ಬೆಂಗಳೂರು: ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೆಗ್ಗನಹಳ್ಳಿ ನಿವಾಸಿ ಪವಿತ್ರ ಎನ್ನುವ ಮಹಿಳೆ ಡೆತ್ ನೋಟ್ ಬರೆದು ಅದನ್ನು ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ಬಳಿಕ ನೇಣಿಗೆ ಶರಣಾಗಿದ್ದಾಳೆ. ಜುಲೈ 2ರ ಬೆಳಗಿನ ಜಾವ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೊದಲ ಪತಿ ವಿಚ್ಛೇದನ ನೀಡಿದ ಪವಿತ್ರ, ಚೇತನ್ ಗೌಡರನ್ನ ಎರಡನೇ ಮದುವೆಯಾಗಿದ್ದಳು. ಚೇತನ್ ಗೌಡ ಸುಮುಖ ಮರ್ಚೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕನಾಗಿದ್ದಾನೆ. ಆದರೆ ಗಂಡನಿಗೆ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ಪವಿತ್ರಾಗೆ ಗೊತ್ತಾಗಿದೆ.
ಈ ವಿಚಾರವಾಗಿ ಪವಿತ್ರ ಹಾಗೂ ಚೇತನ್ ಗೌಡರ ನಡುವೆ ಗಲಾಟೆ ನಡೆಯುತ್ತಿತ್ತು, ಈ ಬಗ್ಗೆ ನನ್ನ ತಾಯಿ ಪದ್ಮಮ್ಮ ಬಳಿ ಹೇಳಿದ್ದಳು. ಕೊನೆಗೆ ಮನನೊಂದು ಪವಿತ್ರ ಡೆತ್ ನೋಟ್ ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ.
ಮಗಳ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ ಮನೆ ಬಳಿ ಬಂದಾಗ ಪವಿತ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದೀಗ ಮೃತಳ ತಾಯಿ ಪದ್ಮಮ್ಮಾರ ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೂರು ಯುವತಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದು , ಡೆತ್ ನೋಟ್ ಹಾಗೂ ಮೃತಳ ಎರಡು ಫೋನ್ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.