ಶಿವಮೊಗ್ಗ: ಶುಕ್ರವಾರ ತುಂಗಾ ಡ್ಯಾಂನ ಎದುರು ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಕೂಡ ಹುಡುಕಾಟ ಮುಂದುವರಿಸುವ ಸಾಧ್ಯತೆ ಇದೆ.
ಗಾಜನೂರು ಜಲಾಶಯದ ಮೇಲೆ ಹೋಗಲು ಅವಕಾಶ ನೀಡಲಾಗಿಲ್ಲ. ಆದರೆ ಚಾನಲ್ ಪಕ್ಕದಲ್ಲಿ ಹೋದರೇ ಡ್ಯಾಂನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು ಅಲ್ಲದೆ, ಅಲ್ಲಿರುವ ಕಾಮಗಾರಿ ಸೇತುವೆಯ ಮೇಲೆ ಪ್ರವಾಸಿಗರು ಓಡಾಡುವುದು ಸಾಮಾನ್ಯ ಸಂಗತಿಯಾಗಿದೆ. ಅಲ್ಲಿಯೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಾಪತ್ತೆಯಾಗಿರುವ ಯುವಕನ್ನು ಮಿಳಘಟ್ಟ ಮೂಲದವನು ಎನ್ನಲಾಗಿದ್ದು, ಹರೀಶ್ ಎಂದು ತಿಳಿದುಬಂದಿದೆ. ಈತನಿಗಾಗಿ ಗಾಜನೂರು ಡ್ಯಾಂ ಗೇಟ್ ನಿಂದ ಮುಂಭಾಗದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಹುಡುಕಾಟ ಮುಂದುವರೆಸುವ ಸಾಧ್ಯತೆ ಇದೆ.














