ನವದೆಹಲಿ (NewDelhi) : ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,154 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,159 ರೂಪಾಯಿ ನಿಗದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,260 ರೂ., 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,590 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ರೂ. 47,260 (22 ಕ್ಯಾರಟ್) – ರೂ. 51,590 (24 ಕ್ಯಾರಟ್), ಚೆನ್ನೈನಲ್ಲಿ ರೂ. 47,900 (22 ಕ್ಯಾರಟ್) – ರೂ. 52,250 (24 ಕ್ಯಾರಟ್), ನವದೆಹಲಿಯಲ್ಲಿ ರೂ. 47,400 (22 ಕ್ಯಾರಟ್) – ರೂ. 51,690 (24 ಕ್ಯಾರಟ್), ಹೈದರಾಬಾದ್ ನಲ್ಲಿ ರೂ. 47,250 (22 ಕ್ಯಾರಟ್) – ರೂ. 51,540 (24 ಕ್ಯಾರಟ್), ಕೋಲ್ಕತ್ತಾದಲ್ಲಿ ರೂ. 47,250 (22 ಕ್ಯಾರಟ್) – ರೂ. 51,540 (24 ಕ್ಯಾರಟ್), ಮಂಗಳೂರಿನಲ್ಲಿ ರೂ. 47,260 (22 ಕ್ಯಾರಟ್) – ರೂ. 51,590 (24 ಕ್ಯಾರಟ್), ಮುಂಬೈನಲ್ಲಿ ರೂ. 47,250 (22 ಕ್ಯಾರಟ್) – ರೂ. 51,540 (24 ಕ್ಯಾರಟ್), ಮೈಸೂರಿನಲ್ಲಿ ರೂ. 47,260 (22 ಕ್ಯಾರಟ್) – ರೂ. 51,590 (24 ಕ್ಯಾರಟ್) ಇದೆ.
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 54,000 ರೂಪಾಯಿ ದಾಖಲಾಗಿದ್ದು, ಮಂಗಳವಾರದಷ್ಟೇ ಬೆಲೆ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,100 ರೂಪಾಯಿ ಇದ್ದು, ಏರಿಕೆಯಾಗಿದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಕೆಲವೆಡೆ ಇಳಿಕೆ ಕಂಡು ಬಂದಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಂಬತ್ತೂರು, ಮಂಗಳೂರು, ಮೈಸೂರಿನಲ್ಲೂ 60,100 ರೂಪಾಯಿ ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.