ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,165 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,171 ರೂ. ನಿಗದಿಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,400 ರೂ. ನಿಗದಿಯಾಗಿದ್ದು, ಇಳಿಮುಖವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,710 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 47,400 ರೂ. (22 ಕ್ಯಾರಟ್) – 51,710 ರೂ. (24 ಕ್ಯಾರಟ್), ಚೆನ್ನೈನಲ್ಲಿ 48,930 ರೂ. (22 ಕ್ಯಾರಟ್) – 53,380 ರೂ. (24 ಕ್ಯಾರಟ್), ನವದೆಹಲಿಯಲ್ಲಿ 47,550 ರೂ. (22 ಕ್ಯಾರಟ್) – 51,870 ರೂ. (24 ಕ್ಯಾರಟ್), ಹೈದರಾಬಾದ್ ನಲ್ಲಿ 47,350 ರೂ. (22 ಕ್ಯಾರಟ್) – 51,650 ರೂ. (24 ಕ್ಯಾರಟ್), ಕೋಲ್ಕತ್ತಾದಲ್ಲಿ 47,350 ರೂ. (22 ಕ್ಯಾರಟ್) – 51,650 ರೂ. (24 ಕ್ಯಾರಟ್)
ಮಂಗಳೂರಿನಲ್ಲಿ 47,400 ರೂ. (22 ಕ್ಯಾರಟ್) – 51,710 ರೂ. (24 ಕ್ಯಾರಟ್), ಮುಂಬೈನಲ್ಲಿ 47,350 ರೂ. (22 ಕ್ಯಾರಟ್) – 51,650 ರೂ. (24 ಕ್ಯಾರಟ್), ಮೈಸೂರಿನಲ್ಲಿ 47,400 ರೂ. (22 ಕ್ಯಾರಟ್) – 51,710 ರೂ. (24 ಕ್ಯಾರಟ್) ಇದೆ.
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 58,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 64,200 ಇದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ. ಚೆನ್ನೈ, ಕೇರಳ, ವಿಜಯವಾಡ, ಮಂಗಳೂರು, ಮೈಸೂರು, ವಿಶಾಖಪಟ್ಟಣಂ, ಕೊಯಂಬತ್ತೂರಿನಲ್ಲಿಯೂ 64,200 ರೂ. ನಿಗದಿಯಾಗಿದೆ.
ಎಂದಿನಂತೆ ಬೆಳಿಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.