ಮನೆ ರಾಜ್ಯ ಪಾರಂಪರಿಕ ಟಾಂಗಾ ಸವಾರಿ: ವಿವಿಧ ಪಾರಂಪರಿಕ ಉಡುಗೆಯಲ್ಲಿ ಮಿಂಚಿದ 42 ಜೋಡಿಗಳು

ಪಾರಂಪರಿಕ ಟಾಂಗಾ ಸವಾರಿ: ವಿವಿಧ ಪಾರಂಪರಿಕ ಉಡುಗೆಯಲ್ಲಿ ಮಿಂಚಿದ 42 ಜೋಡಿಗಳು

0

ಮೈಸೂರು(Mysuru): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಪುರಭವನದ (ಟೌನ್ ಹಾಲ್) ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ಟಾಂಗಾ ಸವಾರಿ’ಗೆ ಪಾರಂಪರಿಕ ದಸರಾ ಉಪಸಮಿತಿ ಅಧ್ಯಕ್ಷ ಗೋಪಾಲರಾವ್ ಚಾಲನೆ ನೀಡಿದರು.
ಮೈಸೂರು ಭಾಗದ ವಿವಿಧ ಭೌಗೋಳಿಕ ಪ್ರದೇಶಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೊಡವ ದಿರಿಸು, ಮಹಾರಾಜರ ತೊಡಿಗೆ, ಮೈಸೂರು ಪೇಟಾ ಪಂಚೆ ಹಾಗೂ ಮೈಸೂರು ರೇಷ್ಮೆ ಸೀರೆ ಸೇರಿದಂತೆ ವಿವಿಧ ರೀತಿಯ ಪಾರಂಪರಿಕ ಉಡುಗೆ ತೊಟ್ಟು ಭಾಗವಹಿಸಿದ್ದ ಜೋಡಿಗಳಿಗೆ ಬಾಗಿನ ನೀಡಿ ಸ್ವಾಗತಿಸಲಾಯಿತು. ಪಾರಂಪರಿಕ ಟಾಂಗಾ ಸವಾರಿಯಲ್ಲಿ ಒಟ್ಟು 42 ಜೋಡಿಗಳು ಭಾಗವಹಿಸಿ ದಸರೆ ಸಂದರ್ಭದಲ್ಲಿ ತಮ್ಮ ಈ ದಿನವನ್ನು ಅವೀಸ್ಮರಣೀಯವಾಗಿಸಿಕೊಂಡರು.
ಪಾರAಪರಿಕ ಟಾಂಗಾ ಸವಾರಿಯು ಪುರಭವನದಿಂದ ಪ್ರಾರಂಭವಾಗಿ ಹತ್ತನೆ ಚಾಮರಾಜ ಒಡೆಯರ್ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಛೇರಿ, ಪದ್ಮಾಲಯ, ಮುಡಾ ವೃತ್ತ, ಪ್ರಾಚ್ಯವಿದ್ಯಾಸೌಧ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿಗಳ ಕಛೇರಿ, ಮಹಾರಾಜ ಜೂನಿಯರ್ ಕಾಲೇಜು, ಮೆಟ್ರೊಪೋಲ್ ವೃತ್ತ, ರೈಲ್ವೆ ನಿಲ್ದಾಣ, ಮೈಸೂರು ಮೆಡಿಕಲ್ ಕಾಲೇಜು ಮೂಲಕ ಹಾದು ಹೋಗಿ ದೊಡ್ಡ ಗಡಿಯಾರದ(ಟೌನ್ ಹಾಲ್) ಹತ್ತಿರ ಮುಕ್ತಾಯವಾಯಿತು.
ಇತಿಹಾಸ ಮತ್ತು ಪುರಾತತ್ವ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಪಾರಂಪರಿಕ ಉಡುಗೆಯಲ್ಲಿ ಟಾಂಗಾ ಸವಾರಿಯಲ್ಲಿದ್ದ ದಂಪತಿಗಳಿಗೆ ಪಾರಂಪರಿಕ ಕಟ್ಟಡಗಳು ಕುರಿತು ಮಾಹಿತಿಯನ್ನು ನೀಡಿ ಮೈಸೂರು ಪಾರಂಪರಿಕ ಕಟ್ಟಗಳ ಐತಿಹಾಸಿಕ ಹಿನ್ನೆಯನ್ನು ತಿಳಿಸಿಕೊಟ್ಟರು.
ಬೆಂಗಳೂರಿನ ಹೇಮಲತಾ ಪ್ರಭು ಜೋಡಿ ಮಾತನಾಡಿ, ದಸರಾ ಕಾರ್ಯಮಕ್ಕಾಗಿಯೇ ಮೈಸೂರಿಗೆ ಬಂದಿದ್ದೇವೆ. ಪಾರಂಪರಿಕ ಟಾಂಗಾ ಸವಾರಿಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ ಉಂಟುಮಾಡಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಂಬೂ ಸವಾರಿಯನ್ನು ವೀಕ್ಷಿಸಲು ಕಾತುರರಾಗಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎನ್.ಎಸ್.ರಂಗರಾಜು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ ಹಾಗೂ ಸಿಬ್ಬಂದಿ ಇದ್ದರು.