ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟಾಟಾ ಮೋಟಾರ್ಸ, ಮಹೀಂದ್ರಾ & ಮಹೀಂದ್ರಾ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಮತ್ತು ರೆನೊ ಇಂಡಿಯಾ ತಮ್ಮ ವಾಹನಗಳ ಬೆಲೆಯನ್ನು ಕಡಿತಗೊಳಿಸಿವೆ.
ಇತ್ತೀಚಿಗೆ ನಡೆದ ಜಿಎಸ್ಟಿ (GST) ಮಂಡಳಿ ಸಭೆಯಲ್ಲಿ ಕಾರುಗಳ ಮೇಲಿನ ಜಿಎಸ್ಟಿಯನ್ನು ಪರಿಷ್ಕರಿಸಲಾಗಿತ್ತು. ಈಗ ದರ ಕಡಿತದ ಪ್ರಯೋಜನಗಳನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಾರು ತಯಾರಿಕಾ ಕಂಪನಿಗಳು ಘೋಷಿಸಿವೆ.
ಟಾಟಾ ಕಾರುಗಳ ಬೆಲೆ 75,000 – 1.45 ಲಕ್ಷ ರೂಪಾಯಿವರೆಗೆ ಕಡಿತ – ಟಿಯಾಗೋ – 75,000, ಟಿಗೋರ್ – 80,000, ಆಲ್ಟ್ರೋಜ್ – 1,10,000, ಪಂಚ್ – 85,000, ನೆಕ್ಸಾನ್ – 1,55,000, ಕರ್ವ್ – 65,000, ಹ್ಯಾರಿಯರ್ – 1,40,000, ಸಫಾರಿ – 1,45,000
ಟೊಯೋಟಾ ಕಾರುಗಳ ಬೆಲೆ ₹3.49 ಲಕ್ಷದವರೆಗೆ ಇಳಿಕೆ – ಗ್ಲಾನ್ಜಾ – 85,300, ಟೈಸರ್ – 1,10,000, ಹೈರೈಡರ್ – 65,400, ಇನ್ನೋವಾ ಕ್ರಿಸ್ಟಾ – 1,80,000, ಇನ್ನೋವಾ ಹೈಕ್ರಾಸ್ – 1,15,000, ಫಾರ್ಚುನರ್ – 3,49,000, ಲೆಜೆಂಡರ್ – 3,34,000, ಹೈಲಕ್ಸ್ – 2,52,000, ಕ್ಯಾಮ್ರಿ – 1,01,000, ವೆಲ್ಫೈರ್ – 2,78,000
ಮಹೀಂದ್ರಾ ಕಾರುಗಳ ಬೆಲೆ 75,000 – 1,55,000 ರೂಪಾಯಿವರೆಗೆ ಕಡಿತ – XUV 3XO (ಡೀಸೆಲ್) – 75,000, XUV 3XO (ಪೆಟ್ರೋಲ್) – 80,000, ಸ್ಕಾರ್ಪಿಯೋ N – 1,10,000, XUV 700 – 85,000,
ಥಾರ್ 2WD – 1,55,000, ಥಾರ್ ರಾಕ್ಸ್ – 65,000, ಬೊಲೆರೋ – 1,40,000, ಸ್ಕಾರ್ಪಿಯೋ ಕ್ಲಾಸಿಕ್ – 1,45,000
ರೆನೊ ಕಾರುಗಳ ಬೆಲೆ 96,395 ರೂಪಾಯಿವರೆಗೆ ಇಳಿಕೆ – ಕ್ವಿಡ್ – 55,095, ಟ್ರೈಬರ್ – 80,195, ಕೈಗರ್ – 96,395
ಈ ಎಲ್ಲಾ ಬೆಲೆಗಳು ಸೆ.22ರ ನಂತರ ಜಾರಿಗೆ ಬರಲಿವೆ ಎಂದು ಕಾರು ತಯಾರಿಕಾ ಕಂಪನಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿವೆ. ಹಬ್ಬದ ಋತುವಿನಲ್ಲಿ ಈ ಬೆಲೆ ಕಡಿತದ ಪ್ರಯೋಜನವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಲಿದ್ದಾರೆ ಎಂದು ಕಂಪನಿಗಳು ಆಶಾದಾಯಕವಾಗಿವೆ.















