ಮನೆ ಅಪರಾಧ ಟ್ರ್ಯಾಕ್ಟರ್ ಪಲ್ಪಿ: ನಾಲ್ವರ ಸಾವು

ಟ್ರ್ಯಾಕ್ಟರ್ ಪಲ್ಪಿ: ನಾಲ್ವರ ಸಾವು

0

ಕೊಪ್ಪಳನಿಶ್ಚಿತಾರ್ಥ ಸಮಾರಂಭಕ್ಕಾಗಿ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಪಿಯಾಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯಲ್ಲಿ ನಡೆದಿದೆ. 

25 ಜನರ ತಂಡ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಮೃತರನ್ನು 55 ವರ್ಷದ ಯಮನೂರಪ್ಪ, 50 ವರ್ಷದ ಅಂಬಮ್ಮ, 40 ವರ್ಷದ ಶೇಶಪ್ಪ ಬಂಡಿ ಮತ್ತು 35 ವರ್ಷದ ಯಮನಪ್ಪ ಸಿಂಧನೂರು ಮೃತ ದುರ್ದೈವಿಗಳು. 

ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸ್ ತಂಡ ಭೇಟಿ ಪರಿಶೀಲನೆ ನಡೆಸಿದರು. 

ಹಿಂದಿನ ಲೇಖನಮೂರು ವರ್ಷಗಳ ಒಡಂಬಡಿಕೆಗೆ ಉನ್ನತ ಶಿಕ್ಷಣ ಇಲಾಖೆ, ಬ್ರಿಟಿಷ್ ಕೌನ್ಸಿಲ್ ಅಂಕಿತ
ಮುಂದಿನ ಲೇಖನಚಾರ್‍ ಧಾಮ್ ಯೋಜನೆ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿ ನ್ಯಾ.ಎ.ಕೆ.ಸಿಕ್ರಿ ನೇಮಕ