ಲೇಹ, ತಮಕ (ಶ್ವಾಸಕೋಶದ ರೋಗ), ಮೂಲವ್ಯಾಧಿ, ಭಗಂದರ (Fistula), ಹೃದ್ರೋಗ, ಶುಕ್ರರೋಗ, ಮೂತ್ರರೋಗ, ಅಜೀರ್ಣ, ಬಾವು, ಕೃತ್ರಿಮ ವಿಷ, ಉದರದ ತೊಂದರೆ, ಕಾಸ (ಕೆಮ್ಮು), ರಕ್ತ ಪ್ರದರ, ರಕ್ತಪಿತ್ತ, ಗುಲ್ಮ, ಜ್ವರ ಮುಂತಾದ ಎಲ್ಲಾ ರೋಗಗಳು ವಾಸಿಯಾಗುತ್ತವೆ.

32. ದಾರ್ವಿತ್ವಕ್ ತ್ರಿಫಲಾ *ವೋಷ ವಿಡಬ್ಬ ಮಯಸೋ ರಜ ||

 ಮಧುಸರ್ಪಿಯಾತಂ ಲಿಖ್ಯಾತ್ ಕಮಲಾ* ಪಾಂಡುರೋಗವಾನ್ | ಶುಲ್ಕಾ *ಆಯೋರಜಃ ಪಥ್ಯಾಹರಿದ್ರಾಃ ಕ್ಷೌದ್ರ ಸರ್ಪಿಪಾ ||

 ಚೂರ್ಣಿತಾಂ ಕಾಮಾಲೀ ಲಿಹ್ಮಾದ್ ಗುಡದ್ರೇಣ ವಾಭಯಾಮ್।

 ತ್ರಿಫಲಾ ದ್ವೇ ಹರಿದ್ರೇಚ ಕಟುರೋಹಿಣ್ಯಯೋರಜಃ ||

ಕಾಮಾಲೆ ಮತ್ತು ಪಾಂಡುರೋಗವಿರುವವರು ಮರದರಿಶಿನದ ತೊಗಟೆ, ತ್ರಿಫಲ, ತ್ರಿಕಟು, ವಾಯುವಿಳಂಗ ಮತ್ತು ಲೋಹಭಸ್ಮ ಇವುಗಳ ಚೂರ್ಣವನ್ನು ಜೇನಿನೊಡನೆ ಸೇವಿಸಬೇಕು. ಕಾಮಾಲೆ ಇರುವವರು ಲೋಹ ಭಸ್ಮ, ಅಳಲೆಕಾಯಿ ಮತ್ತು ಅರಿಸಿನದ ಸಮಭಾಗ ಚೂರ್ಣವನ್ನು ತುಪ್ಪ ಅಥವಾ ಜೇನಿನೊಡನೆ ಸೇವಿಸಬೇಕು ಅಥವಾ ಅಳಲೆಕಾಯಿ ಚೂರ್ಣ ಒಂದನ್ನೇ ಬೆಲ್ಲ / ಜೇನಿನೊಡನೆ ಸೇವಿಸಬೇಕು ಅಥವಾ ತ್ರಿಫಲ, ಅರಿಸಿನ, ಮರದರಿಶಿನ, ಕಟುಕ ರೋಹಿಣಿ, ಲೋಹಭಸ್ಮ ಇವುಗಳ ಚೂರ್ಣವನ್ನು ತುಪ್ಪ ಜೇನಿನೊಡನೆ ಸೇವಿಸಿದರೆ ಕಾಮಾಲೆ ವಾಸಿಯಾಗುತ್ತದೆ.

 ಎರಡನೆ ವಿಧದ ಮಂಡೂರ ವಟಕ

33. ತೂಷಣಂ ತ್ರಿಫಲಾಂ ಚ ಚಿತ್ರಕಂ ದೇವದಾರು ಚ |

 ವಿಡಜ್ಞಾನ್ನಥ ಮುಸ್ತಞ್ಚ ವತ್ಸಕ ಞ್ಚ ಶಿ ಚೂರ್ಣಯೇತ್ | ಮಂಡೂರತುಲ್ಯ ಚೂರ್ಣಂತು ಗೋಮೂತ್ರಷ್ಟಗುಣೇ। ಪಚೇತ್||

 *ತನ್ನೈ: ಸಿದ್ಧಾಸೃಥಾ ಶೀತಾಃ ಕಾರ್ಯಾ: ಕರ್ಷಸಮಾ ಗುಡಾಃ | ಯಥಾಗ್ನಿ ಭಕ್ಷಣೀಯಾಸ್ತೇ ಪೀಹಪಾಂಡ್ಯಾಮಯಾಪಹಾಃ ॥

 *ಗ್ರಹಣ್ಯ ರ್ಶೋನುದವ ತಕ್ರ ವಾಟ್ಯಾಶಿನಾಃ ಸ್ಮೃತಾ ||

ತ್ರಿಕಟು, ತ್ರಿಫಲ, ಚವಕ, ಚಿತ್ರಮೂಲ, ದೇವದಾರು, ವಾಯುವಿಳಂಗ, ಜೇಕಿನಗೆಡ್ಡೆ, ಹಲಗತ್ತಿ ತೊಗಟೆ, – ಇವುಗಳ ಸಮಚೂರ್ಣ ತೆಗೆದುಕೊಳ್ಳಬೇಕು. ಈ ಒಟ್ಟು ಚೂರ್ಣಕ್ಕೆ ಸಮ ಇರುವಂತೆ ಮಂಡೂರ ಚೂರ್ಣವನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣದ 8 ಭಾಗದ ಪ್ರಮಾಣದ ಗೋಮೂತ್ರಕ್ಕೆ ಮಿಶ್ರಣ ಮಾಡಿ ಮಂದಾಗ್ನಿಯಲ್ಲಿ ಕುದಿಸಿ ಗಟ್ಟಿಯಾದ ನಂತರ ಒಂದು ತೊಲ ಪ್ರಮಾಣದ ಗುಳಿಗೆ ಮಾಡಬೇಕು. ಈ ಗುಳಿಗೆಯನ್ನು ಸೇವಿಸುವುದರಿಂ ಪ್ರೀಹ, ಪಾಂಡು, ಸಂಗ್ರಹಿಣಿ ಮತ್ತು ಮೂಲವ್ಯಾಧಿ ಗುಣವಾಗುತ್ತದೆ. ಮಜ್ಜಿಗೆ ಮತ್ತು ಜವೆಯ ಮಂಡದ ಪಥ್ಯದಲ್ಲಿರಬೇಕು.

 ಜೀರಕಾದ್ಯಾರಿಷ್ಟ

34. ದ್ವಿಜೀರಕ ಫಲಾನೃಷ್ಟೌ ತ್ರಿಫಲಾಯಾಶ್ಚ ವಿಂಶತಿಃ ॥

 ದ್ರಾಕ್ಷಾಯಃ ಪಞ್ಚ ಲಾಕ್ಷಾಯಾಃ ಸಪ್ತ ದ್ರೋಣೇ ಜಲಸ್ಕ ತಕ್ | ಸಾಧ್ಯಂ *ಪಾದಾವಶೇಷೇ ಚ ಪೂತಶೀತೇ ಪ್ರದಾಪಯೇತ್ || 

 ಶರ್ಕರಾಯಾಸ್ತುಲಾಂ ಪ್ರಸ್ಥಂ ಕ್ಷಾದ್ರಂ ದದ್ಯಾಚ ಕಾರ್ಷಿಕೆಮ್ | ವೋಷವ್ಯಾಘ್ರನಖೋಶಿರಂ ಕ್ರಮುಕಂ ಸೈಲವಾಲುಕಮ್ ||

 ಮಧೂಕಂ ಕುಷ್ಠಮಿತ್ಯೇತ ಚೂರ್ಣಿತಂ ಘೃತಭಾಜನೇ | ಯವೇಷು ದಶರಾತ್ರಸ್ಥಂ ಗ್ರೀಷ್ಟೇ ದ್ವಿ: ಶಿಶಿರೇ ಸ್ಥಿತಮ್ ||

 *ಪಿಬೇತ್ ತದ್ ಗ್ರಹಣೀಪಾಂಡುರೋಗಾರ್ಶ: ಶೋಧಗುಲ್ಮನುತ್ | ಮೂತ್ರಕೃಚ್ಛಾಶ್ವರೀ ಮೇಹಕಾಮಲಾಸನ್ನಿಪಾತಾನುತ್ ||

ಜೀರಿಗೆ 32 ತೊಲ, ಶಾ ಜೀರಿಗೆ 32 ತೊಲ, ತ್ರಿಫಲ 80 ತೊಲ, ದ್ರಾಕ್ಷಿ 20 ತೊಲ, ಅರಗು 28 ತೊಲ, ನೀರು 2 ದ್ರೋಣ (2048 ತೊಲ) ಹಾಕಿ ಕುದಿಸಿ ¾ ಭಾಗ ಉಳಿದ ನಂತರ ಸೋಸಿ ಆರಿದ ನಂತರ ಅದಕ್ಕೆ 400 ತೊಲ ಸಕ್ಕರೆ, 128 ತೊಲ ಜೇನು, ತ್ರಿಕಟು, ವ್ಯಾಘ್ರನಖ, ಬಾಳದ ಬೇರು, ಅಡಿಕೆ, ಸುರಸುರಿಕೆ, ಇಪ್ಪೆ ಹೂ, ಕೋಷ್ಠ ಇವುಗಳನ್ನು ತಲಾ 1 ತೊಲ ತೆಗೆದುಕೊಂಡು ಜೇನು ಮಿಶ್ರಣ ಮಾಡಿದ ಕೊಳಗಕ್ಕೆ ಹಾಕಿ ಜವೆ ರಾಶಿಯಲ್ಲಿ ಬೇಸಿಗೆಯಾಗದರೆ 10 ದಿನ, ಚಳಿಗಾಲವಾದರೆ 20 ದಿನ ಹುದುಗಿಟ್ಟು ನಂತರ ಅರಿಷ್ಟವನ್ನು ಸೇವಿಸಿದರೆ ಸಂಗ್ರಹಿಣಿ, ಪಾಂಡುರೋಗ ಮೂಲವ್ಯಾಧಿ, ಬಾವು, ಗುಲ್ಮ, ಉರಿಮೂತ್ರ, ತಡಮೂತ್ರ ಕಾಮಾಲೆ, ಸನ್ನಿಪಾತ ನಿವಾರಣೆಯಾಗುತ್ತದೆ. ಇದು ಆತ್ರೇಯರಿಂದ ಹೇಳಲ್ಪಟ್ಟ ಜೀರಕಾರಿಷ್ಟ.