ಪ್ರಸ್ತುತ ಸಮಾಜಕ್ಕೆ ಸಂವಹನದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿವರ್ಷ ಮೇ 17 ರಂದು ವಿಶ್ವ ದೂರಸಂಪರ್ಕ ಆಚರಿಸಲಾಗುತ್ತದೆ.
\ಅಂತರ್ಜಾಲ, ಸಂಪರ್ಕ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದ ಆಗುತ್ತಿರುವ ಸಾಮಾಜಿಕ ಮತ್ತು ಸಮುದಾಯದ ಬದಲಾವಣೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಮೂಡಿಸುವುದೇ ವಿಶ್ವ ದೂರಸಂಪರ್ಕ ದಿನದ ಪ್ರಮುಖ ಉದ್ದೇಶವಾಗಿದೆ.
ವಿಶ್ವ ದೂರ ಸಂಪರ್ಕ ದಿನ ಆರಂಭವಾದುದು ಹೇಗೆ ಗೊತ್ತಾ ?
1865 ರ ಮೇ 17ರಂದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU)ನ ಸ್ಥಾಪನೆಯ ನೆನಪಿನಲ್ಲಿ ಈ ದಿನವನ್ನು ಆಚರಣೆಯ ಸ್ಮರಿಸಲಾಗುತ್ತಿದೆ. ಪ್ಯಾರಿಸ್ ನಲ್ಲಿ ಮೊದಲ ಅಂತರರಾಷ್ಟ್ರೀಯ ಟೆಲಿಗ್ರಾಫ್ ಸಮಾವೇಶಕ್ಕೆ ಸಹಿ ಹಾಕಿದ ಸಂದರ್ಭವೂ ಇದಾಗಿದೆ.17 ಮೇ, 1969 ರಂದು, ವಿಶ್ವ ದೂರಸಂಪರ್ಕ ದಿನವನ್ನು ಮೊದಲು ಆಚರಿಸಲಾಗಿತು. 1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ‘ಐಟಿಯು’ ಸ್ಥಾಪನೆಯಾದ ನೆನಪಿನಲ್ಲಿ ವಿಶ್ವ ದೂರಸಂಪರ್ಕ ದಿನ ‘ವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಟುನಿಸ್ ದೇಶದಲ್ಲಿ 2005ರಲ್ಲಿ ನಡೆದ ವಿಶ್ವ ಮಾಹಿತಿ ಸೊಸೈಟಿಯ ಸಮಾವೇಶ ನಡೆದಿತ್ತು. ಸಂಪರ್ಕ ಕ್ಷೇತ್ರದಲ್ಲಿ ಆಗುತ್ತಿದ್ದ ತ್ವರಿತ ಬೆಳವಣಿಗೆಗಳು ಹಾಗೂ ಮಾಹಿತಿ ಕ್ಷೇತ್ರಕ್ಕೆ ಅದರಿಂದ ಸಿಗುತ್ತಿದ್ದ ವಿಫುಲ ತಂತ್ರಜ್ಞಾನ ಪ್ರಯೋಜನಗಳನ್ನು ಗಮನಿಸಿದ ಅದು, ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಗೆ ಕರೆ ನೀಡಿತ್ತು. ಅದರಂತೆ, 2006 ಮಾರ್ಚ್ನಲ್ಲಿ ವಿಶ್ವಸಂಸ್ಥೆ ತನ್ನ ಸಾಮಾನ್ಯ ಅಧಿವೇಶನದಲ್ಲಿ ‘ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನ ‘ ಆಚರಿಸುವ ನಿರ್ಣಯ ಘೋಷಿಸಲಾಗಿತ್ತು.