ಮನೆ ರಾಜ್ಯ ರೈಲುಗಳ ಸಮಯ ಪರಿಷ್ಕರಣೆ: ಮೈಸೂರಿನಿಂದ ಹೊರಡುವ 09 ರೈಲುಗಳ ನಿರ್ಗಮನ ಸಮಯ ಬದಲು

ರೈಲುಗಳ ಸಮಯ ಪರಿಷ್ಕರಣೆ: ಮೈಸೂರಿನಿಂದ ಹೊರಡುವ 09 ರೈಲುಗಳ ನಿರ್ಗಮನ ಸಮಯ ಬದಲು

0

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು, 314 ಕ್ಕೂ ಹೆಚ್ಚು ರೈಲುಗಳ ಸಮಯವನ್ನುಪರಿಷ್ಕರಿಸಿದ್ದೂ, ಅ. 1 ರಿಂದ ಜಾರಿಗೆ ಬರುತ್ತದೆ.

ಇವುಗಳಲ್ಲಿ ಮೈಸೂರು ನಿಲ್ದಾಣದಿಂದ ಹೊರಡುವ 09 ರೈಲುಗಳ ನಿರ್ಗಮನ ಸಮಯವೂ ಸೇರಿವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ರೈಲಿನ ವೇಳಾಪಟ್ಟಿಯಲ್ಲಿನ ಎಲ್ಲಾ ಬದಲಾವಣೆಗಳನ್ನು ಮುಂಚಿತವಾಗಿಯೇ ಗಮನಿಸಿಕೊಳ್ಳಬೇಕು

ಹೊಸ ಪರಿಷ್ಕೃತ ರೈಲು ವೇಳಾಪಟ್ಟಿಯನ್ನು ಪರಿಶೀಲಿಸಲು, ಪ್ರಯಾಣಿಕರು ಈ ಲಿಂಕ್‌ https://swr.indianrailways.gov.in/view_section.jsp?lang=0&id=0,1,808,818,847,1880] ಗೆ ಭೇಟಿ ನೀಡಬಹುದು.

ಪರ್ಯಾಯವಾಗಿ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ದೂ.139 ಕ್ಕೆ ಕರೆ ಮಾಡಬಹುದು

ರೈಲುಗಳ ಬದಲಾದ ಸಮಯದ ಮಾಹಿತಿ ಇಲ್ಲಿದೆ:

16127 ಶಿರಡಿ ಎಕ್ಸ್ ಪ್ರೆಸ್ ಸಂಜೆ  5.20ಕ್ಕೆ, 16535 ಗೋಲ್ ಗುಂಬಜ್ ಎಕ್ಸ್ ಪ್ರೆಸ್ ಸಂಜೆ 3.30ಕ್ಕೆ,, 12781 ಸ್ವರ್ಣಜಯಂತಿ ಎಕ್ಸ್  ಪ್ರೆಸ್ ರಾತ್ರಿ 7.30ಕ್ಕೆ, 17301 ಮೈಸೂರು – ಬೆಳಗಾವಿಎಕ್ಸ್ ಪ್ರೆಸ್ ರಾತ್ರಿ 8.45ಕ್ಕೆ., 06233 ಮೈಸೂರು- ಚಾಮರಾಜನಗರ ಬೆಳಿಗ್ಗೆ 8.20ಕ್ಕೆ, 06300 ಮೈಸೂರು- ನಂಜನಗೂಡು ಬೆಳಿಗ್ಗೆ 9.15ಕ್ಕೆ, 16315 ಮೈಸೂರು- ಕೊಚ್ಚುವೆಳಿ ಮಧ್ಯಾಹ್ನ 12.45ಕ್ಕೆ, 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ಬೆಳಿಗ್ಗೆ 5.40ಕ್ಕೆ ಮತ್ತು 06276 ಮೈಸೂರು- ಚಾಮರಾಜನಗರ ಎಕ್ಸ್ ಪ್ರೆಸ್ 12 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಹೊರಡಲಿದೆ.

ಹಿಂದಿನ ಲೇಖನಕುಟುಂಬ ಸಮೇತರಾಗಿ ಬಂದು ಮಾದಪ್ಪನ ದರ್ಶನ ಪಡೆದ ನಟ ರಾಘವೇಂದ್ರ ರಾಜಕುಮಾರ್
ಮುಂದಿನ ಲೇಖನಮೇಕೆದಾಟು ಯೋಜನೆ ಅನುಷ್ಟಾನವಾದರೆ ಕಾವೇರಿ ಜಲ ವಿವಾದಕ್ಕೆ ಪರಿಹಾರ: ವಿ ಶ್ರೀನಿವಾಸ ಪ್ರಸಾದ್