ಮನೆ ಕಾನೂನು ಟಿಪ್ಪು ಜಯಂತಿ ಆಚರಣೆಗೆ ತಡೆ: ಇಂದು ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಟಿಪ್ಪು ಜಯಂತಿ ಆಚರಣೆಗೆ ತಡೆ: ಇಂದು ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

0

ಶ್ರೀರಂಗಪಟ್ಟಣ:ಗಂಜಾಂನ ಗುಂಬಜ್ ನಲ್ಲಿ ಟಿಪ್ಪು ವಕ್ಫ್‌ಎಸ್ಟೇಟ್ ವತಿಯಿಂದ ನ.10ರಂದು ಟಿಪ್ಪುಜಯಂತಿ ಕಾರ್ಯಕ್ರಮ ಆಯೋಜಿಸುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದವತಿಯಿಂದ ತಹಶೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರು 144ರ ಕಲಂ ಅಡಿಯಲ್ಲಿ ಶ್ರೀರಂಗಪಟ್ಟಣದಲ್ಲಿ ನಿಷೇದ ಆದೇಶ ಜಾರಿಗೊಳಿಸಿದ್ದಾರೆ.

Join Our Whatsapp Group


ಈ ಹಿಂದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನ. 10ರಂದು ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು.ನಂತರದಲ್ಲಿ ಸರ್ಕಾರದ ವತಿಯಿಂದಲೇ ಟಿಪ್ಪು ಜಂಯಂತಿಯನ್ನು ನಿಷೇದ ಮಾಡಿತ್ತು.ಇದೀಗ ಖಾಸಗಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಯನ್ನು ಮುಸ್ಲೀಂ ಯುವಕರು, ಟಿಪ್ಪು ಅಭಿಮಾನಿಗಳು ಮೈಸೂರು ಸೇರಿದಂತೆ ಅಕ್ಕ ಪಕ್ಕದ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಜಯಂತಿ ಆಚರಿಸಲು ಮುಂದಾಗಿರುವ ಮಾಹಿತಿಗಳು ಬಂದ ಹಿನ್ನೆಲೆಯಲಿ ಪೊಲೀಸರು ವರದಿ ಮಾಡಿ ತಹಶೀಲ್ದಾರ್‌ಹಾಗೂ ದಂಢಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಈ ವರದಿಯನ್ನು ಪರಿಶೀಲಿಸಿದ ದಂಢಾಧಿಕಾರಿಗಳು , ಶ್ರೀರಂಗಪಟ್ಟಣವು ಮತೀಯ ಸೂಕ್ಷ್ಮ ಪ್ರದೇಶವಾಗಿದ್ದು ನ.10ರ ಬೆಳಿಗ್ಗೆ 6-00 ಘಂಟೆಯಿಂದ ರಾತ್ರಿ 9-00 ಘಂಟೆಯವರೆಗೆ ಶ್ರೀರಂಗಪಟ್ಟಣ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲಿ ಗುಂಪು ಮಾಡಿ ಪ್ರತಿಭಟನೆ, ಮೆರವಣಿಗೆ, ಯಾಲಿ, ಬ್ಯಾನರ್, ಬಂಟಿಂಗ್ಸ್, ಬಾವುಟಗಳು ಧ್ವನಿವರ್ದಕಗಳು, ಪಟಾಕಿಸುಡುವುದು ಡಿ.ಜೆ.ಅಳವಡಿಸಿಕೊಂಡು ಘೋಷಣೆ ಕೂಗದಂತೆ ಹಾಗೂ ಟಾಮ್ರ, ಪ್ರಚೋದನಾತ್ಮಕ ಚಿತ್ರವಿರುವ ಟೀ ಶರ್ಟ್ ಧರಿಸದಂತೆ ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.