ಮನೆ ಯೋಗಾಸನ ತೋಲಾಂಗುಲಾಸನ

ತೋಲಾಂಗುಲಾಸನ

0

ತೋಲಾಂಗುಲಾಸನಕ್ಕೆ ಉತ್ಥಿತ ಪದ್ಮಾಸನ ಎಂಬ ಹೆಸರೂ ಇದೆ.

Join Our Whatsapp Group

ಮಾಡುವ ಕ್ರಮ

1)   ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ನೇರವಾಗಿ, ಅಂಗಾತನಾಗಿ ಮಲಗಿಕೊಳ್ಳಬೇಕು.

2)   ಅನಂತರ ಯೋಗಾಸನ ಕ್ರ. 1ರಲ್ಲಿ ವಿವರಿಸಿರುವಂತೆ ಎಡಪಾದವನ್ನು ಬಲತೊಡೆಯ ಮೇಲೆ ಮತ್ತು ಬಲಪಾದವನ್ನು ಎಡತೊಡೆಯ ಮೇಲೆ ಇಟ್ಟು ಪದ್ಮಾಸನವನ್ನು ಹಾಕಬೇಕು.

3)  ಎರಡೂ ಕೈಗಳನ್ನು ಸೊಂಟದ ಕೆಳಗೆ ಅಂಗೈ ನೆಲವನ್ನು ಸ್ಪರ್ಶಿಸಿರುವಂತೆ ಇಡಬೇಕು ( ಅಥವಾ ಕೈಗಳನ್ನು  ಶರೀರದ ಎರಡೂ ಪಾರ್ಶ್ವಗಳಲ್ಲಿ ನೀಳವಾಗಿ ಚಾಚಿರಲೂಬಹುದು.)

4)   ಅನಂತರ ತಲೆ ಮತ್ತು ಕಾಲುಗಳನ್ನು (ಪದ್ಮಾಸನ ಸಹಿತ) ಒಮ್ಮೆಗೇ ಚಿತ್ರದಲ್ಲಿರುವಂತೆ ನೆಲದಿಂದ ಮೇಲಕ್ಕೆ ಎತ್ತಬೇಕು. ಪ್ರಾರಂಭದಲ್ಲಿ ಕಾಲುಗಳನ್ನೊಮ್ಮೆ ಮತ್ತು  ತಲೆಯನ್ನೊಮ್ಮೆ ನೆಲದಿಂದ ಮೇಲಕ್ಕೆ ಎತ್ತುವ ಅಭ್ಯಾಸ ಮಾಡಬಹುದು. ಆಸನದ ಪೂರ್ಣ ಸ್ಥಿತಿಯಲ್ಲಿ ಸುಮಾರು 30- 40 ಸೆಕೆಂಡುಗಳಿದ್ದು ಆನಂತರ ಕಾಲುಗಳನ್ನು ಬದಲಿಸಬಹುದು.

ಲಾಭಗಳು:

ತೋಲಾಂಗುಲಾಸನದ ಅಭ್ಯಾಸವು ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮವನ್ನು ನೀಡುವುದು. ವಿಶೇಷವಾಗಿ ಎದೆ ಮತ್ತು ಹೊಟ್ಟೆಯಲ್ಲಿನ ಅನೇಕ ತೊಂದರೆಗಳು ಇದರಿಂದ ದೂರವಾಗುವುವು. ಮಲವಿಸರ್ಜನೆಗೆ ಇದು ಸಹಾಯಕ.