ಸಹಜವಾಗಿಯೇ ಪ್ರತಿ ತಾಯಿ ತಂದೆಯರು ತಮ್ಮ ಮಗ /ಮಗಳು ಓದಿನಲ್ಲಿ ಅದ್ಬುತ ಪ್ರತಿಭೆಯನ್ನು ತೋರಬೇಕೆಂದು ಊರು, ಕೇರಿ ಎಲ್ಲಾ ಅವರ ಅಮೋಘವಾದ ಬುದ್ಧಿ ಜಾಣ್ಮೆಗಳನ್ನು ಮೆಚ್ಚಿ ಕೊಳ್ಳಬೇಕೆಂದು ಅಂದುಕೊಳ್ಳುವುದು ಸಹಜವೇ. ಅದಕ್ಕೆ ಬೇಕಾದ್ದು ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸುವುದು. ತಜ್ಞ ಟೀಚರ್ ಗಳಿಂದ ಶಿಕ್ಷಣ ಕೊಡಿಸುವುದು ಇಂಟರ್ ನೆಟ್ ನಲ್ಲಿನ ಮಾಹಿತಿಗಳನ್ನು ಆಗಿಂದಾಗ್ಗೆ ನೀಡುವುದಲ್ಲ.
ಈ ವಿಷಯಕ್ಕೆ ಬಂದರೆ ಅಂತಹ ಸೌಲಭ್ಯಗಳ್ಯಾವುವೂ ಇಲ್ಲದೇ ಗೆಲುವು ಸಾಧಿಸಿ, ರಾಜ್ಯಮಟ್ಟದಲ್ಲೇ ಅಲ್ಲ ರಾಷ್ಟ್ರ ಮಟ್ಟದಲ್ಲೂ ಕೂಡಾ ಹೆಸರು ಪಡೆದುಕೊಂಡಿರುವ ವಿದ್ಯಾರ್ಥಿಗಳ ಕುರಿತಂತೆ ಪ್ರತಿದಿನ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಹಾಗಾದರೆ ಮತ್ತೆ ಅವರ ಗೆಲುವಿನ ಸಕ್ಸಸ್ ಫಾರ್ಮುಲಾ ಯಾವುದು? ಅವರು ಅನುಸರಿಸಿದ ಮ್ಯಾನ್ಶವಲ್ ಯಾವುದು? ನಿಜವಾದ ರಹಸ್ಯವೇನು?
ರಹಸ್ಯಗಳಿಲ್ಲ ಫಾರ್ಮುಲಾಗಳಂತೂ ಇಲ್ಲವೇ ಇಲ್ಲ ಮ್ಯಾನ್ಯುವೆಲ್ ಸುದ್ದಿಯೇ ಇಲ್ಲ ಅವರವರ ಆಸೆಗಳು, ಆಕಾಂಕ್ಷೆಗಳು ಎಷ್ಟು ಆಳವಾಗಿದೆಯೋ ತಿಳಿದುಕೊಂಡರೆ ಸಾಕು. ಅವರ ಯಶಸ್ಸಿನ ಹಿಂದೆ ತಾಯಿ, ತಂದೆಯರ ಒತ್ತಡವಿಲ್ಲ. ಹೈ ಎಕ್ಸ್ ಪೆಕ್ಟೇಷನ್ಸ್ ಸ್ವಲ್ಪವೂ ಇಲ್ಲ.ಅದಕ್ಕೆ ಉತ್ತಮ ಉದಾಹರಣೆಗಳೆಂದರೆ,ಇತ್ತೀಚೆಗೆ ಐಎಎಸ್ ನಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ನೀಡಿದ ಹೇಳಿಕೆಗಳು ಇಬ್ಬರು,ಮೂವರು ಪೇರೆಂಟ್ಸ್ ತಮ್ಮ ಮಕ್ಕಳು ಏನು ಓದುತ್ತಿದ್ದಾರೋ ಅಂದು ಕೂಡಾ ಗೊತ್ತಾಗದಂತಹ ಅವಿದ್ಯಾವಂತರು.ಇಲ್ಲಿ ಅವರ ಗೆಲುವಿಗೆ ಬಹಿರಂಗ ಸತ್ಯವೇನೆಂದರೆ ಪೇರೆಂಟ್ಸ್ ತಮ್ಮ ಪಾತ್ರವನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಸೀಮಿತಗೊಳಿಸಿಕೊಂಡರು.
*ನಿಮ್ಮ ಮಕ್ಕಳು ಓದುವ ಯಂತ್ರಗಳಲ್ಲ ಅವರಿಗೂ ಬಹಳ ಆಲೋಚನೆಗಳಿರುತ್ತವೆ. ಅವರು ಶಾಲೆಯಿಂದ ಬಂದದ್ದೇ ತಡ ಓದಿಕೊ… ಓದಿಕೋ ಎಂದು ಹಿಂದೆ ಬಿಳುವುದು ಅದಾದ ತಕ್ಷಣ ಟ್ಯೂಷನ್ ಗಳಿಗೆ ಟೈಮ್
ಯ್ತು ಓಡು ಓಡು ಎಂದು ಓಡಿಸುವುದು ಒಳ್ಳೆಯದಲ್ಲ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಕೂಲಿಯಾಳುಗಳಿಗಾದರೂ ಸ್ವಲ್ಪ ವಿರಾಮ ಕೊಡುತ್ತಾರೆ.ಆದರೆ ಮಕ್ಕಳಿಗೆ ನೀಡದಿದ್ದರೆ ಹೇಗೆ? ಅದರಿಂದ ಶಾಲೆಯಿಂದ ಬಂದ ತಕ್ಷಣ ಮಕ್ಕಳೊಡನೆ ಮನಃಪೂರ್ವಕವಾಗಿ ನಗುನಗುತಾ ಮಾತನಾಡಿರಿ.
* ತಂದೆ ಆಫೀಸಿನಿಂದ ಸಂಜೆ ಮನೆಗೆ ಬರುವ ವೇಳೆಗೆ ಮಕ್ಕಳು ಪುಸ್ತಕಗಳನ್ನು ಮುಂದಿಟ್ಟುಕೊಂಡು ಶ್ರದ್ದೆಯಿಂದ ಓದುತ್ತಿರಬೇಕೆಂದು ಅಂದುಕೊಳ್ಳುತ್ತಾರೆ. ಹಾಗಲ್ಲದೆ ಸಂಜೆ 7 ರಿಂದ 9ರ ವರೆಗೋ, ಅಥವಾ ಮತ್ತೊಂದು ಸಾಧ್ಯವಿರುವ ಸಮಯವನ್ನು ಮೀಸಲಿಡಬೇಕು.ಯಾವಾಗ ನೋಡಿದರೂ ಓದುತ್ತಲೇ ಇರಬೇಕೆಂದು ಕಡ್ಡಾಯ ಮಾಡಿದರೆ ಓದಿಗಿಂತ ಹೆಚ್ಚಾ ಓದುವ ನಾಟಕ ಮಾಡಬೇಕಾಗಿ ಬರುತ್ತದೆ
* ಮಕ್ಕಳಿಗೆ ಸ್ನೇಹಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಯ ವ್ಯರ್ಥವಾಗುತ್ತದೆ. ಆದರೆ ಫ್ರೆಂಡ್ಸೇ ಇಲ್ಲದಿದ್ದರೆ ಕಮ್ಯುನಿಕೇಷನ್ಸ್ ಕಲಿತುಕೊಳ್ಳುವುದಿಲ್ಲ. ಮಕ್ಕಳನ್ನು ತಮ್ಮ ಸ್ನೇಹಿತರೊಂದಿಗೆ ಬೆರೆಯಲು ಬಿಡಿ. ಮುಖ್ಯವಾಗಿ ಕ್ಲಾಸ್ ಮೆಟ್ಸ್ ನ್ನು ಭೇಟಿ ಮಾಡಬೇಕು. ಅವರ ಆಸ್ತಿ ಅಂತಸ್ತು ಸಮಾಜದಲ್ಲಿನ ಸ್ಥಾನ ಮಾನಗಳನ್ನು ನೋಡಬೇಡಿ ಕ್ಲಾಸ್ ಮೇಟ್ಸ್ ಅಂದರೆ ಕ್ಲಾಸ್ ಮೇಟ್ಸ್ ಅಷ್ಟೇ.
* ನಿಮ್ಮ ಆಸ್ತಿ ಅಂತಸ್ತು ಸ್ಥಾನ-ಮಾನಗಳು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದ ಹಾಗೆ ನೋಡಿಕೊಳ್ಳಿ. ನಿಮ್ಮ ಮಗ ಮಾತ್ರ ಸಿಲ್ಕ್ ಅಥವಾ ಬೆಲೆ ಬಾಳುವ ಉಡುಪುಗಳನ್ನು ಧರಿಸಿ ಸೆಲ್ ಫೋನ್, ಇತರೆ ಲೆಟೆಸ್ಟ್ ಪರಿ ಕರಗಳನ್ನು ಶಾಲೆಗೆ ಕೊಂಡೊಯ್ದರೆ, ಉಳಿದ ಮಕ್ಕಳು ಅಸುಯೆ ಪಟ್ಟುಕೊಳ್ಳಬಹುದು ಅಥವಾ ನಿಮ್ಮ ಪತ್ರನಿಗೆ ಅಹಂ ಬೆಳೆಯಬಹುದು. ಅದು ಅವರ ಮಧ್ಯೆ ಸ್ಪರ್ಧೆಗಳಿಗೆ ದಾರಿ ಮಾಡಿಕೊಡಬಹುದು. ಇತ್ತೀಚೆಗೆ ನಾಲ್ಕು ಮಂದಿ ಮಕ್ಕಳು ಯಾವುದೋ ಒಂದು ಕಾರಣಕ್ಕಾಗಿ ಅಂತಹ ಕ್ಲಾಸ್ ಮೇಟ್ ನ್ನು ಕೊಂದುಹಾಕಿದ್ದು ಬಹುಶಃ ಸುದ್ದಿ ಪತ್ರಿಕೆಗಳಲ್ಲಿ ನೀವೆಲ್ಲರೂ ಓದಿರುತ್ತೀರಿ.
*ಮಕ್ಕಳು ಸ್ವತಂತ್ರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಿ. ನೀವು ಹೇಳಿದ್ದನ್ನೇ ಕೇಳಬೇಕೆಂದು ನೀವು ಸೂಚಿಸಿದ ಸಮಯದಲ್ಲೇ ಓದಬೇಕೆಂದು ಹಾಗೂ ಕಡ್ಡಾಯವಾಗಿ ದಿನಕ್ಕೆ ಇಷ್ಟು ಗಂಟೆಗಳ ಕಾಲ ಓದಲೇಬೇಕೆಂಬ ನಿಬಂಧನೆಗಳನ್ನು ಹೇರಬೇಡಿ.ಒಂದು ವೇಳೆ ನೀವು ಹೇಳಿದ ಹಾಗೆ ಅವುಗಳನ್ನು ಮಾಡಿದರೂ ಭಯದಿಂದ ಮಾಡುತ್ತಾರೆಯೇ ಹೊರತು, ಇಷ್ಟಪಟ್ಟು ಮಾಡಲಾರರು. ಸಾಲದ್ದಕ್ಕೆ ಆ ಓದು ಹಿರಿಯರಿಗಾಗಿ ಮಾಡುತ್ತಿರುವ ತ್ಯಾಗ ಎಂದು ಭಾವಿಸುತ್ತಾರೆ.
* ಯಾವುದೇ ರಂಗದಲ್ಲಾದರೂ ಅಡೆ, ತಡೆಗಳು, ಅಡ್ಡಿ ಆತಂಕಗಳು ತಪ್ಪಿದ್ದಲ್ಲ. ಹಾಗೆಯೇ ನಿಮ್ಮ ಮಕ್ಕಳಿಗೆ ಸಹಪಾಟಿ / ಸಹ ಚಿರರೊಂದಿಗೆ ಸಣ್ಣ ಪುಟ್ಟ ಕಲಹಗಳು ಬಂದಾಗ ನೀವು ಆವೇಶಗೂಂಡು ಅದರಲ್ಲಿ ಹಸ್ತಕ್ಷೇಪ ಮಾಡಬೇಡಿ. ಇಂದಲ್ಲ ನಾಳೆ ಅವರು ಹೇಗೋ ಸ್ನೇಹಿತರಾಗಿ ಬಿಡುತ್ತಾರೆ ತೀರಾ ತೀವ್ರತರವಾದ ವಿಷಯವಾದರೆ ಮಾತ್ರ ನೀವು ಮಧ್ಯ ಪ್ರವೇಶಿಸಿ.ಸಮಸ್ಯೆಗಳ ಪರಿಹಾರ( ಪ್ರಾಬ್ಲಂ ಸಾಲ್ವಿಂಗ್ )ವನ್ನು ಅವರು ಕಲಿತುಕೊಳ್ಳಬೇಕಲ್ಲ!
* ತಾಯಿ ತಂದೆ ಇಬ್ಬರೂ ಉದ್ಯೋ ಗಿಗಳಾಗಿದ್ದರೆ ಮಕ್ಕಳು ಮನೆಗೆ ಬರುವ ವೇಳೆಗೆ ಯಾರೂ ಇರುವುದಿಲ್ಲ. ಅಂತಹ ಸಮಯದಲ್ಲಿ ಓದಿಕೂ ಎಂದು ಪೀಡಿಸುತ್ತಾರೆ ಆಯಾಸಗೊಂಡು ಬಂದ ಮಕ್ಕಳು ಹೇಗೆ ಓದಿಕೊಳ್ಳುತ್ತಾರೆ ಎಂದು ಯೋಚಿಸುವುದಿಲ್ಲ. ಆದ್ದರಿಂದಲೇ ಅವರಿಗೆ ಕತೆ ಪುರಾಣ ಘಟನೆಗಳನ್ನು ಹೇಳುವ ಅಜ್ಜಿ ತಾತ ಅಥವಾ ಇತರೆ ಸಮೀಪದ ಬಂಧುಗಳಿದ್ದರೆ ಒಳ್ಳೆಯದು ಎಸ್ಸೆಸ್ಸೆಲ್ಸಿ,ಪಿ.ಯು.ಸಿ. ಆನಂತರ ಕೋರ್ಸ್ ಗಳಲ್ಲಿ ಓದುವ ಮಕ್ಕಳಿದ್ದೆ, ತಾಯಿ- ತಂದೆಯರ ಪೈಕಿ ಯಾರಾದರೂಬ್ಬರು ಸಮಯ, ಸಂದರ್ಭಾನುಸಾರವಾಗಿ ರಜೆ ಹಾಗುವುದರಿಂದ ಭವಿಷ್ಯತ್ತಿನಲ್ಲಿ ಸಮಸ್ಯೆಗಳು ಬರುವುದಿಲ್ಲ. ಅಥವಾ ಅಂತಹ ಮಕ್ಕಳಿಗೆ ಹಾಸ್ಟೆಲ್ ಬೆಸ್ಟ್!
* ಮಕ್ಕಳು ಮನೆಯಲ್ಲಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿದರೆಂದು ಗೊತ್ತಾದರೆ,ಅದನ್ನೇ ಒಂದು ದೊಡ್ಡ ರಾದಾಂತ ಮಾಡದೆ ಹತ್ತಿರ ಕರೆದು ಸಮಾಧಾನವಾಗಿ ಹೇಳಬೇಕು. “ನೋಡು ರಾಜಾ ಇವೆಲ್ಲವೂ ನಿನ್ನದೇ ತಾನೇ! ನಿನ್ನ ಮನೆಯಲ್ಲಿ ನೀನೇ ಕಳ್ಳತನ ಮಾಡುವುದು ಎಷ್ಟು ಸರಿ? ಇಷ್ಟಕ್ಕೂ ನಿನಗೆ ಹಣದ ಅವಶ್ಯಕತೆ ಏಕೆ ಬಂತು? ಎಷ್ಟು ಬೇಕು ಹೇಳು, ನಾನು ಕೊಡ್ತೀನಿ ” ಎಂದು ಮೃದುವಾಗಿ ಕೇಳಿ. ಸ್ವಲ್ಪ ಹಣವನ್ನು ಪಾಕೆಟ್ ಮನಿಯಾಗಿ ನೀಡಬಹುದು. ಆದರೆ ನೀವು ಗಳಿಸಿ ತರುವ ಹಣಕ್ಕೆ ಲೆಕ್ಕ ನಿಮಗೆ ಗೊತ್ತೆ?
* ಮಕ್ಕಳಿಗೆ ತಾಯಿ, ತಂದೆಯರು ಹೇಳುವ ಮಾತೇ ಒಂದೇ. ” ನಾವು ಹೇಳಿದನ್ನು ಕೇಳು” ಎಂದು ಆ ತಾಯಿ, ತಂದೆಯರು ತಾವು ಹೇಳಿದ ಮಾತನ್ನು ಆಚರಣೆಗೆ ತರಬೇಕು. ಗಂಡ ಗಂಡ -ಹೆಂಡತಿಯರಿಬ್ಬರೂ ಒಬ್ಬರ ಮಾತನ್ನು ಮತ್ತೊಬ್ಬರು ಕೇಳುವ ಅನ್ಯೋನ್ಯತೆ ಇದ್ದರೆ ಆ ಸಂಸಾರದಲ್ಲಿ ಮಹಾದಾನಂದ ನೆಲೆಗೊಳ್ಳುತ್ತದೆ.
*’ಹೆಚ್ಚು ಮಾತನಾಡಬೇಡಿ. ಬಾಯಿ ಮುಚ್ಚಿಕೊಂಡು ಹೇಳಿದ್ದನ್ನು ಕೇಳು’ ‘ಮರು ಪ್ರಶ್ನೆ ಹಾಕಬೇಡ’ ಎಂಬ ಒನ್ ವೇ ಟ್ರಾಫಿಕ್ ಮತಗಳನ್ನು ಬಿಟ್ಟುಬಿಡಬೇಕು. ನನ್ನಿಷ್ಟ ನನ್ನನ್ನು ಯಾರು ಏನೂ ಕೇಳುವಂತಿಲ್ಲ ಅಲ್ವೋ ನನ್ನನ್ನೇ ಪ್ರಶ್ನಿಸುವಷ್ಟು ಧೈರ್ಯ ಇದೆಯೇನೋ ನಿನಗೆ, ನಾನ್ಸೆನ್ಸ್? ಮುಂತಾದ ಅಹಂಕಾರ ಭರಿತದ ಮಾತುಗಳಿಂದಾಗಿ ಇರುವ ಅಲ್ಪಸ್ವಲ್ಪ ಮರ್ಯಾದೆಯೂ ಮಣ್ಣು ಪಾಲಾಗುತ್ತದೆ.
*ಈ ಹಿಂದೆ ಕೆಲವು ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂದರೆ ಪ್ರೋಗ್ರೆಸ್ ರಿಪೋರ್ಟ್ ಮೇಲೆ ತಂದೆಯ ಸಹಿಯನ್ನು ತಾವೇ ಮಾಡುತ್ತಿದ್ದರು. ಈಗಿನ ಮಕ್ಕಳಂತೂ ಮತ್ತಷ್ಟು ಪ್ರಬುದ ರಾಗಿದ್ದಾರೆ. ತಂದೆಯ ಕ್ರೆಡಿಟ್ ಕಾರ್ಡ್ ಮಾಲೆ ಸಹಿ ಹಾಕಿ ಹಣ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಹೆತ್ತವರು ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆಯೆಂಬುದನ್ನು ಆಗಾಗ್ಗೆ ಲೆಕ್ಕ ನೋಡಿಕೊಂಡು ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕು. ತಂದೆಗೆ ಈ ಲೆಕ್ಕಗಳ ಬಗ್ಗೆ ಬೇಜವಾಬ್ದಾರಿಯಿದ್ದರೆ, ಮಕ್ಕಳು ಲೆಕ್ಕವಿಲ್ಲದ ಹಾಗೆ ಹಣವನ್ನು ಖರ್ಚು ಮಾಡುತ್ತಾರೆ.
* ಮಕ್ಕಳು ತಮ್ಮ ಬಳಿ ಸುಳ್ಳುಗಳನ್ನು ಹೇಳುತ್ತಿದ್ದಾರೆಂದು ಮಾನಸಿಕ ತಜ್ಞರು /ಸಲಹೆಗಾರರ ಬಳಿಗೆ ಹೋಗಿ ದುಃಖವನ್ನು ತೋಡಿಕೊಳ್ಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ಹಿರಿಯರು ತಮ್ಮ ಮಕ್ಕಳಿಗೆ ನಿಜ ಹೇಳುವ ಅವಕಾಶವನ್ನು ಕೊಡಬೇಕು. ಸುಳ್ಳುಗಳನ್ನು ಹೇಳಲು ನಾಲ್ಕು ಕಾರಣಗಳಿರುತ್ತವೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು, ನಿಜ ಹೇಳಿದರೆ ತಾಯಿ, ತಂದೆಯರು ನೋವು ಪಟ್ಟುಕೊಳ್ಳುತ್ತಾರೆ,ನನ್ನ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ.ಡ್ಯಾಡಿ ಕೂಡಾ ಕಂಡ ಕಂಡದಕ್ಕೆಲ್ಲಾ ಸುಳ್ಳು ಹೇಳುತ್ತಿರುತ್ತಾರಲ್ಲ! ನಾನು ಹೇಳಿದರೆ ತಪ್ಪೇನು? ಎಂದು ಮಕ್ಕಳು ಅನ್ನುತ್ತಾರೆ. ಡಿಯರ್ ಪೇರೆಂಟ್ಸ್ ಇದರ ಬಗ್ಗೆ ಸೂಕ್ಷ್ಮವಾಗಿ ಆಲೋಚಿಸಿ ನೋಡಿ.
* ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಹುಡುಗಿಯರು ಲೈಂಗಿಕ ಪ್ರತಿಕ್ರಿಯೆಯಲ್ಲಿ ಐಚ್ಛಕವಾಗಿ ಪಾಲ್ಗೊಳ್ಳುವುದೋ ಅಥವಾ ಅತ್ಯಾಚಾರಕ್ಕೆ ಗುರಿಯಾಗುವುದೋ ಹೆಚ್ಚಾಗಿ ನಡೆಯುತ್ತಿದೆಯೆಂದು ಸ್ಪಷ್ಟಪಡಿಸಲಾಗಿದೆ. ಅವರ ಪೈಕಿ ಅಸ್ಸೋಂನಲ್ಲಿ ಶೇಕಡ 52, ದೆಹಲಿಯಲ್ಲಿ ಶೇಕಡ 41, ಬಿಹಾರ್ ನಲ್ಲಿ ಶೇಕಡ 33ರಷ್ಟು ಹಾಗೂ ಆಂಧ್ರದಲ್ಲೂ ಶೇಕಡ 33 ರಷ್ಟಿದೆ ಯೆಂದು ತಿಳಿದು ಬಂದಿದೆ. ತಾಯಿ ತಂದೆಯರು ನಮ್ಮ ಮಕ್ಕಳೊಂದಿಗೆ ಕೇವಲ ಓದಿನ ಬಗ್ಗೆಯೇ ಅಲ್ಲದೆ, ಮತ್ತಷ್ಟು ಆಳಾವಾಗಿ ವೈಯಕ್ತಿಕ ವಿಷಯಗಳ ಕುರಿತಂತೆ ಚರ್ಚಿಸಬೇಕು ಹಾಗೂ ಅವರಲ್ಲಿ ಅದರ ಬಗ್ಗೆ ತಿಳುವಳಿಕೆ ಮೂಡಿಸಬೇಕು .
* ಮಕ್ಕಳಲ್ಲಿ ಬಿಕ್ಕಲು ಬಿಕ್ಕಲಾಗಿ ಮಾತನಾಡುವವರು, ಭಯಪಡುತ್ತಾ ಮಾತನಾಡುವವರು, ಶ್ರವಣ ಸಮಸ್ಯೆ ಇರುವವರು, ಬ್ಲಾಕ್ ಬೋರ್ಡ್ ಮೇಲಿನ ಅಕ್ಷರಗಳನ್ನು ದೂರದಿಂದ ಓದಲಾಗದವರು…. ಈ ಬಗೆಯ ಸಮಸ್ಯೆಗಳಿದ್ದಾಗ ಹೆತ್ತವರು ತಮ್ಮ ಮಕ್ಕಳನ್ನು ವೈದ್ಯರ ಬಳಿಗೆ ಕರೆದೊಯ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅವರು ತಮ್ಮ ಸ್ನೇಹಿತರು, ಸಹಪಾಠಿಗಳ ಅವಹೇಳನವನ್ನು ಮೌನವಾಗಿ ಸಹಿಸಿಕೊಂಡು ನೋವು ಅನುಭವಿಸುತ್ತಾರೆ. ಅಂತಹ ಸಮಯದಲ್ಲಿ ಪೇರೆಂಟ್ ಭಾವಾತ್ಮಕ ಸಹಕಾರವನ್ನು ನೀಡಬೇಕು
*ಪ್ರೇರಣೆಯನ್ನುಂಟುಮಾಡುವುದು ಕೂಡಾ ಬೆಳೆಸಿ, ಪೋಷಿಸುವುದರ ಒಂದು ಭಾಗ. ಮಕ್ಕಳು ಯಾವುದಾದರೂಂದು ಒಳ್ಳೆಯ ಕೆಲಸ ಮಾಡಿದಾಗ, ಒಳ್ಳೆಯ ಅಂಕಗಳನ್ನು ಪಡೆದುಕೊಂಡಾಗ ಹೆತ್ತವರು ಅಭಿನಂದಿಸುವುದು ಸಹಜ.
ಆದರೆ ತಪ್ಪು ಮಾಡಿದಾಗ ಕೂಡಾ ಮೃದು ಮಾತುಗಳಿಂದ ಎಚ್ಚರಿಸುತ್ತಾ ಪ್ರೇರಣೆಯನ್ನುಂಟು ಮಾಡುವುದು ಕೂಡಾ ಒಂದು ಕಲೆ “ಈ ಸಾರಿ ನಿರೀಸಿದಷ್ಟು ಮಾರ್ಕ್ಸ್ ಬಂದಿಲ್ಲ ಡೋಂಟ್ ವರಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಆದರೆ ಫೈನಲ್ ನಲ್ಲಾದರೂ ಹೆಚ್ಚಿನ ಮಾರ್ಕ್ಸ್ ಪಡೆಯಲು ಪಯತ್ನಿಸು.ಓ ಕೆ?ಆಲ್ ದ ಬೆಸ್ಟ್ ಬೆಸ್ಟ್” ಎನ್ನಬೇಕು.
* ಉತ್ಸಾಹಪಡಿಸದಿದ್ದರೂ ಪರವಾಗಿಲ್ಲ, ಆದರೆ ನಿರುತ್ಸಾಹ ಪಡಿಸಿದರೆ ಮಕ್ಕಳು ಎರಡು ಬಗೆಯಲ್ಲಿ ಸ್ಪಂದಿಸುತ್ತಾರೆ. ಮೊದಲನೇದಾಗಿ ತಮಗೇನೂ ಬರುವುದಿಲ್ಲ ಬದುಕಿನಲ್ಲಿ ತನಗಿನ್ನು ರಿಕ್ಷಾ ಓಡಿಸುವುದೇ ಬದುಕಿನ ಮಾರ್ಗ ಎಂದುಕೊಳ್ಳಬಹುದು. ಎರಡನೆಯದಾಗಿ ತಮ್ಮ ತಾಯಿ. ತಂದೆ ಯಾವಾಗ ನೋಡಿದರೂ ಬೈಯುತ್ತಲೇ ಇರುತ್ತಾರೆ. ಆದ್ದರಿಂದ ಅವರ ಮಾತುಗಳಿಗೆ ಬೆಲೆ ಕೂಡ ಬೇಕಾದ ಅಗತ್ಯವಿಲ್ಲ ಎಂದುಕೊಳ್ಳಬಹುದು.
ಮನೆಯಲ್ಲಿ ತುಂಬಾ ಬುದ್ಧಿವಂತರಾಗಿರುತ್ತ, ಕೆಟ್ಟ ಸ್ನೇಹಿತರ ಒಡನಾಟದಿಂದ ಕೆಟ್ಟ ಅಭ್ಯಾಸಗಳಿಗೆ ಗುರಿಯಾಗುತ್ತಿರುವ ಯುವಕರ ಜೊತೆಗೆ, ಯುವತಿಯರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ತಾಯಿ -ತಂದೆಯವರು ಮುಖ್ಯವಾಗಿ ಮಗನೊಂದಿಗೆ ಮುಕ್ತವಾಗಿರಬೇಕು