ಮನೆ ಸುದ್ದಿ ಜಾಲ ಟಿಬೆಟನ್ನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಟಿಬೆಟನ್ನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

0

ಮೈಸೂರು:  ಚೀನಾ ದೇಶದ ವಿರುದ್ಧ 63ನೇ ರಾಷ್ಟ್ರೀಯ ಬಂಡಾಯ ದಿನವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಟಿಬೆಟನ್ನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ  ಟಿಬೆಟನ್ ಯೂತ್ ಕಾಂಗ್ರೆಸ್, ಪ್ರಾಂತೀಯ ಟಿಬೆಟನ್ ಮಹಿಳಾ ಸಂಘ, ಮೈಸೂರು ಟಿಬೆಟನ್ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದರು.

ಟಿಬೆಟನ್ ಯೂತ್ ಕಾಂಗ್ರೆಸ್‌ನ ಅಧ್ಯಕ್ಷ ಸಿರಿಂಗ್ ಆಕ್ಸಪ್‌ ಮಾತನಾಡಿ, ಚೀನಾ ದೇಶವು ಅತ್ಯಂತ ವ್ಯವಸ್ಥಿತವಾಗಿ ಟಿಬೆಟ್‌ ಭಾಷೆ, ಸಂಸ್ಕೃತಿ ಹಾಗೂ ಧರ್ಮವನ್ನು ಮಾತ್ರವಲ್ಲ ಒಟ್ಟಾರೆ ಅಸ್ಮಿತೆಯನ್ನೇ ನಾಶಪಡಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಟಿಬೆಟ್ ಭಾಷಾ ಕಲಿಕೆಯನ್ನೇ ಚೀನಾ ನಿಷೇಧಿಸಿದೆ. ಇದು ಇಂದು ಕೇವಲ ಟಿಬೆಟ್ ಸಮಸ್ಯೆ ಎಂಬಂತೆ ಕಾಣುತ್ತಿದೆ. ಆದರೆ, ಭವಿಷ್ಯದಲ್ಲಿ ಇದು ಭಾರತ ಹಾಗೂ ಏಷ್ಯಾ ಖಂಡದ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.

 ‘ಟಿಬೆಟ್ ಸಮಸ್ಯೆಗೆ ದಲೈಲಾಮಾ ಅವರು ಸೂಚಿಸಿರುವ ಪರಿಹಾರವನ್ನು ಚೀನಾ ಸರ್ಕಾರ ಒಪ್ಪಿಕೊಳ್ಳಬೇಕು. ಕೇಂದ್ರೀಯ ಟಿಬೆಟಿಯನ್ ಆಡಳಿತದೊಂದಿಗೆ ಮಾತುಕತೆಗೆ ಮುಂದಾಗಬೇಕು, ಪಂಚೆನ್ ಲಾಮಾ ಹಾಗೂ ಇತರೆ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು, ಟಿಬೆಟಿಯನ್ನರ ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಭಾವನೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಲೇಖನವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮಹಿಳೆಯ ಬಂಧನ, ಇಬ್ಬರ ರಕ್ಷಣೆ
ಮುಂದಿನ ಲೇಖನಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಶತಾಬ್ದಿ ಎಕ್ಸ್​ಪ್ರೆಸ್: ಓರ್ವ ಸಾವು