ಮನೆ ರಾಜ್ಯ ಹುಲಿ ಉಗುರು ಪ್ರಕರಣ: ಕಾಯ್ದೆ ಉಲ್ಲಂಘಿಸಿದವರ ಮೇಲೆ ಕ್ರಮ ಆಗಲಿ- ಬಿ.ಕೆ.ಹರಿಪ್ರಸಾದ್

ಹುಲಿ ಉಗುರು ಪ್ರಕರಣ: ಕಾಯ್ದೆ ಉಲ್ಲಂಘಿಸಿದವರ ಮೇಲೆ ಕ್ರಮ ಆಗಲಿ- ಬಿ.ಕೆ.ಹರಿಪ್ರಸಾದ್

0

ಚಿತ್ರದುರ್ಗ: ಫ್ಯಾಷನ್ ​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಲಿ ಎಂದು ಕಾಂಗ್ರೆಸ್​​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಕೂಡ ನವಿಲು ಗರಿ ಧರಿಸಿದ್ದರು. ನವಿಲು ಸಾಕಿದ್ದ ಪ್ರಧಾನಮಂತ್ರಿ ಹಿಡಿದುಕೊಂಡು ಹೋಗಬೇಕಾ. ನವಿಲುಗರಿ ನೈಸರ್ಗಿಕವಾಗಿ ಉದುರುತ್ತೆ, ಕೊಂದರೆ ಕ್ರಮ ಆಗಲಿ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜಕೀಯದ ವಿಲನ್​ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ವಕ್ತಾರ ಅಲ್ಲ, ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ. ವಿಲನ್ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.​​

ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ, ಆಡಳಿತಾತ್ಮಕವಾಗಿ ಜಿಲ್ಲೆಗಳ ರಚನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್, ಸುರ್ಜೇವಾಲ, ವೇಣುಗೋಪಾಲ್, ಸಿಎಂ ಮತ್ತು ಡಿಸಿಎಂಗೆ ಮಾತ್ರ ಈ ಬಗ್ಗೆ ಗೊತ್ತಿದೆ. ಬೇರೆ ಯಾರೂ ಹೇಳಲು ಆಗಲ್ಲ, ಅಭಿಪ್ರಾಯ ಹೇಳಬಹುದು ಅಷ್ಟೇ ಎಂದಿದ್ದಾರೆ.