ಮನೆ ರಾಜ್ಯ ಹುಲಿ ಸಂತತಿ ಏರಿಕೆ ಕುಸಿತ: ಮೈಸೂರಿನಲ್ಲಿ ಪ್ರಧಾನಿಯಿಂದ ವರದಿ ಬಿಡುಗಡೆ

ಹುಲಿ ಸಂತತಿ ಏರಿಕೆ ಕುಸಿತ: ಮೈಸೂರಿನಲ್ಲಿ ಪ್ರಧಾನಿಯಿಂದ ವರದಿ ಬಿಡುಗಡೆ

0
ಸಾಂದರ್ಭಿಕ ಚಿತ್ರ

ಮೈಸೂರು: ಬಹುನಿರೀಕ್ಷಿತ ಹುಲಿ ಯೇಜನೆ ಗಣತಿಯ ಐದನೇ ಆವೃತ್ತಯ ನಾಲ್ಕು ವರ್ಷಗಳ ವರದಿ ಮೈಸೂರಿನಲ್ಲಿ  ಭಾನುವಾರ ಬಿಡುಗಡೆಯಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

Join Our Whatsapp Group

ಹಿಂದಿನ 3 ಅವಧಿಯಲ್ಲಿ ಹುಲಿಗಳ ಸಂಖ್ಯೆ ಏರುಗತಿಯಲ್ಲೇ ಇತ್ತಾದರೂ ಈ ಬಾರಿ ಅದು ಕುಸಿತ ಕಂಡಿದೆ. ಮೂರು ಅವದಿಯಲ್ಲಿ  ಏರಿಕೆಯಾದ ಹುಲಿಗಳ ಪ್ರಮಾಣ 1556. ಮೊದಲ ಬಾರಿಗೆ ಹುಲಿ ಸಂಕ್ಯೆಯಲ್ಲಿ ಇಳಿಕೆ ಕಂಡುಬಂದರು ಹಿದಿನ ಅವಧಿಗೆ ಹೋಲಿಸಿದರೆ ಬರೀ 200 ಹುಲಿಗಳು ಹೆಚ್ಚಳವಾಗಿರುವುದು ಸಮಾಧಾನಕಾರ ಸಂಗತಿ.   ಆದರೆ ಹುಲಿಗಳ ಅಂದಾಜು ತಿಳಿಯುವ ರಾಜ್ಯಾವಾರು ಹುಲಿಗಳ ಸಂಖ್ಯೆ ವರದಿ ಮಾತ್ರ ಬಿಡುಗಡೆಯಾಗಿಲ್ಲ.  ಬಿಡುಗಡೆಯಾದಾಗ ರಾಜ್ಯಾವಾರು ಹುಲಿಗಣತಿಯ ಸ್ಪಷ್ಟ ಚಿತ್ರಣ ಸಿಗಬಹುದು ಎನ್ನುವ ವಿರೀಕ್ಷೆಯಿದೆ.

ಹುಲಿ ಗಣತಿ ವರದಿ ಬಿಡುಗಡೆ ಕಾರ್ಯಕ್ರಮ ಮೊದಲ ಬಾರಿ ದಿಲ್ಲಿಯಿಂದ ಹೊರಗಡೆ ಮೈಸೊರಿನಲ್ಲಿ  ಆಯೋಜನೆಗೊಂಡಿದ್ದು, ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ನೇತೃತ್ವದಲ್ಲಿ ನಾನಾ ಸಂಸ್ಥೆಗಳು ಕಳೆದ ವರ್ಷ ನಡೆಸಿದ್ದ ಹುಲಿ ಗಣತಿ ವರದಿಯನ್ನು ಮೈಸೂರಿನಲ್ಲಿ ಪ್ರಧಾನಿ ಮೋದಿ ಭಾನುವಾರ ಬಿಡುಗಡೆ ಮಾಡಿದರು.  ಇದರೊಟ್ಟಿಗೆ ಹುಲಿ ಯೋಜನೆ ಪ್ರದೇಶದ ನಿರ್ವಹಣಾ ವರದಿಯೂ ಬಿಡುಗಡೆಯಾಗಿದ್ದು, 53 ಹುಲಿ ಯೋಜನಾ ಪ್ರದೇಶಗಳಲ್ಲಿ ಕರ್ನಾಟಕದ ಐದು  ಪ್ರದೇಶಗಳು  ಟಾಪ್‌ 10ರಲ್ಲಿಯೇ ಸ್ಥಾನ ಪಡೆದಿದೆ.

ಈ ಬಾರಿ ಕೇರಳದ ಪೆರಿಯಾರ್‌ ಹುಲಿ ಪ್ರದೇಶ ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕದ ಬಂಡೀಪುರ ಹಾಗೂ  ಮಧ್ಯಪ್ರದೇಶದ ಸತ್ಪುರ ಪ್ರದೇಶ 2ನೇ ಸ್ಥಾನ ಹಂಚಿಕೊಂಡಿದೆ. ನಾಗರಹೊಳೆ(3), ಬಿಳಿಗಿರಿರಂಗನಾಥ ಹುಲಿ ಧಾಮ (6), ಭದ್ರಾ(9), ಅಣಶಿ-ಕಾಳಿ(10), ನೇ ಸ್ಥಾನ ಪಡೆದಿದೆ.