ಈ ಕಾಲದ ತಾಯಿ-ತಂದೆಯರು ಮಕ್ಕಳ ಓದಿನ ಬಗ್ಗೆ ಭಯಪಡುತ್ತಾ, ಒತ್ತಡಕ್ಕೊಳಗಾಗುತ್ತಿದ್ದಾರೆ. ಇದು ಬಹುಶಃ ನಮ್ಮ ರಾಜ್ಯದಲ್ಲಿ ಸ್ವಲ್ಪ ಅಧಿಕವಾಗಿದೆ ಎಂದೆನಿಸುತ್ತದೆ. ಮಕ್ಕಳಿಗೆ ತೋರುವ ಪ್ರೇಮಾಭಿಮಾನಗಳನ್ನು ಮರೆತು, ಅವರನ್ನು ಓದಿನ ಯಂತ್ರಗಳಂತೆ ತಿಳಿಯುತ್ತಿದ್ದಾರೆ. ಅವರ ಕೆಲಸವೇನಿದ್ದರೂ ಓದುವುದು ಮಾತ್ರ ಎಂಬಂತೆ ಪ್ರವರ್ತಿಸುತ್ತಿದ್ದಾರೆ. ಬ್ಯಾಂಕುಗಳು, ಬ್ಯಾಂಕು, ಉದ್ಯೋಗ, ಹಾಗೂ ವಿದೇಶಗಳಲ್ಲಿನ ಕೆಲಸ. ಇವುಗಳ ಆಲೋಚನೆಯಲ್ಲಿಯೇ ಇರುತ್ತಾರೆ.
ಅದರ ಜೊತೆಗೆ ಈ ನಡುವೆ ಕೆಲವೊಂದು ಜೂನಿಯರ್ ಕಾಲೇಜ್ ಗಳು, ಹತ್ತನೇ ತರಗತಿಯಲ್ಲಿ ಬ್ಯಾಂಕ್ ಬಂದವರಿಗೆ ಫೀಜ್ ಗಳಿಲ್ಲದೆ ಓದಲು ಆಫರ್ ಮಾಡುವುದರೊಂದಿಗೆ ಮಕ್ಕಳ ಮೇಲೆ ಒತ್ತಡ ತೀರಾ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೆ ಓದಿನ ಬಗ್ಗೆ ಜಿಗುಪ್ಪೆ ಉಂಟಾಗುತ್ತದೆ. ಆರಾಮವಾಗಿ ಶಾಲೆಗೆ ಹೋಗಿ ಕಲಿತುಕೊಳ್ಳಬೇಕಾದ ವಯಸ್ಸಿನಲ್ಲಿ ಸಮಸ್ಯೆಗಳೊಂದಿಗೆ ತಳಮಳಿಸುತ್ತಿದ್ದಾರೆ. ಈ ಸಮಸ್ಯೆ ಒಂದನೇ ತರಗತಿಯಿಂದಲೇ ಪ್ರಾರಂಭವಾಗುತ್ತದೆ. ಒಂದು ಬಾರಿ ಟಿ.ವಿ ಚಾನೆಲ್ ನವರು ಏರ್ಪಾಡುಮಾಡಿದ ಆನ್ ಲೈನ್ ಪೇರೆಂಟ್ ಕೌನ್ಸಿಲಿಂಗ್‌ನಲ್ಲಿ ಒಬ್ಬ ತಾಯಿಯೊಂದಿಗೆ ಮಾತನಾಡುತ್ತಾ ”ನಮ್ಮ ಹುಡುಗ ಏಕಾಗ್ರತೆಯಿಂತ ಕುಳಿತುಕೊಂಡು ಓದುತ್ತಿಲ್ಲ. ಓದಿನ ಮೇಲೆ ಸ್ವಲ್ಪ ಕೂಡಾ ಗಮನವಿಲ್ಲ, ಹೊಡೆದರೆ ಆಳುತ್ತಾನೆ ಯಾವಾಗ ನೋಡಿದರೂ ಆಟ ಪಾಟಗಳು, ಟಿ.ವಿ.ಗಳ ಹೊರತಾಗಿ ಬೇರೇನಿಲ್ಲ. ಇವನನ್ನು ನಾವು ಏನು ಮಾಡಬೇಕು?” ಎಂದು ಕೇಳಿದರು.
“ ನಿಮ್ಮ ಹುಡುಗನ ವಯಸ್ಸೆಷ್ಟಮ್ಮಾ? ಎಂದು ಕೇಳಿದೆ.
“ ಐದು ವರ್ಷ ಸಾರ್” ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ ”ಎಂದಳು
ಇಂತಹ ಬಹಳಷ್ಟು ತಾಯಂದಿರಿದ್ದಾರೆ. ಬಾಲ್ಯವನ್ನು ಅರ್ಥಮಾಡಿಕೊಳ್ಳಲಾಗದೆ ಈಗಿಂದಲೇ ಓದು ಓದು ಎನ್ನುತ್ತಾ ಪುಸ್ತಕಗಳನ್ನು ರಾಶಿ ಹಾಕುವ ಅಮಾಯಕ ಹೆತ್ತವರಿದ್ದಾರೆ. ನಿಜ ಹೇಳಬೇಕೆಂದರೆ ಆ ಸಮಯದಲ್ಲಿ ತಾಯಿಯಾದವಳು ಮಕ್ಕಳಿಗೆ ಕಲಿಸುವ ವಿಷಯಗಳು ಸಾಕಷ್ಟಿವೆ ಅದೇ ಓದನ್ನು ಮತ್ತೊಂದು ರೀತಿಯಾಗಿ ಕಥೆಗಳ ಮೂಲಕ ಹೇಳಬಹುದು ಹೊರಗಡೆ ಕರೆದುಕೊಂಡು ಹೋಗಿ ಬಹಳಷ್ಟು ಸ್ಥಳಗಳನ್ನು ತೋರಿಸಬಹುದು ಈ ತರಗತಿಗಳ ಓದೇ, ನಿಜವಾದ ಓದಲ್ಲ, ಈ ಬ್ಯಾಂಕುಗಳು, ಉದ್ಯೋಗ, ಸಂದರ್ಶನದವರೆಗೆ ಹೋಗಲು ಸಹಕಾರಿಯಾಗಬಹುದಾದರೂ ಉದ್ಯೋಗಗಳಿಗೆ ಸೇರಿದ ಆರು ತಿಂಗಳೊಳಗೆ ಲೈಫ್ ಸ್ಕಿಲ್ ಇಲ್ಲವೆಂದು, ಕಮ್ಯೂನಿಕೇಷನ್ ಚೆನ್ನಾಗಿಲ್ಲವೆಂದು ಮನೆಗೆ ಕಳುಹಿಸಲಡುತ್ತಾರೆ ಇವೆಲ್ಲವೂ ಮನೆಯಲ್ಲಿ ಹೆತ್ತವರು ಕಲ್ಪಿಸುವಂತಹವು, ಇದು ಅವರ ಆದ್ಯ ಕರ್ತವ್ಯವೂ ಹೌದು.
ಚೆನ್ನಾಗಿ ಓದಬೇಕೆಂದರೆ….?
ಮಕ್ಕಳು ಚೆನ್ನಾಗಿ ಓದಬೇಕೆಂದರೆ ಓದಿನ ಬಗ್ಗೆ ಕಡಿಮೆ ಮಾತನಾಡಬೇಕು. ಓದಿನ ಜೊತೆಗೆ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಆಟ, ಪಾಠ, ಸ್ನೇಹಿತರು, ಬಂಧುಗಳು ಹಾಗೂ ಆಹಾರದ ಬಗ್ಗೆ ಕೂಡಾ ಆಸಕ್ತಿ ತೋರಿಸಬೇಕು. ಊಟ ಮಾಡುವಾಗ ಓದಿನ ಬಗ್ಗೆ ಬೋಧಿಸಬೇಕಾದ ಅಗತ್ಯವಿಲ್ಲ. ಜಾಲಿಯಾಗಿ ಪಿಕ್ನಿಕ್ಗಳು. ಮೋಜಿನ ಪ್ರವಾಸಗಳಿಗೆ ಹೋದಾಗ, ಓದು, ಪಾಠಗಳ ಸೊಲೆತ್ತಬಾರದು ವ್ಯಾಸಂಗವೇ ಸರ್ವಸ್ವವಲ್ಲ ಎಂಬ ಭಾವನೆಯನ್ನು ಅವರಲ್ಲಿ ಮೂಡುವಂತೆ ಮಾಡಬೇಕು. ಅದಕ್ಕೆ ಕೆಲವೊಂದು ಉಪಾಯಗಳಿವೆ.
★* ಓದದಿದ್ದರೆ ಬರಬಹುದಾದ ಸಮಸ್ಯೆಗಳನ್ನು ಹೇಳುವುದಕ್ಕಿಂತ, ಓದಿನಿಂದಾಗಿ ಅದೆಷ್ಟು ಲಾಭಗಳಿವೆಯೋ ತಿಳಿಸಿ ಹೇಳಬೇಕು.
★* ಚೆನ್ನಾಗಿ ಓದುತ್ತಿರುವ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಒಂದು ವೇಳೆ ಹೋಲಿಸಿದರೂ ಅವರಿಗಿಂತ ಹೆಚ್ಚಿನ ಅಂಕಗಳನ್ನು ಪಡೆಯಬೇಕೆಂಬ ಪ್ರೇರಣೆ ಯನ್ನುಂಟು ಮಾಡಬೇಕು.
★* ಮಕ್ಕಳು ಮನೆಗೆ ಬರುತ್ತಿದ್ದ ಹಾಗೇ ನಗುನಗುತ್ತಾ ಮಾತನಾಡಿ, ಒಂದು ಗಂಟೆ ಕಳೆಯುವವರೆಗೆ ಓದಿನ ಮಾತೇ ಎತ್ತಬಾರದು. ಇದನ್ನು ತಾಯಂದಿರು ಸಾಧನೆ ಮಾಡಬೇಕಾದ ವಿಷಯ ಏಕೆಂದರೆ ಮಕ್ಕಳು ಶಾಲೆಯಿಂದ ಬರುವ ವೇಳೆಗೆ ಆಯಾಸಗೊಂಡಿರುತ್ತಾರೆ.
★* ಮನೆಯಲ್ಲಿ ಮಕ್ಕಳು ಓದಿಕೊಳ್ಳುತ್ತಿರುವಾಗ ಯಾವುದೇ ಕೆಲಸಗಳನ್ನು ಹೇಳಬೇಡಿ. ಹಿರಿಯರು ಕೂಡಾ ಏಂದ ಧ್ವನಿಯಲ್ಲಿ ಮಾತನಾಡಿಕೊಳ್ಳಬಾರದು.
★* ಶಾಲೆಯಲ್ಲಿ ನೀಡಿದ ಹೋಮ್ ವರ್ಕ್ ಜೊತೆಗೆ, ಕೆಲವು ಪೇರೆಂಟ್ಸ್ ಇನ್ನಷ್ಟುಹೋಂವರ್ಕ್ ನೀಡುತ್ತಾರೆ ಅಂತಹ ತಾಯಿ-ತಂದೆಯರನ್ನು ದ್ವೇಷಿಸುವ ಮಕ್ಕಳಿಗೆ ನಾನು ಕೌನ್ಸಿಲಿಂಗ್ ಮಾಡಿದ್ದೇನೆ
★* ಶಾಲೆಯಲ್ಲಿ ಒಳ್ಳೆಯ ಅಂಕಗಳು ಬಂದಾಗ, ಮೆಡಲ್ಸ್ ಸರ್ಟಿಫಿಕೇಟ್ಸ್ ನೀಡಿದಾಗ ಅವುಗಳನ್ನು ಅಂದವಾಗಿ ಅಲಂಕರಿಸಿ ಬಂದ ಅತಿಥಿಗಳೆಲ್ಲ ನೋಡುವಂತೆ ಇಡಿ.
★* ಮಕ್ಕಳು ಸಾಧಿಸಿದ ಗೆಲುವುಗಳನ್ನು, ಆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಎನ್. ಲಾರ್ಜ್ಮಾಡಿ, ಸುಂದರವಾದ ಪ್ರೇಮ್ ನಲ್ಲಿ ಎಲ್ಲರಿಗೂ ಕಾಣಿಸುವ ಹಾಗೆ
★* ಹೋಮ್‌ವರ್ಕ್ ಮಾಡುವಾಗ, ಅವರು ಕೇಳಿದಾಗ ಮಾತ್ರ ಸಲಹೆಗಳನ್ನು ನೀಡಿ. ಮಧ್ಯದಲ್ಲಿ ಡಿಸ್ಟರ್ಬ್ ಮಾಡಬೇಡಿ ಎಲ್ಲಾ ಆದನಂತರ ಒಂದು ಬಾರಿ ಸುಮ್ಮನೆ ಕಣ್ಣಾಡಿಸಿ.
★* ಓದುವ ಸಮಯದಲ್ಲಿ ಆ ಕೋಣೆಯಲ್ಲಿ ಟಿ.ವಿ ರೇಡಿಯೋಗಳನ್ನು ಆಫ್ ಮಾಡಿಡುವುದು ಸೂಕ್ತ
★* ಶಾಲೆಯಲ್ಲಿ ಏರ್ಪಡಿಸುವ ಪೇರೆಂಟ್, ಟೀಚರ್ ಮೀಟಿಂಗ್ ಗಳಿಗೆ ಕಡ್ಡಾಯವಾಗಿ ಹೋಗಿ, ಅವುಗಳಿಗಿಂತ ಮುಖ್ಯವಾದ ಮೀಟಿಂಗ್ ಬೇರೊಂದಿಲ್ಲವೆಂಬುದನ್ನು ನಂಬಿರಿ
★* ಸಾಧ್ಯವಾದಾಗಲೆಲ್ಲಾ ಕ್ಲಾಸ್ ಟೀಚರನ್ನು ಭೇಟಿ ಮಾಡಿ ನಿಮ್ಮ ಮಗುವಿನ ಓದು ಕುರಿತಂತೆ, ಅವನ/ಅವಳ ನಡವಳಿಕೆ ಬಗ್ಗೆ ವಿಚಾರಿಸಿ.
- ★ಮಕ್ಕಳಿಗೂ ಒಂದು ಗುರಿಯಿರುತ್ತದೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಅದರ ಹೊರತಾಗಿ ನಿಮ್ಮ ಬಯಕೆಗಳನ್ನು ಈಡೇರಿಸುವ ಸಾಧನವನ್ನಾಗಿ ಮಾಡಿಕೊಳ್ಳ ಬೇಡಿ.
★* ಮಕ್ಕಳಿಗೂ ಕೆಲವು ಆಸೆ, ಆಶಯಗಳಿರುತ್ತವೆ. ಅದನ್ನು ಅವರೇ ಹೇಳಲು ಬಿಡಿ ಅವು ಅಸಾಧ್ಯವೆನಿಸಿದರೂ ಅವರ ಆಸೆಗೆ ತಣ್ಣೀರೆರಚಬೇಡಿ ಮತ್ತು ಅವರೆದುರಿಗೆ ಹೇಳಬೇಡಿ ಆ ನಿಟ್ಟಿನಲ್ಲೇ ಶಿಕ್ಷಣ ನೀಡಿ.
★* ಮಕ್ಕಳಿಗೆ ಜಾತಿ, ಮತಗಳ ಕುರಿತಂತೆ ಅತಿಯಾಗಿ ಹೇಳಬೇಡಿ ಅದೇ ಜಾಡ್ಯವಾಗಿ ಬದಲಾಗಿ ಕಾಲೇಜಿನಲ್ಲಿ ವೈಮನಸ್ಸು ಸೃಷ್ಟಿಯಾಗಬಹುದು.
★ ಮಕ್ಕಳಿಗೆ ಶಾಲೆ ಇಷ್ಟವಾಗದಿದ್ದರೆ, ಏಕೆ ಇಷ್ಟವಾಗಲಿಲ್ಲವೆಂದು ವಿಚಾರಿಸಿ ಅದು ಶಾಲೆ ಇಷ್ಟವಾಗದೇ ಇರಬಹುದು ಅಥವಾ ಕ್ಲಾಸ್ ಮೇಟ್ಸ್ ಇಷ್ಟವಾಗದಿರಬಹುದು.
★* ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಿಮ್ಮ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿ. ಅಗತ್ಯವೆನಿಸಿದರೆ ನೀವು ಕೂಡಾ ಹೋಗಿ ಶಾಲಾ ಆಡಳಿತ ಮಂಡಳಿಗೆ ಸಹಕರಿಸಿ
★* ಶಾಲೆಯಲ್ಲಿ ಎಷ್ಟು ಹೆಚ್ಚು ಸಮಯ ಕಳೆದರೆ, ಅಷ್ಟು ಜ್ಞಾನ ಬರುತ್ತದೆಯೆಂಬ ಭ್ರಮೆಯಿಂದ ಹೊರ ಬನ್ನಿ ನೀವು ಮನೆಯಲ್ಲಿ ಕಲಿಸುವ ಕೆಲವು ಶಿಕ್ಷಣವೂ ಇದೆ ಯೆಂಬುದನ್ನು ತಿಳಿಯಿರಿ.
- ರಿವಾರ್ಡ್ ಮತ್ತು ಶಿಕ್ಷಾಪದತಿ ಒಂದು ಕಾಲದಲ್ಲಿ ಚೆನ್ನಾಗಿತ್ತು. ಈಗ ಅವು ಮೂಲೆ ಗುಂಪಾಗಿದೆ. ರಿವಾರ್ಡ್ ಮಾತು ಹೇಗಿದ್ದರೂ ಶಿಕ್ಷೆ ಕಡಿಮೆಯಾಗಬೇಕು.
★* ಪರೀಕ್ಷೆಗಳ ಸಮಯದಲ್ಲಿ ಮಕ್ಕಳು ಮೊದಲೇ ಟೆನ್ನನ್‌ನಲ್ಲಿರುತ್ತಾರಾದ್ದರಿಂದ ನೀವು ಮತ್ತಷ್ಟು ಟೆನ್ನನ್ ಉಂಟುಮಾಡಬೇಡಿ. ಅವರಿಗೆ ಸಮಯಕ್ಕೆ ಸರಿಯಾಗಿ ತಿಂಡಿ ನಿದ್ರೆಗಳು ಕಾಲಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳಿ.
- ★ತಂದೆಯಾದವರು ಅದೆಷ್ಟೇ ಬಿಡುವಿಲ್ಲದಂತಿದ್ದರೂ ಪರೀಕ್ಷೆಗಳ ಸಮಯದಲ್ಲಿ ಮನೆ ಯಲ್ಲಿದ್ದರೆ ಒಳ್ಳೆಯದು ಹಾಗಂತ ಓದಿನ ಬಗ್ಗೆ ಒತ್ತಡ ಹೇರಬಾರದು.
- ★ಪರೀಕ್ಷೆಗಳ ಸಮಯದಲ್ಲಿ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಅಂದರೆ ಕಂಪಾಸ್, ಪೆನ್ನು, ಪೆನ್ಸಿಲ್ ಗಳು ವಗೈರೆ ಕೈಗೆಟುಕುವಂತಿರಬೇಕು.
★* ಪಬ್ಲಿಕ್ ಪರೀಕ್ಷೆಗಳಲ್ಲಿ ಪೇರೆಂಟ್ಸ್ ಹಿಂದಿನ ದಿನವೇ ಪರೀಕ್ಷಾ ಕೇಂದ್ರ ಎಲ್ಲಿದೆಯೋ ನೋಡಿ ಬರಬೇಕು. ಪರೀಕ್ಷೆಯ ದಿನದಂದು ಒಂದು ಗಂಟೆ ಮುಂಚಿತವಾಗಿಯೇ ತಲುಪುವ ಹಾಗೆ ಹೊರಡಬೇಕು.
★* ಓದಿನ ವಿಷಯದಲ್ಲಿ ತನ್ನನ್ನು ನಿಯಂತ್ರಿಸುತ್ತಿದ್ದಾರೆಂದುಕೊಳ್ಳದೆ, ತನ್ನ ಬೆಳವಣಿಗೆಗೆ ಹೆತ್ತವರು ಸಹಾಯ ಮಾಡುತ್ತಿದ್ದಾರೆಂಬ ಭಾವನೆ ಮಕ್ಕಳಲ್ಲಿ ಮೂಡಬೇಕಲ್ಲದೆ, ಅಂತಹ ಪ್ರೇರಣೆಯ ಮಾತುಗಳನ್ನಾಡಲು ಕಲಿತುಕೊಳ್ಳಬೇಕು.
★* ತಮ್ಮ ಮಕ್ಕಳಲ್ಲಿರುವ ದೌರ್ಬಲ್ಯಗಳನ್ನು ಬಹಿರಂಗಪಡಿಸುವುದಾಗಲಿ, ಪದೇಪದೇ ಅದನ್ನು ಎತ್ತಿ ತೋರುವುದನ್ನು ಮಾಡದೆ ಅವುಗಳಿಂದ ಹೊರಬರುವ ಮಾರ್ಗವನ್ನು ತಿಳಿಸಿಕೊಡಿ.
★* ಶಾಲೆಗೆ ಹೋಗುವ ಮಕ್ಕಳಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳ ಬೆಳವಣಿಗೆಗಳಲ್ಲಿ ಬರುವ ಬದಲಾವಣೆಗಳನ್ನು ಕುರಿತು ಹೇಳಿ, ಅದಕ್ಕೆ ತಕ್ಕ ಉಡುಪುಗಳನ್ನು ಹಾಕಿ. ಕೋ-ಎಜ್ಯುಕೇಷನ್ ಶಾಲೆಗಳಲ್ಲಿ ಇದು ಕಡ್ಡಾಯ. ಅರ್ಥವಿಲ್ಲದ ಫ್ಯಾಷನ್ ಗಳ ಸಹವಾಸಕ್ಕೆ ಹೋಗಬೇಡಿ.
★* ಮನೆಯಲ್ಲಿ ಓದಿಗೆ ತಕ್ಕ ವಾತಾವರಣವನ್ನುಂಟು ಮಾಡಬೇಕು. ಮನೆ, ಆಫೀಸ್ ಎರಡೂ ಒಂದೇ ಆಗಿದ್ದರೆ ಮಕ್ಕಳಿಗೆ ತೊಂದರೆಯುಂಟಾಗಬಹುದು.
★* ನಿಮ್ಮ ಮಕ್ಕಳು ತಮ್ಮ ಸಹಪಾಠಿಗಳನ್ನು ಆಗಾಗ್ಗೆ ಭೇಟಿ ಮಾಡಲು ಅವಕಾಶ ಕೊಡಿ. ಕೆಲವು ಶ್ರೀಮಂತರು ತಮ್ಮ ಮಕ್ಕಳನ್ನು ಹೊರಕ್ಕೆ ಹೋಗಗೊಡುವುದಿಲ್ಲ. ಇದರಿಂದಾಗಿ ಅವರು ಸಂಪೂರ್ಣವಾಗಿ ಎಲ್ಲವನ್ನೂ ತಿಳಿದುಕೊಳ್ಳಲಾರರು. ನಾಳೆ ಅವರು ಅಧಿಕಾರಿಗಳಾಗುತ್ತಾರೆಂಬ ನಂಬಿಕೆ ಇಲ್ಲ.
★* ನಿಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಕುರಿತಂತೆ ವಿಶೇಷ ಶ್ರದೆ ತೆಗೆದುಕೊಳ್ಳಿ. ಅಗತ್ಯವಾದ ಅಭ್ಯಾಸ ಮಾಡಲು ಕನ್ಸಿವ್ ರೈಟಿಂಗ್ ಪುಸ್ತಕಗಳು ಈಗ ಲಭ್ಯವಿದೆ.
★* ತಮ್ಮ ಶಾಲೆಯ ಬಗ್ಗೆ, ಟೀಚರ್ಗಳ ಬಗ್ಗೆ, ಕ್ಲಾಸ್‌ಮೆಟ್ಸ್ ಬಗ್ಗೆ, ನಿಮ್ಮ ಮಕ್ಕಳು ಹೇಳುವಾಗ ಶ್ರದೆಯಿಂದ ಕೇಳಿ ಅವರ ಅನಿಸಿಕೆಯಂತೆ ಅವರ ವೈಖರಿ ಹೇಗೆ ಇರುತ್ತದೆಯೋ ತಿಳಿದುಕೊಳ್ಳಬಹುದು.
★* ಕೊನೆಯದಾಗಿ ನಿಮ್ಮ ಸಂಪ್ರದಾಯಗಳ ಕುರಿತು, ಮೌಲ್ಯಗಳ ಕುರಿತು ಮಕ್ಕಳಿಗೆ ಮೃದು ಧೋರಣೆಯಲ್ಲಿ ಬೋಧಿಸಿ. ನೀವು ಅವುಗಳನ್ನು ಆಚರಿಸುತ್ತಾ, ಅವರಿಗೆ ಮಾರ್ಗದರ್ಶಿಯಾಗಿರಿ. ಅವರೇ ಕಲಿತುಕೊಳ್ಳುತ್ತಾರೆ.
★* ನಿಮ್ಮ ಮಕ್ಕಳನ್ನು ಶಾಲೆ ಏರ್ಪಡಿಸುವ ಸೈನ್ಸ್ ಎಗ್ನಿಬಿಷನ್ಸ್, ಎಕ್ಸ್ಕರ್ಷನ್ ಗಳಲ್ಲಿ ಪಾಲ್ಗೊಳ್ಳುವ ಹಾಗೆ ಪ್ರೋತ್ಸಾಹಿಸಿ.
★* ಶಾಲಾ ಆಡಳಿತವರ್ಗ ಏನಾದರೂ ತಪ್ಪುಗಳು ಮಾಡುತ್ತಿದ್ದರೆ ನೀವು ಹೋಗಿ ನಯವಾಗಿ ಹೇಳಿ, ಅಷ್ಟೇ ಹೊರತು ಮಕ್ಕಳ ಮುಂದೆ ವಿಮರ್ಶಿಸಬೇಡಿ.