ಮನೆ ಮನರಂಜನೆ ಟಾಕ್ಸಿಕ್ ಆ್ಯಕ್ಷನ್ ಶುರು – ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

ಟಾಕ್ಸಿಕ್ ಆ್ಯಕ್ಷನ್ ಶುರು – ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

0

ಯಶ್ ನಟಿಸಿ ನಿರ್ಮಿಸುತ್ತಿರುವ ಗ್ಲೋಬಲ್ ಚಿತ್ರ ಟಾಕ್ಸಿಕ್ ತಂಡ ಸಾಹಸ ಚಿತ್ರೀಕರಣವನ್ನು ಪ್ರಾರಂಭಿಸಿದೆ. ವಿಶೇಷ ಅಂದ್ರೆ ವಿಶ್ವಶ್ರೇಷ್ಠ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ‍್ರಿ ಈ ಚಿತ್ರಕ್ಕಾಗಿ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ.

ಮುಂಬೈನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲದಲ್ಲಿ ತಯಾರಾಗ್ತಿರುವ ಚಿತ್ರವಿದು. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಜೆಜೆ ಪೆರ‍್ರಿ ವರ್ಕಿಂಗ್‌ಸ್ಕಿಲ್‌ ರಿವೀಲ್ ಆಗಿದೆ.

ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ‍್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಕೆಲಸ ಮಾಡ್ತಿರೋದೇ ಇಲ್ಲಿನ ವಿಶೇಷ. ಭಾರತೀಯರನ್ನೇ ಬಳಸಿಕೊಂಡು ಹಿಂದಿನ ಸ್ಟಂಟ್ಸ್‌ಗಳಿಗಿಂತ ವಿಭಿನ್ನ ಪ್ರಯೋಗ ಮಾಡಲಿದ್ದಾರಂತೆ ಜೆಜೆ ಪೆರ‍್ರಿ. ಭರ್ತಿ 45 ದಿನಗಳ ಕಾಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.

ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಹಾಗೂ ಯಶ್ ಗೀತು ಮೋಹನ್ ದಾಸ್ ತಂಡ. ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಹಾಗೂ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಟಾಕ್ಸಿಕ್ ಬಿಗ್ ಬಜೆಟ್ ಸಿನಿಮಾ ಆಗಿದೆ.