ಕಲಬುರಗಿ: ಮರಳು ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮುಕಂದ್ (12) ಹಾಗೂ ಮಹಮ್ಮದ್ ಸಲೀಂ(66) ಸಾವಿಗೀಡಾದ ದುರ್ದೈವಿಗಳು.
ನಿರ್ಮಾಣ ಹಂತದಲ್ಲಿರುವ ಮನೆಗೆ ಮರಳು ತಂದಿದ್ದ ಟಿಪ್ಪರ್ ಅನ್ಲೋಡ್ ಮಾಡುವಾಗ ಪಕ್ಕದ ಚರಂಡಿಯಲ್ಲಿ ಪಲ್ಟಿಯಾಗಿದೆ.
ಈ ವೇಳೆ ಅಲ್ಲೆ ನಿಂತಿದ್ದ ಬಾಲಕ ಹಾಗೂ ವ್ಯಕ್ತಿ ಟಿಪ್ಪರ್ ನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube