ಮನೆ ಅಪರಾಧ ಬೈಕ್ ಗೆ ಟಿಪ್ಪರ್ ಡಿಕ್ಕಿ: ಸವಾರ ಸಾವು

ಬೈಕ್ ಗೆ ಟಿಪ್ಪರ್ ಡಿಕ್ಕಿ: ಸವಾರ ಸಾವು

0

ಹಾವೇರಿ: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಜಾನುವಾರು ಮಾರುಕಟ್ಟೆ ಬಳಿಯ ಹಾನಗಲ್ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ನಗರದ ಲಕ್ಷ್ಮಿ ಆಯಿಲ್ ಮಿಲ್ ಮಾಲೀಕರಾದ ಅರುಣಕುಮಾರ ವೀರಣ್ಣ ಕೋರಿ (51) ಎಂದು ಗುರುತಿಸಲಾಗಿದೆ.

ಹಾನಗಲ್ ರಸ್ತೆ ಯಲ್ಲಿ ಬೈಕ್ ನಲ್ಲಿ ಬರುತ್ತಿದ್ದಾಗ ಅರುಣಕುಮಾರ ಕೋರಿ ಅವರ‌ ಬೈಕ್ ಗೆ ಟಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗಡೆ ಬಿದ್ದ ಅರುಣಕುಮಾರ ಅವರ ಮೇಲೆ ಟಿಪ್ಪರ್ ಹರಿದು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಟಿಪ್ಪರ್ ಹಾಗೂ ಟಿಪ್ಪರ್ ಚಾಲಕನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿನ ಲೇಖನನ್ಯಾಯಯಾತ್ರೆಗೆ ತಡೆ: ಅಸ್ಸಾಂ ಸರ್ಕಾರದ ಕರ್ತವ್ಯ ಲೋಪ- ಸಿಎಂ ಸಿದ್ದರಾಮಯ್ಯ ತೀವ್ರ ಖಂಡನೆ
ಮುಂದಿನ ಲೇಖನಬಂಡೀಪುರ-ವೈನಾಡು ಮಾರ್ಗದಲ್ಲಿ ಅರಣ್ಯ ಸಚಿವರ ಮಧ್ಯರಾತ್ರಿ ಸಂಚಾರ: ಚೆಕ್ ಪೋಸ್ಟ್ ಗಳಲ್ಲಿ ಖುದ್ದು ತಪಾಸಣೆ