ಮನೆ ಪೌರಾಣಿಕ ಕಾಲಸ್ವರೂಪ

ಕಾಲಸ್ವರೂಪ

0

     ಭೂಮಂಡಲಕ್ಕೆ ಸರ್ವ ಮಧ್ಯವಾಗಿ ನಿಂತಿರುವ ಮೇರು ಪರ್ವತದ ಶಿಖರಾಗ್ರದ ಮೇಲೆ ಕನಕ ಪ್ರಭಾಮಂಡಿತವಾದ ಬ್ರಹ್ಮ ಸಭೆಯಿದೆ. ಜ್ಯೋತಿಶ್ಚಕ್ರಗತವಾದ ಸೂರ್ಯ ಗ್ರಹವು ಸರ್ವಕಾಲ ಸರ್ವಾವಸ್ಥೆಯಲ್ಲಿಯೂ ಈ ಮೇರುವಿಗೆ ದಕ್ಷಿಣ ದಿಕ್ಕಿನಲ್ಲಿ ಸ್ಥಿತವಾಗಿದೆ. ಸೂರ್ಯ ಕಿರಣಗಳು ಉತ್ತರಕ್ಕೆ ಪ್ರಸರಿಸಿ ಸ್ವರ್ಣಾದ್ರಿಯನ್ನು ತಾಕಿದಾಗ, ಅದು ಶ್ರೀಹರಿಯ ಪರಿಷ್ಕಾಂಗಗಳಿಂದ ಪರಿವರ್ತನೆಯನ್ನು ಹೊಂದಿ ಭೂಲೋಕದಲ್ಲಿ ಹಗಲೂ ರಾತ್ರಿಗಳುಂಟಾಗುತ್ತವೆ. ಬ್ರಹ್ಮ ಸಭೆಯನ್ನು ಸುತ್ತಿಕೊಂಡು ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಿಸುತ್ತಿದ್ದಾಗ ಮಕರ ಸಂಕ್ರಾಂತಿಯಿಂದ ಹಿಡಿದು ಕುಂಭ, ಮೀನ, ಮೇಷ, ವೃಷಭ ರಾಶಿಗಳ ಮೂಲಕ ಮಿಥುನವನ್ನು ದಾಟುವವರೆಗೂ ಆರು ತಿಂಗಳ ಕಾಲವು ಉತ್ತರಾಯಣ ಕಾಲ. ಅಲ್ಲಿಂದ ಸೂರ್ಯನು ದಕ್ಷಿಣಾಭಿಮುಖವಾಗಿ ಹೊರಟು ಕರ್ಕಾಟಕದಿಂದ ಸಿಂಹ, ಪನ್ಯಾ, ತುಲಾ, ವೃಶ್ಚಿಕಗಳ ಮೂಲಕ ಧನುರ್ ರಾಶಿಯನ್ನು ಅತಿಗಮಿಸುವವರೆಗೂ ದಕ್ಷಿಣಾಯನ ಕಾಲ. ಸೂರ್ಯನ ಸಂಚಾರ ಮಾರ್ಗದಲ್ಲಿ ರಾಶಿಚಕ್ರವು ಮೂವತ್ತು ಮುಹೂರ್ತಗಳುಳ್ಳ ಹನ್ನೆರಡು ಭಾಗಗಳಾಗಿ ವಿಭಜಿಸಲ್ಪಟ್ಟಿದೆ.

Join Our Whatsapp Group

ಸೂರ್ಯನು ಒಂದೊಂದು ರಾಶಿಯಲ್ಲಿ ಎರಡು ನಕ್ಷತ್ರಗಳ ಮೇಲೆ ಒಂದು ಪಾದದಂತೆ ಇಪ್ಪತ್ತೇಳು ನಕ್ಷತ್ರಗಳನ್ನು ಯಾನ ಕ್ರಮದಲ್ಲಿ ಅಧಿಗಮಿಸಿದಾಗ ಉತ್ತರಾಯಣದಲ್ಲಿ ಹದಿಮೂರುವರೆ ನಕ್ಷತ್ರಗಳಲ್ಲಿ ಹಗಲು ಹದಿನೆಂಟು ಮುಹೂರ್ತಗಳು ರಾತ್ರಿ ಹನ್ನೆರಡು ಮುಹೂರ್ತಗಳು ಇರುತ್ತವೆ. ದಕ್ಷಿಣಾಯನದಲ್ಲಿ ಮಂದ ವೇಗವಾಗಿ ನಡೆದಾಗ ಹದಿಮೂರುವರೆ ನಕ್ಷತ್ರಗಳಲ್ಲಿ ಹಗಲು ಹನ್ನೆರಡು ಮುಹೂರ್ತಗಳು, ರಾತ್ರಿ ಹದಿನೆಂಟು ಮುಹೂರ್ತಗಳು ಕಳೆಯುತ್ತಾನೆ. ಮೇರು ಪರ್ವತಕ್ಕೆ ಪ್ರದಕ್ಷಿಣೆಯನ್ನು ಹಾಕುತ್ತಿರುವ ಸೂರ್ಯನ ಗಮನವನ್ನು ಕುಂಬಾರನ ಕೈಯಲ್ಲಿರುವ ಸಾರೆಯೊಂದಿಗೆ ಹೋಲಿಸಬಹುದು. ಕುಲಚಕ್ರ ಪರಿಧಿಯು ತುಂಬಾ ವೇಗವಾಗಿ ಸುತ್ತುತ್ತಿದ್ದಂತೆ ಸೂರ್ಯನು ದಕ್ಷಿಣಾಯನದಲ್ಲಿ ಪರಿಭ್ರಮಿಸುತ್ತಿದ್ದಾಗ ಹಗಲು ಕಡಿಮೆಯಾಗಿಯೂ, ರಾತ್ರಿಗಳು ದೀರ್ಘವಾಗಿಯೂ ಇರುತ್ತವೆ. ತಿರುಗುತ್ತಿದ್ದಾಗ ಕುಂಬಾರನ ಚಕ್ರದ ಮಧ್ಯ ಭಾಗವು ಅಲ್ಪ ವೇಗದಿಂದ ತಿರುಗುತ್ತಿದ್ದಂತೆ ಕಾಣಿಸಿ ಉತ್ತರಾಯಣ ಕಾಲದಲ್ಲಿ ಹಗಲು ನಿಧಾನವಾಗಿಯೂ, ರಾತ್ರಿ ಕಡಿಮೆಯಾಗಿಯೂ ಕಾಣಿಸುತ್ತವೆ. ಮೇಷ, ತುಲಾ ಸಂಕ್ರಮಣಗಳ ವಿಷುವತ್ಪುಣ್ಯ ಕಾಲದಲ್ಲಿ ಮಾತ್ರ ಹಗಲೂ ರಾತ್ರಿಗಳು ಸಮಭಾಗಗಳಾಗಿ ಭಾಸವಾಗುತ್ತವೆ. ಕಾಲಸ್ವರೂಪನಾದ ದ್ವಾದಶಾತ್ಮನು ಗಗನ ಪ್ರಾಂಗಣದಲ್ಲಿ ದಿವ್ಯಪ್ರಭಾ ಸಮಾನನಾಗಿ ತೇಜಸ್ಸನ್ನು ಹೊಂದಿ ತನ್ನ ದರ್ಶನವನ್ನು ಪ್ರಸಾಧಿಸಿದ ದಿನದ ವೇಳೆಗೆ ವ್ಯಷ್ಟಿ ಎಂದು, ಸೂರ್ಯ ದರ್ಶನವನ್ನು ಪಡೆಯದ ರಾತ್ರಿಯ ವೇಳೆಗೆ ಉಷ ಎಂದು ಅಭಿದಾನಗಳುಂಟಾಗಿವೆ. ಹಗಲೂ ರಾತ್ರಿಗಳ ಸಂಧ್ಯಾ ಸಮಯವು ಪ್ರತಿನಿತ್ಯವೂ ಎರಡು ರೂಪಗಳಲ್ಲಿ ವರ್ತಿಸುತ್ತವೆ. ವೃಷ್ಟಿಯು ಗತಿಸಿ ಉಷ ಪ್ರವೇಶಿಸುವ ಸಮಯಕ್ಕೆ ಸಾಯಂಸಂಧ್ಯಾ ಎಂದು ಉಷ ಕಳೆದು ವ್ಯಷ್ಟಿ ಬರುವ ಸಮಯಕ್ಕೆ ಉಷಸಂಧ್ಯಾ ಎಂದು ವ್ಯವಹರಿಸುತ್ತಾರೆ. ಉಷಸ್ಸಂಧ್ಯದಲ್ಲಿ ಸೂರ್ಯನ ತೇಜವನ್ನು ಅಗ್ನಿಯು ಸ್ವೀಕರಿಸಿ ಹಗಲಿನ ಮರ್ಯಾದೆಯನ್ನು ಪರಿಪಾಲಿಸಲು ನಿಶಾ ಸಮಯದಲ್ಲಿ ಅಗ್ನಿಯ ತೇಜವನ್ನು ಚಂದ್ರನು ಸ್ವೀಕರಿಸಿ ದೀಪ್ತಿಯನ್ನು ಹೊಂದುತ್ತಿದ್ದಾನೆ. ಈ ಉಭಯ ಸಂಧ್ಯಾಗಳಲ್ಲಿಯೂ ಸೂರ್ಯಾಗ್ನಿಯ ತೇಜಸ್ಸುಗಳು ಆಪಸ್ಸುಗಳನ್ನು ಪ್ರವೇಶಿಸಿ ಆ ನೆರಳು ಅಂಬರ ವೀಥಿಗಳಲ್ಲಿ ಪ್ರತಿಫಲಿಸುವುದರಿಂದ ಪ್ರಾತಃರುಷಸ್ಸುಗಳು ಕೆಂಪಗಾಗಿ ಅರುಣಾಂಶುರಾಗ ದೀಪ್ತಿಗಳೊಂದಿಗೆ ಪ್ರಕಾಶಿಸುತ್ತಿವೆ.

ಒಮ್ಮೆ ಪೂರ್ವ ಕಾಲದಲ್ಲಿ ಪದ್ಮ ಕಲ್ಪಾದಿಮ ಕಾಲದಲ್ಲಿ ಬ್ರಹ್ಮದೇವನು ತಪಸ್ಸಿನಲ್ಲಿ ನಿಂತು ಜಗತ್‌ಸೃಷ್ಟಿ ನಿಯಮಕ್ಕೆ ಆರಂಭಿಸಿದಾಗ ತಾಮಸಗುಣವು ಉದ್ರೇಕಗೊಂಡು ಬ್ರಹ್ಮ ಲಗ್ನದಿಂದ ಅತಿ ಭಯಾನಕ ರೂಪಗಳುಳ್ಳ ಅಸುರರು ಜನಿಸಿದರು. ಆತನ ತಪಃಶ್ಯಕ್ತಿಯು ರಾತ್ರಿಯ ರೂಪವನ್ನು ಪಡೆದು ಜಗದ್ವಾಪ್ತಿಯಾಗಿ ವ್ಯಾಪಿಸಿತು. ಆಗ ಚತುರ್ಮುಖನು ಮತ್ತೆ ಅಂತರ್ಮುಖನಾದ ಮೇಲೆ ಸತ್ತ ಗುಣವು ರೂಪ ಹೊಂದಿ ಆತನ ಮುಖ ಪದ್ಧದಿಂದ ಮನೋಜ್ಞಕಾರರಾಗಿ ಸುರರು ಜನಿಸಿದರು. ಆ ಸತ್ಯ ತೇಜವು ದಿನದ ರೂಪವನ್ನು ಹೊಂದಿ ಸೂರ್ಯಕಾಂತಿಯಿಂದ ಪ್ರಕಟೀಕೃತವಾಯಿತು. ಆನಂತರ ಸ್ವಲ್ಪ ಕಾಲಕ್ಕೆ ಪರಮೇಷ್ಟಿ ಸಾತ್ವಿಕ ಗುಣೋದಯದಿಂದ ಪಿತೃಗಣಗಳು ಪ್ರಭವಿಸಿದವು. ಆತನ ರಜೋಶಕ್ತಿಯಿಂದ ಉಷಸಂಧ್ಯಾ ಸಮಯದಲ್ಲಿ ಮನುಷ್ಯರು, ದಿನದ ವೇಳೆಯ ದೇವತೆಗಳು. ಸಾಯಂಸಂಧ್ಯದಲ್ಲಿ ಪಿತೃಗಣಗಳು, ರಾತ್ರಿ ಕಾಲದಲ್ಲಿ ನಿಶಾಚರಗಳು ಅಧಿಕ ಬಲವನ್ನು ಹೊಂದಿ ಶಕ್ತಿ ಸಂಪನ್ನರಾಗಿ ಬೆಳಗುಸುತ್ತಿದ್ದಾರೆ. ಉಷಾವ್ಯುಷ್ಣಗಳಿಗೆ ನಡುವೆಯ ಸಂಧ್ಯಗಳಲ್ಲಿ ಅನುದಿನವೂ ಮಂದೇಹರೆಂಬ ಹೆಸರನ್ನುಳ್ಳ ಮಹಾಬಲಶಾಲಿಗಳಾದ ರಾಕ್ಷಸರು ಜನಿಸಿ ಸೂರ್ಯ ಮಂಡಲವನ್ನು ಭಕ್ಷಿಸಲಿಕ್ಕೆ ಹೊರಡುತ್ತಾರೆ.

     ಬ್ರಹ್ಮ ವಿದ್ಯಾಪರರಾದ ವಿಪ್ರರು ಪ್ರಣವನಾದ ಪೂರ್ವಕವಾಗಿ ಗಾಯಿತ್ರಿ ಮಂತ್ರವನ್ನು ಜಪಿಸಿ ಶ್ರೀಮನ್ನಾರಾಯಣನಿಗೆ ಭಕ್ತಿ ಪೂರ್ವಕವಾಗಿ ಅರ್ಘಗಳನ್ನು ಸಮರ್ಪಿಸಿದಾಗ ಆ ಜಲವು ವಜ್ರಾಯುಧವಾಗಿ ಊರ್ಧಮುಖವಾಗಿ ಪ್ರಯಾಣಿಸಿ ಮಂದೇಹರನ್ನು ಸಂಹರಿಸುತ್ತಾರೆಂದು ಅವರಿಗೆ ಪ್ರಜಾಪತಿಯ ಶಾಪವಿದೆ. ಅದರಿಂದಲೇ ಬ್ರಹ್ಮಭೂಯವನ್ನು ಆಕಾಂಕ್ಷಿಸಿದ ಉಪವೀತಗಳೂ, ವಿಪ್ರರೂ ಸಂದ್ಯೋಪಾಸನೆಯನ್ನು ಯಥಾವಿಧಿಯನ್ನಾಗಿ ಆಚರಿಸಬೇಕು. ಮಾನವಾಳಿ ಅಂಜಲಿ ಸಮರ್ಪಿಸಿದ ಅರ್ಘ್ಯಗಳಿಂದ ಶತ್ರು ಸಂಹಾರವು ನಡೆದು ಸೂರ್ಯನು ಸಂತೃಪ್ತಿಯನ್ನು ಪಡೆದು ದೀಪ್ತಿವಂತನಾಗುತ್ತಾನೆ. ಬ್ರಾಹ್ಮಣರು ಅಗ್ನಿಹೋತ್ರವನ್ನು ಜ್ವಲಿಸುವಂತೆ ಮಾಡಿ ಸೂರ್ಯೋಜ್ಯೋತಿರ್ಮಂತ್ರದೊಂದಿಗೆ ಆಹುತಿಗಳನ್ನು ಅರ್ಪಿಸಿದಾಗ  ಮಂದೇಹರೊಂದಿಗೆ ಹೋರಾಟದಿಂದ ಕ್ಷೀಣಿಸಿದ ಸೂರ್ಯತೇಜವು ಮತ್ತೆ ಉಜ್ವಲವಾಗಿ ಭೂಮಿಯ ಮೇಲೆ ಪ್ರಸರಿಸುತ್ತದೆ. ಅದರಿಂದ ಲೋಕದಲ್ಲಿ ಎಂತಹ ದೊಡ್ಡವರೇ ಆದರೂ ಕಾಲಕ್ಕೆ ಸರಿಯಾಗಿ ಸಾಂದ್ಯವಿಧಿಗಳನ್ನು ನಿಯಮ ತಪ್ಪದಂತೆ ನೆರವೇರಿಸಬೇಕು. ಯಮ ನಿಯಮಗಳನ್ನು ಸ್ವಾಧೀನಪಡಿಸಿಕೊಂಡು ಭಾವನಾತ್ರಯವನ್ನು ಅಧಿಗಮಿಸಿ ಎಷ್ಟೇ ವಿದ್ಯಾಬುದ್ದಿಗಳನ್ನು ಕಲಿತರೂ ಅಗ್ನಿಹೋತ್ರ ವಿಧಿಗಳನ್ನು ಯಥೋಕ್ತವಾಗಿ ಆಚರಿಸಿದ ಬ್ರಾಹ್ಮಣರನ್ನು ಸೂರ್ಯ ನಾರಾಯಣನಿಗೆ ದ್ರೋಹವನ್ನುಂಟು ಮಾಡುವ ವಿಶ್ವಾಸ ಘಾತುಕರೆಂದೇ ಹೇಳಬೇಕು. ಅರ್ಪಿಸಿದಾಗ

     ಸೂರ್ಯನಿಗೆ ಬ್ರಹ್ಮಣ್ಯರು ಸಂತರಿಸಿದ ಮಹಸ್ಸಿಗಿಂತಲೂ ಅಧಿಕವಾಗಿ ಮಾರ್ತಾಂಡ ಮಂಡಲಾಂತರಿಷ್ಟುವರಾದ ವಾಲಖಿಲ್ಯರ ತೇಜೋವಿಭವವು ಇದೆ.

       ವೈಷ್ಣವಾಗ್ರೇಸರರೂ ಪರಮ ಸಾತ್ವಿಕರೂ ಆದ ವಾಲಖಿಲ್ಯರು ನಿಜಕ್ಕೂ ಧನ್ಯಾತ್ಮರು. ಬ್ರಹ್ಮಮಾನಸ ಪುತ್ರರಲ್ಲಿ ಒಬ್ಬನಾದ ಕ್ರತು ಮಹರ್ಷಿಗೆ ಸಂತತಿ ಗರ್ಭದಲ್ಲಿ ಆಂಗುಷ್ಟ ಮಾತ್ರ ದೇಹರಾಗಿ ಅವತರಿಸಿದ ಈ ಜಿತೇಂದ್ರಿಯಗಳು ಪ್ರತಿನಿತ್ಯವೂ ಆದಿತ್ಯ ಮಂಡಲದಲ್ಲಿ ಸವಿತ್ರಭಿಮುಖವಾಗಿ ನಿಂತು ಆತನ ತೇಜೋಭಿರಕ್ಷಣೆ ಮಾಡುತ್ತಿದ್ದಾರೆ ಇವರ ಸಹಕಾರದಿಂದ ಒದಗಿದ ಸೂರ್ಯಕಾಂತಿ ಭೂಮಿಯ ಮೇಲಕ್ಕೆ ಪ್ರಸರಿಸಿ ಜೀವರಾಶಿಗೆ ಪ್ರಾಣಶಕ್ತಿಯನ್ನು ಕೊಡುತ್ತಿದೆ.

     ಈ ಕರಣಿಯು ಧ್ರುವ ಮಂಡಲಾಂತರ್ಗತವಾದ ದ್ಯುಮಣಿರಥದ ಮುಂದಕ್ಕೆ ಓಡಾಡುತ್ತಿದ್ದಾಗ ಕಾಲ ಸ್ವರೂಪವು ಮನುಷ್ಯ ಲೋಕಕ್ಕೆ ಖಂಡವಾಗಿ ದ್ಯೋತಿಸುತ್ತಿದೆ. ಕಾಲ ವಿಭಾಗದಲ್ಲಿ ಮೊದಲ ಚಿಹ್ನೆಯಾದ ಮನುಷ್ಯನ ಕಣ್ಣು ರೆಪ್ಪೆಯ ಸಮಯಕ್ಕೆ ನಿಮೇಷವೆಂದು ಕರೆಯುವರು. ಹದಿನೈದು ನಿಮೇಷಗಳ ಕಾಲಕ್ಕೆ ಒಂದು ಕಾಷ್ಠವಾಗುತ್ತದೆ. ಮೂವತ್ತು ಕಾಷ್ಠಗಳು ಒಂದು ಕಳೆ, ತ್ರಿಂಶತ್ಕಕಳಗಳಿಗೆ ಒಂದು ಮುಹೂರ್ತ. ಇಂತಹ ಮೂವತ್ತು ಮುಹೂರ್ತಗಳು ಸೇರಿ ಒಂದು ಹಗಲೂ ರಾತ್ರಿ. ಸೂರ್ಯನ ಸಂಚಾರ ಮಾರ್ಗವು ಉತ್ತರಾಯಣ. ದಕ್ಷಿಣಾಯಾನಗಳಲ್ಲಿದ್ದಾಗ ಹಗಲೂ ರಾತ್ರಿಗಳ ಪ್ರಮಾಣವು ಬದಲಾಗುತ್ತಿದ್ದರೂ ಸಂಧ್ಯಾ ಪ್ರಮಾಣವು ಮಾತ್ರ ಎಲ್ಲಾ ಕಾಲಗಳಲ್ಲಿಯೂ ಒಂದೇ ವಿಧವಾಗಿ ಹದಿನೈದು ಕಳಗಳ ಪರ್ಯಂತವಾಗಿ ಭಾಸವಾಗುತ್ತದೆ. ಈ ರೀತಿಯಾಗಿ ವ್ಯಷ್ಟಿಯ ನಂತರ ಅರ್ಧ ಮುಹೂರ್ತವು ಉಷ ನಂತರ ಅರ್ಧ ಮುಹೂರ್ತಗಳು ಸಂಧ್ಯಾ ಸಮಯವಾಗುತ್ತದೆ. ದಿನದಲ್ಲಿ ಮೂರು ಮುಹೂರ್ತಗಳ ಕಾಲ ಪ್ರಾತಃವೇಳೆ ದಿನದಲ್ಲಿ ಐದನೆಯ ಭಾಗವಿದು. ಪ್ರಾತಸ್ಸಿಗೆ ನಂತರ ಮೂರು ಮುಹೂರ್ತಗಳು ಸಂಗಮ ಕಾಲ ಆನಂತರ ಮೂರು ಮುಹೂರ್ತಗಳ ಪ್ರಮಾಣದೊಂದಿಗೆ ಮಧ್ಯಾಹ್ನ, ಅಪರಾಹ್ನ, ಸಾಯಂಕಾಲ, ಒಟ್ಟು ಹದಿನೈದು ಮುಹೂರ್ತಗಳಲ್ಲಿ ವ್ಯಷ್ಟಿ, ಪರಿಸಮಾಪನವನ್ನು ಹೊಂದಿ, ಸಾಯಂಸಂಧ್ಯಾದೊಂದಿಗೆ ಉಷ ಪ್ರವೇಶಿಸುತ್ತದೆ. ಮತ್ತೆ ರಾತ್ರಿಗೆ ಹದಿನೈದು ಮುಹೂರ್ತಗಳು ಕಳೆಯುತ್ತವೆ. ಈ ರೀತಿ ಮೂವತ್ತು ಮುಹೂರ್ತಗಳ ಹದಿನೈದು ಹಗಲೂ, ರಾತ್ರಿಗಳನ್ನು ಸೇರಿಸಿ ಒಂದು ಪಕ್ಷವಾಗುತ್ತದೆ. ಎರಡು ಪಕ್ಷಗಳು ಸೇರಿ ಒಂದು ಮಾಸ. ಎರಡು ತಿಂಗಳು ಸೇರಿ ಒಂದು ಋತುವಾಗುತ್ತದೆ. ಮೂರು ಋತುಗಳು ಸೇರಿ ಒಂದು ಆಯನ ಎರಡು ಆಯನಗಳು ಒಂದು ವರ್ಷವಾಗುತ್ತದೆ.

     ಕಾಲಗಮನದಲ್ಲಿ ಸಂವತ್ಸರ ಕ್ರಮವನ್ನು ನಾಲ್ಕು ವಿಧಗಳಾಗಿ ನಾವು ಗುರ್ತಿಸಬಹುದು. ರಾಶಿಚಕ್ರದಲ್ಲಿ ಸೂರ್ಯನ ಸಂಚಾರವನ್ನು ಹಿಡಿದು ಏರ್ಪಟ್ಟಿರುವುದು ಸೌರಮಾನ. ಪೂರ್ಣಿಮಾ ಚಂದ್ರ ದರ್ಶನವನ್ನು ಅನುವರ್ತಿಸಿ ರೂಪ ಹೊಂದುವುದು ಸೌಮ್ಯ (ಚಾಂದ್ರ) ಮಾನ. ಕ್ರಮವಾಗಿ ಮೂವತ್ತು ಸೂರ್ಯೋದಯ, ಸೂರ್ಯಾಸ್ತಗಳನ್ನು ಲೆಕ್ಕಿಸುವುದೇ ಸಾಯನಮಾನ. ನಕ್ಷತ್ರಗಳಲ್ಲಿ ಚಂದ್ರನ ಸಂಚಾರ ಮಾರ್ಗವನ್ನು ಅನುಶೀಲಿಸಿದರೆ ಅದು ನಕ್ಷತ್ರಮಾನ. ಸಂವತ್ಸರಗಳನ್ನು ಪ್ರಭವಾದಿಯಾಗಿ ಉಪಲಕ್ಷಿಸುವುದರಿಂದ ಅರವತ್ತು ವರ್ಷಗಳ ಜ್ಞಾಪಕವು ಸುಲಭ ಸಾಧ್ಯವಾಗುತ್ತದೆ. ಈ ಅರವತ್ತು ವರ್ಷಗಳು ಬೃಹಸ್ಪತೀಯಾನವನ್ನು ಅನುಸರಿಸಿ ದ್ವಾದಶ ಹಯನ (ವರ್ಷ)ಗಳಿಗೆ ಒಂದರಂತೆ ಐದು

ಭಾಗಗಳಾಗಿ ವಿಭಜಿಸಲ್ಪಟ್ಟಿವೆ. ಇವುಗಳಿಗೆ ಸಂವತ್ಸರ, ಪರಿವತ್ಸರ, ಇದ್ದತ್ಸರ, ಅನುವತ್ಸರ, ವತ್ಸರವೆಂದು ಸಂಕೇತಗಳುಂಟಾಗಿವೆ. ಸಂವತ್ಸರಕ್ಕೆ ಹನ್ನೆರಡು ಮಾಸಗಳು. ಸೂರ್ಯನು . ಉತ್ತರಾಯಣದಲ್ಲಿ ಸಂಚರಿಸಿದಾಗ ತಪೋಮಾಸ, ತಪಸ್ಯಮಾಸ, ಮಧುಮಾಸ, ಮಾಧವಮಾಸ, ಶುಕ್ರಮಾಸ, ಶುಚಿಮಾಸಗಳು ಕಳೆದು ಹೋಗುತ್ತವೆ. ಸೂರ್ಯನು ಮಕರ ಸಂಕ್ರಮಣ ದಿನದಿಂದ ದಕ್ಷಿಣಾಭಿಮುಖನಾಗಿ ಮುಂದುವರೆದಾಗ ಕ್ರಮವಾಗಿ ನಭೋಮಾಸ, ನಭಸ್ಯಮಾಸ, ಇಷಮಾಸ, ಊರ್ಜಮಾಸ, ಸಹೋಮಾಸ, ಸಹಸ್ಯಮಾಸಗಳಾಗಿ ನೆಲೆಸಿವೆ. ಲೋಕಾಲೋಕ ಪರ್ವತಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ಇರುವ ಸಾನುಗಳ ಮೇಲೆ ನಿಂತು ಕರ್ದಮ ಪ್ರಜಾಪತಿಯ ಮಕ್ಕಳು ಸುಧಾಮನು, ಶಂಖಪಾದನು. ಹಿರಣ್ಯಗೋಮನು, ಕೇತುಮಂತನು ಲೋಕಗಳಲ್ಲಿ ಹಗಲೂ ರಾತ್ರಿಗಳ ಪರ್ಯಾಪ್ತಿ ಸಮಊಗ್ರೂಪದಲ್ಲಿ ನೆಲೆಸುವುದಕ್ಕೆ ಸಹಕರಿಸುತ್ತಿದ್ದಾರೆ.

ವಿಷ್ಣು ಪದ – ಪರಮಪದ.