ಮನೆ ಆರೋಗ್ಯ ತ್ರಿಫಲ

ತ್ರಿಫಲ

0

 ಅಮೃತ ಧೃತ

 ಶಿರೀಷತ್ವಕ್ ತ್ರಿಕಟುಕಂ ತ್ರಿಫಲಾ ಚಂದನೋತ್ಸಲೇ |

 ದ್ವೇಬಲೇ ಸಾರಿವೇ ಶ್ವೇತಾ ಸುರಭೀನಿಂಬಪಾಟಲಾ ||

Join Our Whatsapp Group

 ಬಂಧುಜೀವಾಢಕೀಮೂರ್ವಾವಾಸಾಸುರಸವತ್ಸಕಾನ್ | ಪಾಠಾಂಕೋಲಾಶ್ಚ ಗಂಧಾರ್ಕಮೂಲಯಷ್ಮಾಹ್ನ ಪದ್ಮಕಾನ್ II

 ವಿಶಾಲಾಂ ಬೃಹತೀಂದ್ರಾಕ್ಷಾಂ ಕೋವಿದಾರಂ ಶತಾವರೀಮ್ | ಕಟಭೀದಂತ್ಯಪಾಮಾರ್ಗ ಪ್ರಶ್ನೆ ಪರ್ಣೀರಸಾಂಜನಮ್

 ಶ್ವೇತೌ ಬಾಣಾಶ್ವಖುರಕೌ ಕುಷ್ಠದಾರುಪ್ರಿಯಂಗುಕಾನ್ । ವಿದಾರೀಂ ಮಧುಕಾತ್ ಸಾರಂ ಕರಂಜನ್ಮ ಫಲತ್ವಚೌ ॥

 ರಜಸ್ಯೌ ಲೋದ್ರಮಕ್ಷಾಂಶಂ ಪಿಷ್ಟ್ವಾಸಾಧ್ಯಂ ಪ್ರತಾಢಕಮ್ | ತುಲ್ಕಾಂಬುಚ್ಚಾಗಗೋಮೂತ್ರಾಢಕೇ ತದ್ವಿಪಾಪಹಮ್ ||

 ಅಪಸ್ಸ್ಮಾರಜ್ಜರೋನಾದಭೂತಗ್ರಹಗರೋದರಮ್ ।

 ಪಾಂಡುರೋಗಾನ್ ಕ್ರಿಮೀನ್ ಗುಲ್ಮಾನ್ ಫೀಹೋರುಸ್ತಂಭಕಾ ಮಲಾಃ ||

 ಹನುಸ್ಕಂದಗ್ರಹಾದೀಂಶ್ಚ ಪಾನಾಭ್ಯಂಜನನಾವನೈಃ |

 ಹನ್ಯಾತ್ ಸಂಜೀವಯೇಚ್ಛಾಶು ವಿಷೋದ್ವೇಗಮೃತಾನ್ ನರಾನ್ ||

ಶಿರಿಷದ ತೊಗಟೆ, ತ್ರಿಕಟು, ತ್ರಿಫಲ, ಚಂದನ, ನೀಲಕಮಲ, ಕಳ್ಳಂಗಡಲೆ, ಮುದ್ರೆ, ಅನಂತಮೂಲ, ಕರಿ ಅನಂತಮೂಲ, ಬಿಳೇ ಗೋಕಣೆ, ರಾಬೇವುಸ್ಮೆ, ಬೇವು,, ಪಾದರಿ, ಬಂಧುಜೀವ (Ixora coccinea), ತೊಗರಿ, ಹೆಗೊರಟಿಗೆ, ಅಡಸಲ, ತುಳಸಿ, ಇಂದ್ರಜವ, ಅಗಿಲುಶುಂಠಿ, ಅಂಕೋಲೆ, ಅಶ್ವಗಂಧ, ಎಕ್ಕದ ಬೇರು, ಜೇಷ್ಠಮಧು, ಪದ್ಮ ಕಾಷ್ಟ್ರ, ಕಾಕಡ ವಡಿಯ ಬೇರು, ಹಬ್ಬುಗುಳ್ಳ, ದ್ರಾಕ್ಷಿ, ಕೋವಿದಾರ (ಕಂಚುವಾಳ), ಶತಾವರಿ, ಕಟಭಿ (ಗಿರಿಕರ್ಣಿಕೆ), ದಂತಿಮೂಲ, ಉತ್ತರಾಣಿ, ಮೂರೆಲೆ ಹೊನ್ನೆ, ರಸಾಂಜನ, ಶ್ವೇತಬಾಣ, ಆಶ್ವಯರ (ಉತ್ತರಾಣಿ) ಕೊಪ್ಪ, ದೇವದಾರು, ಗದ್ದಾಲ, ನೆಲಗುಂಬಳ, ಇಪ್ಪೆಕೆಚ್ಚು, ಹುಲಗಲಿಯ ಫಲ ಮತ್ತು ತೊಗಟೆ, ಅರಿಸಿನ, ಮರದರಿಸಿನ, ಲೋಧ್ರ – ಇವುಗಳನ್ನು ತಲಾ 1 ತೊಲ (11.66 ಗ್ರಾಂ) ಪ್ರಮಾಣ ತೆಗೆದುಕೊಂಡು ಕಲ್ಕ ಮಾಡಿ 8 ಪ್ರಸ್ಥ (1 ಪ್ರಸ್ಥ = 768 ಗ್ರಾಂ), ನೀರು, ತಲಾ 12 ಪ್ರಸ್ಥ ಆಡಿನ ಮೂತ್ರ ಮತ್ತು ಗೋಮೂತ್ರ ಮತ್ತು 8 ಪ್ರಸ್ಥ ಧೃತ ಸೇರಿಸಿ 8 ಪ್ರಸ್ಥ ಘೃತವನ್ನು ಉಳಿಯುವಂತೆ ಕಾಯಿಸಿದರೆ ಅಮೃತ ಘೃತ ಸಿದ್ಧವಾಗುತ್ತದೆ. ಈ ಘೃತವನ್ನು ಸೇವಿಸುವುದರಿಂದ, ಅಭ್ಯಂಗಕ್ಕೆ ಉಪಯೋಗಿಸುವುದರಿಂದ ಮತ್ತು ನಸ್ಯದಂತೆ ಬಳಸುವುದರಿಂದ ಎಲ್ಲಾ ಬಗೆಯ ವಿಷ, ಅಪಸ್ಮಾರ, ಜ್ವರ, ಉನ್ಮಾದ, ಭೂತಭಾದೆ, ಗ್ರಹಪೀಡೆ, ಕೃತ್ರಿಮ ವಿಷ, ಉದರ ರೋಗ, ಪಾಂಡುರೋಗ, ಕ್ರಿಮಿ, ಗುಲ್ಮ, ಪ್ಲೀಹ, ಉರುಸ್ತಂಭ, ಕಾಮಾಲೆ, ಹನುಸ್ಥಂಬ ಮತ್ತು ಹೆಗಲು ಬಿಗಿಯುವುದು ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ. ಅಮೃತಕ್ಕೆ ಸಮಾನವಾದ ಘೃತವೆಂದು ಪರಿಗಣಿಸಲಾಗಿದೆ. ವಿಷದ ಬಾಧೆಯಿಂದ ಸತ್ತವರನ್ನೂ ಬದುಕಿಸಬಲ್ಲದು.

 ಅಧ್ಯಾಯ – 25

45. ತ್ರಿಫಲಾ ಖದಿರೊ ದಾರ್ವಿನ್ಯಗೋದಾದಿರ್ಬಲಾ ಕುಶಾ |

. ನಿಂಬಕೋಲಕ ಪತ್ರಾಣಿ ಕಷಾಯಾಃ ಶೋಧನೇ ಹಿತಾ: |

    ತ್ರಿಫಲ ಚೂರ್ಣ ಖದೀರ, ಮರದರಸಿನ ಅಲ ಇವುಗಳ ತೊಗಟೆ,ಬಲಮೂಲ ಖುಷಿ ದರ್ಬೆ,ಬೇವು,ಗಳ ಬೇವು ಮತ್ತು ಎಳಚಿ ಎಲೆಗಳ ಕಷಾಯದಿಂದ ವರ್ಣವನ್ನು ತೊಳೆಯುವುದರಿಂದ ವರ್ಣಮಾಸಿಯಾಗುತ್ತದೆ.

46. ಕಂಪಿಲ್ಲಕ ವಿಡಂಗಾನಿ ವತ್ಸಕಂ ತ್ರಿಫಲಾಂ ಬಲಾಂ  ||47.  ಪಟೋಲಂ ಪಿಚುಮರ್ದಂ ಚ ಲೋದ್ರಂ ಮುಸ್ತಂ ಪ್ರಿಯಂಗುಕಂ | *ದಾತಕೀಂ ಖದಿರಂ ಸರ್ಜಮೇಲಾಮ ಗುರುಚಂದನಂ ||

 ಪಿಷ್ಟಾ ಸಾಧ್ಯಂ ಭವೇತ್ ತೈಲಂ ತತ್ತರಂ ಪ್ರಣರೋಪಣಂ ।

ಕಂಪಿಲ್ಲಕ, ವಾಯುವಿಳಂಗ, ಹಲಗತ್ತಿ, ತ್ರಿಫಲ, ಬಲಾ, ಕಹಿಪಡವಲ, ಬೆನ್ನ ಲೋದ್ಧ, ಮುಸ್ತ, ಪ್ರಿಯಂಗು, ದಾತಕೀ ಕುಸುಮ, ಖದಿರ, ರಾಳ, ಅಗರು, ಚಂದನ ಇವೂ ಕಲ್ಕದಿಂದ ಸಿದ್ದಪಡಿಸಿದ ತೈಲ ವ್ರಣ ಚಿಕಿತ್ಸೆಗೆ ಉಪಯುಕ್ತ.

47. ಲೋದ್ರ ನ್ಯ ಗೋಧರುಂಗಾಶ್ಚ ಖದರಿಂ ತ್ರಿಫಲಾ ಘೃಂತಂ

  ಪ್ರಲೇಪೋ ಪ್ರಣ ಶೈಧಿಲ್ಯ ಸೌಕುಮಾರ್ಯ ಪ್ರಸಾದಃ ||

ಲೋಧ್ರ, ಆಲದ ಬಿಳಿಲು ಬೇರು, ಖದಿರ, ತ್ರಿಫಲ ಮತ್ತು ತುಪ್ಪ ಉಪಯೋಗಿ ತಯಾರಿಸಿದ ಘೃತವನ್ನು ವಣದ ಮೇಲೆ ಲೇಪಿಸಿದರೆ ತಂಪುಂಟಾಗುತ್ತದೆ.

48. ಆಯೋರಜಃ ಸಕಾಶೀಶಂ ತ್ರಿಫಲ ಕುಸುಮಾನಿ ಚ ॥  *ಪ್ರಲೇಪಃ ಕುರುತ್ತೇ ಕಾಷ್ಟ್ರ್ರ೦ ಸದ್ಯ ಏವ ನವತ್ವ ಚೆ |

ಲೋಹದ ಚೂರ್ಣ, ಹಿರಾಕಸ, ತ್ರಿಫಲ ಹೂಗಳಿಂದ ತಯಾರಿಸಿದ ಲೇಪನವಾ ಹೊಸದಾಗಿ ಉಂಟಾದ ಹುಣ್ಣಿನ ಮೇಲೆ ಲೇಪಿಸಿದರೆ ಹುಣ್ಣು ವಾಸಿಯಾಗಿ ಚರ್ಮ ಮೊದಲಿನ ಬಣ್ಣ ಪಡೆಯುತ್ತದೆ.

 ಅಧ್ಯಾಯ – 26

 ತೂಷಣಾದಿ ಧೃತ

49. ಸ್ಮಾತ್ ಶೂಷಣಂ ದ್ವೇ ತ್ರಿಫಲೇ ಸಪಾರೇ ನಿದಿಗ್ರಿಕಾ ಗೋಕ್ಷುರಕಾ ಬಲೇ ದ್ವೇ |

 ಮೇದೇ ತ್ರುಟಿಸ್ವಾಮಲಕೀ ಸ್ವಗುಪ್ತಾ ತೃಟರ್ಮಧೂಕಂ ಸ್ಥಿರಾ ಚ ||

 ಶತಾವರೀ ಜೀವಕಪೃಶ್ನಿಪರ್ಣ್ಯೌ ದ್ರರಕ್ಷಸಮ್ಮವ್ಯೖರಿಮೈರಕ್ಷಸಮೈಃ ಸುಪಿಷ್ಟೈ |

 ಪ್ರಸ್ಥಂ ಘೃತಸ್ಯ ಪ್ರಪಚೀದ್ ವಿದಿಜ್ಞಃ ಪ್ರಸೇನದಧ್ನಾತ್ಮಥ ಮಹಿಷೇಣ ! ||

 ಮಾತ್ರಾಂ ಪಲಂ ಚಾರ್ಧಫಲಂ ಪಿಚುಂ ವಾ ಪ್ರಯೋಜಯೇನಾಕ್ಷಿಕ

 ಸಂಪ್ರಯುಕ್ತಂ 1|

*

 ಶ್ವಾಸೇ ಸಕಾಸೇ ತ್ವಥ ಪಾಂಡುರೋಗೇ ಹಲೀಮಕೇ ಹೃದ್ಧ ಹಣೀ ಪ್ರದೋಷೇ II

ತ್ರಿಕಟು, 2 ವಿಧದ ತ್ರಿಫಲ (ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ದ್ರಾಕ್ಷಿ, ಶಿವಾ, ಪರೂಪಕ), ಅಗಿಲಶುಂಠಿ, ನೆಲಗಳ್ಳ, ನೆಗಿಲು, ಬಲಾ, ಅತಿಬಲಾ, ಮೇದಾ, ಏಲಕ್ಕಿ, ನೆಲನೆಲ್ಲಿ, ನಸಗುನ್ನಿ ಬೀಜ, ದೊಡ್ಡ ಏಲಕ್ಕಿ, ಇಪ್ಪೆ ಹೂ, ಜೇಷ್ಠಮಧು, ಒಂದಲೆ ಹೊನ್ನೆ, ಶತಾವರಿ, ಜೀವಕ, ಮೂರೆಲೆ ಹೊನ್ನೆ – ಇವುಗಳನ್ನು ತಲಾ 1 ತೊಲ ತೆಗೆದುಕೊಂಡು ಚೂರ್ಣ ಮಾಡಿ, 128 ತೊಲ ಎಮ್ಮೆಯ ಮೊಸರು ಹಾಕಿ 128 ತೊಲ ತುಪ್ಪವನ್ನು ಸೇರಿಸಿ ಘೃತ ತಯಾರಿಸಬೇಕು. ಈ ಘೃತವನ್ನು 4 ತೊಲೆ ಅಥವಾ 2 ತೊಲೆ ಅಥವಾ 1 ತೊಲೆ ಪ್ರಮಾಣದ ನೇನುತುಪ್ಪದೊಡನೆ ಸೇವಿಸಬೇಕು. ಇದರ ಸೇವನೆಯಿಂದ ಶ್ವಾಸ, ಕಾಸ, ಪಾಂಡುರೋಗ, ಹಲೀಮ್, ಹೃದ್ರೋಗ, ಗ್ರಹಣಿ ಮುಂತಾದ ರೋಗಗಳು ವಾಸಿಯಾಗುತ್ತವೆ (1 ತೊಲ = 11.66 ಗ್ರಾಂ )

 ಲಘು ಮಯೂರ ಧೃತ

 *50.ದಶಮೂಲಬಲಾರಾಸ್ನಾ ತ್ರಿಫಲಾ ಮಧುಕ್ಕೆ: ಸಹ | ಮಯೂರಂ*ಪಕ್ಕಪಿತ್ತಾಂತ್ರಶಕೃತ್ ಪಾವಾಸ್ಯ ವರ್ಜಿತಮ್  ||

 ಜಲೇ ಪಕ್ತ್ವಾ ಘೃತಪ್ರಸ್ಥಂ ತಸ್ಮಿನ್ ಕ್ಷೀರಸಮಂ ಪಚೇತ್ 1

 ಮಧುರೈ ಕಾರ್ಷಿಕೈ: ಕಲ್ಕೈಃ ಶಿರೋರೋಗಾರ್ಧಿ ತಾಪಾಹಮ್ ||

 ಕರ್ಣನಾ ಸಾಕ್ಷಿ ಜಿಹ್ವಾಸ್ಯ ಗಲರೋಗ ವಿನಾಶನಮ್ | ಮಯೂರ *ಮಿತಿ ವಿಖ್ಯಾತ ಮೂರ್ಧ್ವ ಜತ್ರುಗದಾಪಹಮ್ ||

ದಶಮೂಲ, ಬಲಾಮೂಲ, ರಾಸ್ನ, ತ್ರಿಫಲ, ಜೇಷ್ಠಮಧು, ಈ 16 ಔಷಧಿಗಳನ್ನು ತಲಾ 6 ತೊಲೆಯಂತೆ ಒಟ್ಟು 96 ತೊಲ ತೆಗೆದುಕೊಂಡು, ಪಕ್ಷಪಿತ್ತ, ಕಾಲುಮೋರೆಗಳನ್ನು ತೆಗೆದು ಹಾಕಿದ ನವಿಲಿನ (ಮಾಂಸ ಆಸ್ಥಿ) ದೇಹವನ್ನು 96 ತೊಲೆ ತೆಗೆದುಕೊಂಡು 8 ಭಾಗ್ ನೀನು ಸೇರಿಸಿ ಕುದಿಸಿ ¾ ಕಷಾಯ ಉಳಿಸಿ ಅದಕ್ಕೆ ತಲಾ ಒಂದು ತೊಲ ಜೀವನೀಯ ಮತ್ತು ಕಾಕೋಲಿ ಗಣದ ಔಷಧಿಗಳ ಕಲ್ಕವನ್ನು ಹಾಕಿ ಕುದಿಸಿ ತಯಾರಿಸಿದ ಘೃತವನ್ನು ಲಘ ಮಯೂರ ಘೃತ ಎಂದು ಕರೆಯುತ್ತಾರೆ. ಇದನ್ನು ನಸ್ಯದಂತೆ ಉಪಯೋಗಿಸುವುದರಿಂದ ತಲೆನೋವು, ಆರ್ದಿತಗಳನ್ನು ಗುಣಪಡಿಸುತ್ತದೆ. ಕಿವಿ, ಮೂಗು, ಕಣ್ಣು, ನಾಲಿಗೆ ಮತ್ತು ಕಂಠದ ರೋಗಗಳನ್ನು ಗುಣಪಡಿಸುತ್ತದೆ.