ಮನೆ ರಾಜ್ಯ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

0

ಬೆಂಗಳೂರು(Bengaluru): ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನ ಪಿಯುಸಿ ಬೋರ್ಡ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಎಸ್​ಎಸ್​ಎಲ್​ಸಿ ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್‌ಗೆ ಫಲಿತಾಂಶ ರವಾನೆಯಾಗಲಿದೆ. ವಿದ್ಯಾರ್ಥಿಗಳು ಮಧ್ಯಾಹ್ನ 12ಕ್ಕೆ http://www.karresults.nic.in ವೆಬ್‌ಸೈಟ್‌ ಮೂಲಕ ಫಲಿತಾಂಶ ವೀಕ್ಷಿಸಬಹುದು.

ಈ ಬಾರಿ 6,84,255 ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಮಾಡಿದ್ದರು.

ಈ ಪೈಕಿ ಬಾಲಕರು-3,46,936, ಬಾಲಕಿಯರು-3,37,319 ಇದ್ದಾರೆ.ಒಟ್ಟಾರೆ ರೆಗ್ಯುಲರ್ ವಿದ್ಯಾರ್ಥಿಗಳು-6,00,519, ಪುನರಾವರ್ತಿತ ವಿದ್ಯಾರ್ಥಿಗಳು-61,808, ಖಾಸಗಿ ವಿದ್ಯಾರ್ಥಿಗಳು-21,928 ಇದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗದಲ್ಲಿ-2,28,167, ವಾಣಿಜ್ಯ ವಿಭಾಗದಲ್ಲಿ-2,45,519 ಹಾಗೂ ವಿಜ್ಞಾನ ವಿಭಾಗದಲ್ಲಿ 2,10,569 ಜನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದಾರೆ.