ಮನೆ ಪ್ರವಾಸ ನೀವು ಭೇಟಿ ನೀಡಲೇಬೇಕಾದ ಭಾರತದ ಪ್ರಮುಖ ಪಾರಂಪರಿಕ ತಾಣಗಳು

ನೀವು ಭೇಟಿ ನೀಡಲೇಬೇಕಾದ ಭಾರತದ ಪ್ರಮುಖ ಪಾರಂಪರಿಕ ತಾಣಗಳು

0

ಭಾರತದಲ್ಲಿ ಅನೇಕ ಅಪ್ರತಿಮ ಸ್ಮಾರಕಗಳಿವೆ. ನೀವು ಭೇಟಿ ನೀಡಬೇಕಾದ ಟಾಪ್ 6 ಪಾರಂಪರಿಕ ಸ್ಮಾರಕಗಳ ಪಟ್ಟಿ ಇಲ್ಲಿದೆ.

Join Our Whatsapp Group

ತಾಜ್ ಮಹಲ್: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಭಾರತದ ಪ್ರಮುಖ ಮತ್ತು ಸಾಂಪ್ರದಾಯಿಕ ಸ್ಮಾರಕ ತಾಜ್ ಮಹಲ್ ಮೊಘಲ್ ಚಕ್ರವರ್ತಿ ಷಹಜಹನ್ ತನ್ನ ಪ್ರೀತಿಯ ಮಡತಿ ಮುಮ್ತಾಜ್​​ನ ನೆನಪಿಗಾಗಿ ನಿರ್ಮಿಸಿದ ಮಹಲ್ ಆಗಿದೆ. ಇದನ್ನು ಪೊಘಲ್ ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ ಹಾಗೂ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಖಜುರಾಹೊ ಸ್ಮಾರಕಗಳು: ಮಧ್ಯಪ್ರದೇಶದಲ್ಲಿ ನೆಲೆಗೊಂಡಿರುವ ಈ 10ನೇ ಶತಮಾನದ ದೇವಾಲಯಗಳ ಸ್ಮಾರಕಗಳು ದೇವರು, ದೇವತೆಗಳು, ಪ್ರಾಣಿಗಳು, ಸಂಗೀತಗಾರರು ಮತ್ತು ನೃತ್ಯಗಾರರು ಸೇರಿದಂತೆ ಪ್ರಾಚೀನ ಭಾರತೀಯ ಜೀವನ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ಚಿತ್ರಿಸಿರುವ ಸಂಕೀರ್ಣ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಇವುಗಳು ನಾಗರ ಶೈಲಿಯ ವಾಸ್ತುಶಿಲ್ಪಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ ಮತ್ತು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಅಜಂತಾ ಮತ್ತು ಎಲ್ಲೋರಾ ಗುಹೆಗಳು: ಮಹಾರಾಷ್ಟ್ರದಲ್ಲಿ ನೆಲೆಗೊಂಡಿರುವ ಈ ಗುಹೆಗಳು ಕ್ರಿ.ಪೂ 2ನೇ ಶತಮಾನದಷ್ಟು ಹಳೆಯದಾದ ಬಂಡೆಗಳಿಂದ ಕೆತ್ತಲ್ಪಟ್ಟ ದೇವಾಲಯಗಳು ಮತ್ತು ಮಠಗಳಾಗಿವೆ. ಈ ಗುಹೆಗಳು ವಿಸ್ತಾರವಾದ ಹಸ್ತ ಚಿತ್ರಗಳು ಮತ್ತು ಬೌದ್ಧ ಮತ್ತು ಹಿಂದೂ ಪುರಾಣಗಳು ದೃಶ್ಯಗಳನ್ನು ಚಿತ್ರಿಸಿರುವ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಹಾಗೂ ಇವುಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಕುತುಬ್ ಮಿನಾರ್: ಭಾರತದ ರಾಜಧಾನಿ ನವದೆಹಲಿಯಲ್ಲಿ, ನಾವು ವಿಶ್ವದ ಅತಿ ಎತ್ತರದ ರಚನೆಗಳಲ್ಲಿ ಒಂದಾದ ಮತ್ತು ಭಾರತದ ಎರಡನೇ ಅತಿ ಎತ್ತರದ ಮಿನಾರ್​ನನ್ನು ಕಾಣಬಹುದು. ಈ ಪ್ರಸಿದ್ಧ ಮಿನಾರ್ 72.5 ಮೀಟರ್ ಎತ್ತರವಿದೆ. ಮತ್ತು ಇದು ಸುಮಾರು 379 ಮೆಟ್ಟಿಲುಗಳನ್ನು ಹೊಂದಿದೆ. ಇದು ಭಾರತದ ಸಂಕೀರ್ಣ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ. ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾದ ಇದು ಅರೇಬಿಕ್ ಮತ್ತು ಬ್ರಾಹ್ಮಿ ಶಾಸನಗಳಿಂದ ಅಲಂಕರಿಸಲ್ಪಟ್ಟಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ಕುತುಬ್ ಮಿನಾರ್ ನೋಡಲು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಬರುತ್ತಾರೆ.

ಹಂಪಿ ಸ್ಮಾರಕಗಳು: ಕರ್ನಾಟಕದಲ್ಲಿ ನೆಲೆಗೊಂಡಿರುವ ಹಂಪಿಯ ಸ್ಮಾರಕಗಳು ಒಂದು ಕಾಲದಲ್ಲಿ ಭವ್ಯವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಅವಶೇಷಗಳ ವಿಶಾಲ ಸ್ಮಾರಕವಾಗಿದೆ. ಇದು ವಿಸ್ತಾರವಾದ ದೇವಾಲಯಗಳು, ಅರಮನೆಗಳು ಮತ್ತು ಇತರ ರಚನೆಗಳಿಗೆ ಹೆಸರುವಾಸಿಯಾಗಿದೆ. ಇದು ಕೂಡಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕೊನಾರ್ಕ್ ಸೂರ್ಯ ದೇವಾಲಯ: ಕೋನಾರ್ಕ್ ನ ಸೂರ್ಯ ದೇವಾಲಯವು ಅದರ ಕಲ್ಪನೆ ಮತ್ತು ಅದರ ಶಿಲ್ಪಕಲೆ ಅಲಂಕಾರದ ಭವ್ಯವಾದ ನಿರೂಪಣಾ ಶಕ್ತಿಗೆ ಸಾಕ್ಷಿಯಾಗಿದೆ. ಭಾರತದ ಉಪಖಂಡದ ಪೂರ್ವತೀರದಲ್ಲಿ ನೆಲೆಗೊಂಡಿರುವ ಕೋನಾರ್ಕ್ ನ ಈ ಸೂರ್ಯ ದೇವಾಲಯವು ಭಾರತೀಯ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ಹಿಂದಿನ ಲೇಖನನೈತಿಕವಾಗಿ ಹೆಚ್ಚು ಮತದಾನ ಮಾಡಿಸಲು ಕ್ರಮವಹಿಸಿ: ಡಾ. ಕೆ.ವಿ ರಾಜೇಂದ್ರ
ಮುಂದಿನ ಲೇಖನಕನಕಪುರ: ಡಿ.ಕೆ.ಶಿವಕುಮಾರ್ ನಾಮಪತ್ರ ಸ್ವೀಕಾರ