ನವದೆಹಲಿ: 2022ನೇ ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಇದು ಭಾಗಶಃ ಸೂರ್ಯ ಗ್ರಹಣವಾಗಿದೆ.
ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 12:15 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಪ್ರಾರಂಭವಾಗಲಿದ್ದು, ರಾತ್ರಿ 2:11 ನಿಮಿಷ ಮತ್ತು 2 ಸೆಕೆಂಡುಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈಗ ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣದಲ್ಲಿ ಶೇಕಡಾ 63.9ರಷ್ಟು ಸೂರ್ಯನು ಮರೆಯಾಗುತ್ತಾನೆ. ಭಾರತದ ಕಾಲಮಾನದ ಪ್ರಕಾರ ಮೇ 1ರ ಬೆಳಗ್ಗೆ 4.07 ನಿಮಿಷ 1 ಸೆಕೆಂಡ್ನಲ್ಲಿ ಗ್ರಹಣ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ದಕ್ಷಿಣ ಅಮೆರಿಕದ ದಕ್ಷಿಣ ಭಾಗ, ಉತ್ತರ ಅಮೆರಿಕ, ದಕ್ಷಿಣ ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲಿ ಕಂಡು ಬರುತ್ತದೆ. ಸೂರ್ಯಗ್ರಹಣ ಸಂಭವಿಸುವ ವೇಳೆ ಭಾರತದಲ್ಲಿ ರಾತ್ರಿಯಿರುವ ಕಾರಣದಿಂದ ಸೂರ್ಯಗ್ರಹಣ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.