ಮನೆ ತಂತ್ರಜ್ಞಾನ ಸ್ಮಾರ್ಟ್​​’ಫೋನ್​ನ ಬ್ಯಾಟರಿ​ ಚಾರ್ಜ್​ ಬೇಗನೆ ಖಾಲಿಯಾಗದಂತೆ ಮಾಡಲು ಇಲ್ಲಿದೆ ಟಿಪ್ಸ್​

ಸ್ಮಾರ್ಟ್​​’ಫೋನ್​ನ ಬ್ಯಾಟರಿ​ ಚಾರ್ಜ್​ ಬೇಗನೆ ಖಾಲಿಯಾಗದಂತೆ ಮಾಡಲು ಇಲ್ಲಿದೆ ಟಿಪ್ಸ್​

0

ಸ್ಮಾರ್ಟ್’​ಫೋನ್​’ಗಳು ಇತ್ತೀಚೆಗೆ ಎಲ್ಲರ ಅಗತ್ಯ ಸಾಧನವಾಗಿದೆ. ಆದರೆ ಅನೇಕರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಮಾರ್ಟ್​​’ಫೋನ್’​​ನ ಬ್ಯಾಟರಿ ಬೇಗನೆ ಏಕೆ ಖಾಲಿ ಆಗುತ್ತಿದೆ ಎಂಬ ಯೋಚನೆ ಮಾಡ್ತಿದ್ದಾರೆ. ಹಾಗಿದ್ರೆ ಸ್ಮಾರ್ಟ್​’ಫೋನ್​’ನ ಬ್ಯಾಟರಿ ವೇಗವಾಗಿ ಮುಗಿಯದಂತೆ ಮಾಡಲು ಇಲ್ಲಿದೆ ಟಿಪ್ಸ್​.

ಸ್ಮಾರ್ಟ್​ಫೋನ್​’ಗಳು ಇತ್ತೀಚೆಗೆ ಪ್ರತಿಯೊಬ್ಬರ ಅಗತ್ಯ ಸಾಧನವಾಗಿದೆ. ಈ ಮೊಬೈಲ್​ ಅನ್ನು ಒಂದು ರೀತಿಯಲ್ಲಿ ಮಿನಿ ಲ್ಯಾಪ್’​​ಟಾಪ್​ ಅಂತಾನೂ ಹೇಳ್ಬಹದು. ಏಕೆಂದರೆ ಈಗ ಲ್ಯಾಪ್​’ಟಾಪ್’​ನಂತೆಯೇ ಕ್ಷಣಮಾತ್ರದಲ್ಲಿ ಮೊಬೈಲ್’​ನಲ್ಲೂ ಯಾವುದೇ ಕೆಲಸವನ್ನು ಮಾಡ್ಬಹುದು.

ಸ್ಮಾರ್ಟ್’​ಫೋನ್’​ಗಳು ಇತ್ತೀಚೆಗೆ ಎಲ್ಲರ ಅಗತ್ಯ ಸಾಧನವಾಗಿದೆ ಹೌದು ಆದರೆ ಅನೇಕರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಹಾಗಿದ್ರೆ ಸ್ಮಾರ್ಟ್’​ಫೋನ್ನ ಬ್ಯಾಟರಿ ವೇಗವಾಗಿ ಮುಗಿಯದಂತೆ ಮಾಡಲು ಇಲ್ಲಿದೆ ಟಿಪ್ಸ್​.

ಆಂಡ್ರಾಯ್ಡ್ ಫೋನ್‌ ಇರಲಿ ಇಲ್ಲವೇ ಐಫೋನ್ ಆಗಿರಲಿ ಜಿಪಿಎಸ್ ಅಥವಾ ಲೊಕೇಶನ್ ಅನ್ನು ಫೋನ್‌ನಲ್ಲಿ ಗುರುತಿಸಲಾಗುತ್ತದೆ. ಇದು ಹೆಚ್ಚುವರಿ ಬ್ಯಾಟರಿಯನ್ನು ಖರ್ಚು ಮಾಡಿಬಿಡುತ್ತದೆ.

ಜಿಪಿಎಸ್​ ಆಫ್​ ಮಾಡಿ: ಆಂಡ್ರಾಯ್ಡ್ ಫೋನ್‌ ಇರಲಿ ಇಲ್ಲವೇ ಐಫೋನ್ ಆಗಿರಲಿ ಜಿಪಿಎಸ್ ಅಥವಾ ಲೊಕೇಶನ್ ಅನ್ನು ಫೋನ್‌ನಲ್ಲಿ ಗುರುತಿಸಲಾಗುತ್ತದೆ. ಇದು ಹೆಚ್ಚುವರಿ ಬ್ಯಾಟರಿಯನ್ನು ಖರ್ಚು ಮಾಡಿಬಿಡುತ್ತದೆ. ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಾರದಾದ್ರೆ ಜಿಪಿಎಸ್​ ಅನ್ನು ಆಫ್​ ಮಾಡಿ.

ವೈಫೈ ಬಳಸಿ: ಸಾಧ್ಯವಾದಷ್ಟು ಇಂಟರ್ನೆಟ್​ ಬಳಕೆ ಮಾಡುವ ಬದಲು ವೈಫೈ ಬಳಕೆಯನ್ನು ಮಾಡಿ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಸ್ವಯಂಚಾಲಿತವಾಗಿ ವೈಫೈ ಆನ್ ಇದ್ದರೆ ಅದನ್ನೇ ಬಳಕೆ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಬಹುದು.

ಆಟೋಸ್ಕ್ರೀನ್​ ಮೋಡ್’​ನಲ್ಲಿಡಿ: ಫೋನ್‌ನಲ್ಲಿ ಆಟೊ ಬ್ರೈಟ್‌’ನೆಸ್ ಅನ್ನು ಆನ್​​ ಮಾಡಿಡುವುದು ಉತ್ತಮವಾದ ವಿಚಾರವಾಗಿದೆ. ನೀವು ಸಾಧ್ಯವಾದಷ್ಟು ಫೋನ್ ಸ್ಕ್ರೀನ್‌’ನ ಬ್ರೈಟ್‌’ನೆಸ್ ಅನ್ನು ಕಡಿಮೆ ಮಾಡಿ. ಇದರಿಂದ ಕೂಡ ಸ್ಮಾರ್ಟ್‌’ಫೋನ್‌’ನ ಬ್ಯಾಟರಿಯನ್ನು ನಿಮಗೆ ಉಳಿಸಬಹುದಾಗಿದೆ. ಅಥವಾ ಆಟೋ ಬ್ರೈಟ್’​ನೆಸ್​ ಮೋಡ್​ನಲ್ಲಿಟ್ಟರೆ ನಿಮ್ಮ ವಾತಾವರಣಕ್ಕೆ ತಕ್ಕಂತೆ ಬ್ರೈಟ್​ನೆಸ್​ ಬದಲಾಗುತ್ತಿರುತ್ತದೆ. ಈ ಮೂಲಕವೂ ಮೊಬೈಲ್​’ನ ಚಾರ್ಜಿಂಗ್ ಸಾಮರ್ಥ್ಯವನ್ನು ಉಳಿಸಬಹುದು.

ಅನಗತ್ಯ ಆ್ಯಪ್​​ಗಳನ್ನು ಡಿಲೀಟ್ ಮಾಡಿ: ಆಂಡ್ರಾಯ್ಡ್ ಇಲ್ಲವೇ ಐಫೋನ್ ಆಗಿರಲಿ ಕೆಲವೊಂದು ಅಪ್ಲಿಕೇಶನ್‌’ಗಳು ನಿಮ್ಮ ಫೋನ್‌ನ ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಅಪ್ಲಿಕೇಶನ್‌ಗಳು ಶೇಕಡಾ 10 ಕ್ಕಿಂತ ಅಧಿಕ ಬ್ಯಾಟರಿಯನ್ನು ಬಳಸಿಕೊಳ್ಳುತ್ತಿದೆ ಎಂದಾದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಇನ್ನು ಅನಗತ್ಯವಾದ ಅಪ್ಲಿಕೇಶನ್​ಗಳನ್ನು ಡಿಲೀಟ್ ಮಾಡುವುದು ಉತ್ತಮ.

ಫೇಸ್‌ಬುಕ್ ಬಳಕೆ ಕಡಿಮೆ ಮಾಡಿ: ಫೇಸ್​ಬುಕ್ ಅಪ್ಲಿಕೇಶನ್​ ಅಧಿಕ ಡೇಟಾವನ್ನು ಬಳಸುತ್ತದೆ. ಜೊತೆಗೆ ಇದು ಮೊಬೈಲ್​ನ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಆದ್ದರಿಂದ ಈ ಫೇಸ್​ಬುಕ್​ ಅಪ್ಲಿಕೇಶನ್​​ ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ.

ಬ್ಯಾಟರಿ ಸೇವರ್​ ಮೋಡ್ ಆನ್​ ಮಾಡಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ಬ್ಯಾಟರಿ ಸೇವರ್​ ಮೋಡ್‌ನಲ್ಲಿ ಬರುತ್ತಿವೆ. ಇದನ್ನು ಆನ್ ಮಾಡಿದಾಗ ಡಿವೈಸ್‌’ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪ್ಲಿಕೇಶನ್​’ಗಳ ಕಾರ್ಯವನ್ನು ನಿಲ್ಲಿಸುತ್ತದೆ. ಈ ಮೂಲಕ ನಿಮ್ಮ ಮೊಬೈಲ್​ನ ಬ್ಯಾಟರಿಯ ಚಾರ್ಜ್​ ಅನ್ನು ಉಳಿಸಬಹುದು.

ಹಿಂದಿನ ಲೇಖನವಿಶ್ವಸಂಸ್ಥೆ: ಉಕ್ರೇನ್‌’ನಲ್ಲಿ ಶಾಂತಿ ಸ್ಥಾಪನೆ ನಿರ್ಣಯದಿಂದ ದೂರ ಉಳಿದ ಭಾರತ
ಮುಂದಿನ ಲೇಖನಹಳಿಗಳ ಮೇಲೆ ವಿಡಿಯೋ ಚಿತ್ರೀಕರಣ: ರೈಲಿಗೆ ಸಿಲುಕಿ ಇಬ್ಬರ ಸಾವು