ಮನೆ ರಾಜ್ಯ ಧಾರಾಕಾರ ಮಳೆ: ವಿಮಾನ ಸಂಚಾರದಲ್ಲಿ ವ್ಯತ್ಯಯ

ಧಾರಾಕಾರ ಮಳೆ: ವಿಮಾನ ಸಂಚಾರದಲ್ಲಿ ವ್ಯತ್ಯಯ

0

ಬೆಂಗಳೂರು(Bengaluru): ಧಾರಾಕಾರ ಮಳೆಯ ಪರಿಣಾಮ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯೂ ಧಾರಾಕಾರ ಮಳೆಯಾಗಿರುವ ಪರಿಣಾಮ ಅನೇಕ ವಿಮಾನಗಳ ಹಾರಾಟ ವಿಳಂಬವಾಗಿದೆ.

ಮಾರತಹಳ್ಳಿ–ಸಿಲ್ಕ್ ಬೋರ್ಡ್ ಪ್ರದೇಶದ ಹೊರ ವರ್ತುಲ ರಸ್ತೆ ಜಲಾವೃತವಾಗಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣ ಸಮೀಪದ ಯಮಲೂರಿನ ಬಳಿ ರಸ್ತೆ ಜಲಾವೃತಗೊಂಡಿದ್ದು, ಐಟಿ ಉದ್ಯೋಗಿಗಳು ಜಲಾವೃತ ಕಚೇರಿ ತಲುಪಲು ಟ್ರ್ಯಾಕ್ಟರ್‌ಗಳ ಮೂಲಕ ತೆರಳಿದರು.