ಮಂಡ್ಯ: ಹಿಂದೂಧಾರ್ಮಿಕ ಸಂಸ್ಥೆಗಳು ಮತ್ತುಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ನಾಳೆ ಮೇ ೭ ರಂದು ಶ್ರೀ ನಿಮಿಷಾಂಬ ಅಮ್ಮನವರ ವರ್ಧಂತಿಯನ್ನು ಹಮ್ಮಿಕೊಳ್ಳಲಾಗಿದೆ.
ವರ್ಧಂತಿ ಅಂಗವಾಗಿ ಮೇ ೬ ರಂದುಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ ಕಲಶಸ್ಥಾಪನೆ, ಸಪ್ತಶತೀ ಪಾರಾಯಣ, ಕಲಶ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಗುವುದು. ಮೇ ೭ರಂದು ಬೆಳ್ಳಿಗ್ಗೆ ೮ಗಂಟೆಗೆ ನಿಮಿಷಾಂಬ ಹೋಮ, ೧೦:೩೦ ಗಂಟೆಗೆ ಪೂರ್ಣಾಹುತಿ, ೧೦:೪೫ ಗಂಟೆಗೆ ಕಳಶ ಪೂಜೆ ಮತ್ತು ೧೨೧ ಕಲಶಗಳ ಮಹಾಭಿಷೇಕ ನಂತರಅಷ್ಟದಿಗ್ಬಲಿ, ಮಧ್ಯಾಹ್ನ ೧:೦೦ ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ, ಸಂಜೆ ೬:೩೦ ಗಂಟೆಗೆದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ ಮತ್ತು ಮಹಾಆರತಿ, ಸಂಜೆ ೭:೦೦ ಗಂಟೆಗೆಉತ್ಸವ, ಮಹಾಪೂಜೆ, ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುವುದು.














