ಮನೆ ರಾಜ್ಯ ಕಲ್ಲು ಗಣಿಗಾರಿಕೆ ಪ್ರಪಾತಕ್ಕೆ ಬಿದ್ದ ಟಿಪ್ಪರ್ – ಚಾಲಕ‌ ಸಾವು..!

ಕಲ್ಲು ಗಣಿಗಾರಿಕೆ ಪ್ರಪಾತಕ್ಕೆ ಬಿದ್ದ ಟಿಪ್ಪರ್ – ಚಾಲಕ‌ ಸಾವು..!

0

ಮಂಡ್ಯ : ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರಪಾತಕ್ಕೆ ಟಿಪ್ಪರ್ ಬಿದ್ದ ಪರಿಣಾಮ ಸ್ಥಳದಲ್ಲಿ ಟಿಪ್ಪರ್ ಚಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜಟಕ ಗೇಟ್ ಬಳಿಯ ಕ್ವಾರೆಯೊಂದರಲ್ಲಿ‌ ಜರುಗಿದೆ.

ರವಿ ಹಾಗೂ ಕಾಂತ ಎಂಬುವವರು ಸೇರಿ ಕ್ವಾರೆ ನಡೆಸುತ್ತಿದ್ದರು. ಗಣಿಗಾರಿಕೆ ಮಾಡಿ ಆ ಸ್ಥಳ ಪ್ರಪಾತದಂತೆ ಆಗಿತ್ತು. ನಿನ್ನೆ ಮಧ್ಯರಾತ್ರಿ ಟಿಪ್ಪರ್ ಚಲಿಸುವ ವೇಳೆ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ನೀರು ಇದ್ದ ಕಾರಣ ಟಿಪ್ಪರ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಈ ವೇಳೆ ಚಾಲಕ ಲಕ್ಷ್ಮಣ್ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಳಿಕ ಅಗ್ನಿಶಾಮದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ಲಕ್ಷ್ಮಣ್ ಮೃತ ದೇಹವನ್ನು ಮೇಲೆತ್ತಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ‌ ಘಟನೆ ಜರುಗಿದೆ.